Dharwad Nomination: ಧಾರವಾಡ ಜಿಲ್ಲೆಯಾದ್ಯಂತ ಒಂದೇ ದಿನ ನಾಮಪತ್ರ ಸಲ್ಲಿಸಿದ 47 ಅಭ್ಯರ್ಥಿಗಳು
ಧಾರವಾಡ,ಏಪ್ರಿಲ್ 20: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಇಂದು (ಏ.19) ನವಲಗುಂದದಲ್ಲಿ 4, ಕುಂದಗೋಳದಲ್ಲಿ 9, ಧಾರವಾಡದಲ್ಲಿ 4, ಹುಬ್ಬಳ್ಳಿ, ಧಾರವಾಡ ಪೂರ್ವ ಕ್ಷೇತ್ರದಲ್ಲಿ 7, ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 8, ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 10 ಮತ್ತು ಕಲಘಟಗಿ ಕ್ಷೇತ್ರದಲ್ಲಿ 5 ಸೇರಿದಂತೆ ಒಟ್ಟು 47 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಲಗುಂದ-69 ವಿಧಾನಸಭಾ ಮತಕ್ಷೇತ್ರಕ್ಕೆ ಮೋಹನ ದೇವರಡ್ಡಿ ಮಾಸ್ತಿ (ಉತ್ತಮ ಪ್ರಜಾಕೀಯ ಪಕ್ಷ), ಕಲ್ಲಪ್ಪ ನಾಗಪ್ಪ ಗಡ್ಡಿ (ಜೆಡಿಎಸ್) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಶಂಕರಪ್ಪ ರುದ್ರಪ್ಪ ಅಂಬಲಿ (ಪಕ್ಷೇತರ ಅಭ್ಯರ್ಥಿ) ಮತ್ತು ಕುಂದಗೋಳ-70 ವಿಧಾನಸಭಾ ಮತಕ್ಷೇತ್ರಕ್ಕೆ ವಿರುಪಾಕ್ಷಗೌಡ ಫಕ್ಕೀರಗೌಡ (ಪಕ್ಷೇತರ ಅಭ್ಯರ್ಥಿ), ಸಿದ್ಧನಗೌಡ ಈಶ್ವರಗೌಡ ಚಿಕ್ಕನಗೌಡ್ರ (ಪಕ್ಷೇತರ),

ಚಾಂದಪೀರ್ ಹಜರೇಸಾಬ್ ಬಂಕಾಪುರ (ಪಕ್ಷೇತರ), ಗಂಗಾಧರ ಶಿವರಡ್ಡಿ ಖಾನಗೌಡ್ರು (ಪಕ್ಷೇತರ), ಗುರುನಾಥ ಡಿ.ಘೋರ್ಪಡೆ (ಪಕ್ಷೇತರ), ಮಲ್ಲಿಕಾರ್ಜುನ ಕಲ್ಲಪ್ಪ ತೋಟಗೇರ (ಪಕ್ಷೇತರ), ಮಂಜುನಾಥಗೌಡ ರಾಯನಗೌಡ ಪಾಟೀಲ (ಭಾ.ಜ.ಪ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರ. ಮಹಮ್ಮದಹನೀಪ್ ರಾಜೇಸಾಬ್ ಕರಡಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.
ಧಾರವಾಡ-71 ವಿಧಾನಸಭಾ ಮತಕ್ಷೇತ್ರಕ್ಕೆ ಪ್ರವೀಣ ಸಂಗನಗೌಡ ಪಾಟೀಲ (ಉತ್ತಮ ಪ್ರಜಾಕೀಯ ಪಕ್ಷ), ಮಂಜುನಾಥ ಲಕ್ಷ್ಮಪ್ಪ ಹಗೇದಾರ (ಜೆಡಿಎಸ್) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಸಿದ್ಧಲಿಂಗೇಶ್ವರ ಬಸವರಾಜ ಬಾಗೂರ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಮತ್ತು ಹುಬ್ಬಳ್ಳಿ ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ವೀರಭದ್ರಪ್ಪ ಹಾಲಹರವಿ (ಜೆಡಿಎಸ್) ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಡಾ.ಎಸ್.ಕ್ರಾಂತಿಕಿರಣ (ಭಾ.ಜ.ಪ.) ಪ್ರಸಾದ ಅಬ್ಬಯ್ಯ (ಭಾ.ರಾ.ಕಾಂ), ವಿಜಯ ಮಹಾದೇವಪ್ಪ ಗುಂಟ್ರಾಳ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ), ಬಸವರಾಜ ಗಂಗಪ್ಪ ಅಮ್ಮಿನಭಾವಿ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ.

ಹುಬ್ಬಳ್ಳಿ, ಧಾರವಾಡ ಸೆಂಟ್ರಲ್-73 ವಿಧಾನಸಭಾ ಮತಕ್ಷೇತ್ರಕ್ಕೆ ವಿಕಾಸ ಬಸವಂತಪ್ಪ ಸೊಪ್ಪಿನ (ಆಮ್ ಆದ್ಮಿ ಪಕ್ಷ), ಜಗದೀಶ ಶಿವಪ್ಪ ಶೆಟ್ಟರ್ (ಭಾ.ರಾ.ಕಾಂ) ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಮಹೇಶ ಚನ್ನವೀರಪ್ಪ ಟೆಂಗಿನಕಾಯಿ (ಭಾ.ಜ.ಪ.), ಸಿದ್ದಲಿಂಗೇಶ್ವರಗೌಡ ಬಸನಗೌಡ ಮಹಾಂತೊಡೆಯರ (ಜೆಡಿಎಸ್), ಶಿವಪುತ್ರ ಶಾಮರಾವ್ ಪಾಟೀಲ (ಕರ್ನಾಟಕ ಜನಸೇವೆ ಪಕ್ಷ), ಮೇಘರಾಜ ಮಾರಪ್ಪ ಹಿರೇಮನಿ (ಲೋಕ ಶಕ್ತಿ) ನಾಮಪತ್ರ ಸಲ್ಲಿಸಿದ್ದಾರೆ.
ಹುಬ್ಬಳ್ಳಿ, ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರಕ್ಕೆ ಬಸವರಾಜ ಶಿವಪ್ಪ ಮಲಕಾರಿ (ಭಾ.ರಾ.ಕಾಂ) ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಸರೋಜಾ ಫಕ್ಕೀರಪ್ಪ ನಾಗೇಂದ್ರಗಡ (ಇಂಡಿಯನ್ ಮೂವ್‍ಮೆಂಟ್ ಪಾರ್ಟಿ), ವಿನೋದ ದಶರಥ ಘೋಡಕೆ (ಪಕ್ಷೇತರ), ಮನ್ನಾರಿ ಮಧುಸೂದನ ವಾದಿರಾಜ (ಆಲ್ ಇಂಡಿಯಾ ಹಿಂದುಸ್ಥಾನ ಕಾಂಗ್ರೆಸ್ ಪಾರ್ಟಿ), ರಾಜೇಸಾಬ್ ಮೌಲಾಸಾಬ್ ದರಗಾರ (ಆಲ್ ಇಂಡಿಯಾ ಮಜಲಿನ್-ಎ-ಇತ್ತೆಹಾದುಲ್ ಮುಸ್ಲೀಮೀನ್ (ಎಐಎಂಐಎಂ), ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಗುರುರಾಜ ಇಷ್ಟಲಿಂಗಪ್ಪ ಹುಣಸಿಮರದ (ಜೆಡಿಎಸ್) ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಲಘಟಗಿ -75 ವಿಧಾನಸಭಾ ಮತಕ್ಷೇತ್ರಕ್ಕೆ ಛಬ್ಬಿ ನಾಗರಾಜ ಗುರುಸಿದ್ದಪ್ಪ (ಭಾ.ಜ.ಪ) ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ, ಸಂತೋಷ ಎಸ್.ಲಾಡ್ (ಭಾ.ರಾ.ಕಾಂ), ಮಂಜುನಾಥ ಗಂಗಪ್ಪ ಜಕ್ಕಣ್ಣವರ (ಆಮ್ ಆದ್ಮಿ ಪಕ್ಷ), ವೀರಪ್ಪ ಬಸಪ್ಪ ಶೀಗಿಗಟ್ಟಿ (ಜೆಡಿಎಸ್) ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.











Click it and Unblock the Notifications