ಹುಬ್ಬಳ್ಳಿಯ ಮಂಟೂರು ಬಳಿ ಹಳಿ ತಪ್ಪಿದ ಗೂಡ್ಸ್ ರೈಲು

Posted By: Ramesh
Subscribe to Oneindia Kannada

ಹುಬ್ಬಳ್ಳಿ, ಜನವರಿ. 18 : ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿರುವ ಮಂಟೂರು ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಗೂಡ್ಸ್ ರೈಲೊಂದರ ನಾಲ್ಕು ಬೋಗಿಗಳು ಹಳಿ ತಪ್ಪಿವೆ.

ಆಂಧ್ರಪ್ರದೇಶದಿಂದ ಅಕ್ಕಿ ಚೀಲಗಳನ್ನು ತುಂಬಿಕೊಂಡು ಹುಬ್ಬಳ್ಳಿಗೆ ಬರುವ ವೇಳೆ ಮಂಟೂರು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ.

4 bogies of goods train derail at Mantur Hubbali

ಈ ಗೂಡ್ಸ್ ಆಂಧ್ರಪ್ರದೇಶದ ವಿಜಯವಾಡದಿಂದ ಅಕ್ಕಿ ಚೀಲಗಳನ್ನು ತಂದು ಎಫ್ ಸಿಐ ಗೋದಾಮಿನಲ್ಲಿ ಇಳಿಸಲು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹಿಮ್ಮುಖವಾಗಿ ಚಲಿಸುತ್ತಿತ್ತು.

ಅಲ್ಲಿ ಯೂ ಟರ್ನ್ ಇರುವುದರಿಂದ ರೈಲು ಭಾರಿ ಭಾರದ ಹಿನ್ನೆಲೆ ಮತ್ತು ರೈಲಿನ ಗಾಲಿಯು ಹಳೆಯದಾಗಿದ್ದರಿಂದ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ತಕ್ಷಣ ಚಾಲಕ ರೈಲನ್ನು ನಿಲ್ಲಿಸಿದ್ದಾನೆ.

ಎಫ್ ಸಿಐ ಗೋದಾಮಿನ ಪ್ರತ್ಯೇಕ ಹಳಿಯ ಮೇಲೆ ಚಲಿಸುತ್ತಿರುವುದರಿಂದ ಇತರೆ ಯಾವುದೇ ರೈಲುಗಳ ಸಂಚಾರಕ್ಕೆ ತೊಂದರೆಯಾಗಿಲ್ಲ. ಮತ್ತು ಯಾವುದೇ ಅನಾಹುತ ಸಂಭವಿಸಿಲ್ಲ.

ಸದ್ಯ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಹಳಿ ತಪ್ಪಿದ ಬೋಗಿಗಳನ್ನು ಮರಳಿ ಹಳಿಗೆ ತರಲು ಶ್ರಮಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಹಳಿ ತಪ್ಪಲು ಕಾರಣ ಏನು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
4 bogies of goods train derail at Mantur near Hubbali On Thursday.
Please Wait while comments are loading...