ರಾಹುಲ್ ಗಾಂಧಿ ಸವಾಲಿಗೆ ತಿರುಗೇಟು ಕೊಟ್ಟ ಯಡಿಯೂರಪ್ಪ!
Recommended Video

ಹಾವೇರಿ, ಆಗಸ್ಟ್ 13 : 'ಫ್ರೆಂಚ್ ಸರ್ಕಾರದ ಜೊತೆಗಿನ ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದ ಕುರಿತು ಚರ್ಚೆಗೆ ಬರುವಂತೆ' ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದರು.
ಹಾವೇರಿಯಲ್ಲಿ ರಾಹುಲ್ ಗಾಂಧಿ ಅವರ ಸವಾಲಿಗೆ ತಿರುಗೇಟು ಕೊಟ್ಟಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಪ್ರಧಾನಿ ಮೋದಿ ಅವರಿಗೆ ಪಂಥಹ್ವಾನ ನೀಡುವ ಮೊದಲು ನಿಮ್ಮ ಪಕ್ಷದ ಗತಿ ಏನಾಗಿದೆ ನೋಡಿಕೊಳ್ಳಿ' ಎಂದು ಟೀಕಿಸಿದ್ದಾರೆ.
'ಜೆಡಿಎಸ್ ಅಧ್ಯಕ್ಷ ದೇವೇಗೌಡರೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದರು.

'ಭಾರತ ಸದ್ಯ ಪ್ರಪಂಚದ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿದೆ. ಕೆಲವೇ ದಿನಗಳಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ. ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಆಗುತ್ತಿದೆ. ಅವರಿಗೆ ಸವಾಲು ಹಾಕುವ ಮುನ್ನ ನಿಮ್ಮ ಪಕ್ಷದ ಸ್ಥಿತಿ ನೋಡಿಕೊಳ್ಳಿ' ಎಂದು ಲೇವಡಿ ಮಾಡಿದರು.
'ಕಳೆದ ಮೂರು ತಿಂಗಳಿನಿಂದ ರಾಜ್ಯ ಸರ್ಕಾರ ಬದುಕಿದೆಯೇ?. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ರೈತರ ಜಮೀನಿಗೆ ಹೋಗಿ ನಾಟಿ ಮಾಡುವುದಲ್ಲ. ಬೀದರ್ ಸೇರಿದಂತೆ ಇತರ ಜಿಲ್ಲೆಗಳ ರೈತರ ಸ್ಥಿತಿಯನ್ನು ನೋಡಿ' ಎಂದು ಮಖ್ಯಮಂತ್ರಿಗಳನ್ನು ಆಗ್ರಹಿಸಿದರು.












Click it and Unblock the Notifications