ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ: ಕೆಪಿಎಸ್‌ಸಿ ಪರೀಕ್ಷಾ ಅಭ್ಯರ್ಥಿಯ ಮಗುವನ್ನು ಆರೈಕೆ ಮಾಡಿದ ಮಹಿಳಾ ಪೇದೆ

|
Google Oneindia Kannada News

ಹಾವೇರಿ, ಡಿಸೆಂಬರ್ 21: ಭಾನುವಾರ (ಡಿ.19)ದಂದು ಕರ್ನಾಟಕ ಲೋಕ ಸೇವಾ ಆಯೋಗದ "ಸಿ' ಗುಂಪಿನ ನೇಮಕಾತಿಗಾಗಿ ಹಾವೇರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದವು.

ಹಾವೇರಿಯ ಎಸ್.ಜೆ.ಎಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಯಾಡಗಿ ಠಾಣೆಯ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿ ಬಂದೋಬಸ್ತ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ವೇಳೆ ಹಸುಗೂಸನ್ನು ಕರೆದುಕೊಂಡು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಗಲಿಬಿಲಿಗೊಂಡಿರುವುದನ್ನು ಗಮನಿಸಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿ ಪರೀಕ್ಷಾ ಅಭ್ಯರ್ಥಿಗೆ ಸಮಾಧಾನ ಮಾಡಿ, ಧೈರ್ಯ ನೀಡಿದರು.

Haveri: Woman Police Constable Taken Care of Candidate Baby Who Writing KPSC Exam

ಜೊತೆಗೆ ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ತಿಳಿಸಿ ಅವರ ಮಗುವನ್ನು ಎತ್ತಿಕೊಂಡು ಪರೀಕ್ಷೆ ಮುಗಿಯುವವರೆಗೂ ತಮ್ಮ ಕರ್ತವ್ಯ ನಿರ್ವಹಿಸುವುದರ ಜೊತೆಗೆ, ಮಗುವಿನ ಕಾಳಜಿಯನ್ನು ಮಾಡಿದರು. ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿಯರವರ ಈ ಮಾನವೀಯ ಕಾಳಜಿಯನ್ನು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಹಸುಗೂಸನ್ನು ಆರೈಕೆ ಮಾಡಿದ್ದಕ್ಕೆ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ನೇತ್ರಾವತಿಯವರಿಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

English summary
Haveri: Byadagi Woman Police Constable Netravathi taken care of candidate baby who appeared for writing KPSC Exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X