Kannada Sahitya Sammelana 2023: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ವಿವರ
ಹಾವೇರಿ, ಜನವರಿ, 05: ಹಾವೇರಿಯಲ್ಲಿ ಜನವರಿ 6ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಏಲಕ್ಕಿ ನಗರಿ ಅಂತಲೇ ಹೆಸರುವಾಸಿಯಾಗಿರುವ ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿವೆ. ಇನ್ನು ಸಾಹಿತ್ಯ ಸಮ್ಮೇಳನ ಪ್ರಾರಂಭಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನಕ್ಕಾಗಿಯೇ ನೈರುತ್ಯ ರೇಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರನ್ನು ಕೈಗೊಂಡಿದೆ. ಹಾಗಾದರೆ ಯಾವ ರೈಲುಗಳು ಯಾವ ಮಾರ್ಗದಿಂದ ಆಗಮಿಸಲಿವೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ನೋಡಿ.

ರೈಲುಗಳು ಸಂಚರಿಸುವ ಮಾರ್ಗಗಗಳ ವಿವರ
ನಂಬರ್ 20653ರ ರೈಲು ಕೆ.ಎಸ್ ಆರ್ ಬೆಂಗಳೂರು-ಬೆಳಗಾವಿ ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ಬೆಳಗ್ಗೆ 2:28ಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ. ನಂಬರ್ 20654ರ ರೈಲು ಬೆಳಗಾವಿ-ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ರಾತ್ರಿ 11:50ಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ.
ರೈಲು ಹಾವೇರಿಗೆ ತಲುಪುವ ಸಮಯ
ನಂಬರ್ 22685ರ ರೈಲು ಜನವರಿ 7ಕ್ಕೆ ಮಾತ್ರ ಯಶವಂತಪುರ (ಬೆಂಗಳೂರು)-ಚಂದಿಗಡ ಮಾರ್ಗದ ರೈಲು ಸಾಯಂಕಾಲ7:18ಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ. ನಂಬರ್ 22686 ಜನವರಿ 7 ರಂದು ಮಾತ್ರ ಚಂದಿಗಡ-ಯಶವಂತಪುರ (ಬೆಂಗಳೂರು) ಮಾರ್ಗದ ರೈಲು ರಾತ್ರಿ 11:18ಕ್ಕೆ ಹಾವೇರಿ ತಲುಪಲಿದೆ. ರೈಲು ಸಂಖ್ಯೆ 22498 ತಿರುಚನಪಲ್ಲಿ-ಗಂಗಾನಗರ ರೈಲು ಮಾರ್ಗವಾಗಿ ಜನವರಿ 6 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಸಾಯಂಕಾಲ 5:58ಕ್ಕೆ ಹಾವೇರಿಗೆ ತಲುಪಲಿದೆ.

ಇನ್ನು ರೈಲು ಸಂಖ್ಯೆ 16587 ಯಶವಂತಪುರ (ಬೆಂಗಳೂರು)-ಬಿಕನೇರ ಮಾರ್ಗವಾಗಿ ಜನವರಿ 6 ರಿಂದ 8ರವರೆಗೆ ಮಾತ್ರ ಸಂಚರಿಸಲಿದೆ. ಈ ರೈಲು ಸಾಯಂಕಾಲ 4:50ಕ್ಕೆ ಹಾವೇರಿ ರೈಲು ನಿಲ್ದಾಣ ತಲುಪಲಿದೆ. ಹಾಗೆಯೇ ರೈಲು ಸಂಖ್ಯೆ 14806 ಬರ್ಮಾರ-ಯಶವಂತಪುರ (ಬೆಂಗಳೂರು) ಮಾರ್ಗವಾಗಿ ರೈಲು ಜನವರಿ 5 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಬೆಳಗ್ಗೆ 9:30 ನಿಮಿಷಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ ಎನ್ನುವ ಮಾಹಿತಿಯನ್ನು ನೀಡಲಾಗಿದೆ.












Click it and Unblock the Notifications