Shiggoan: ನಾನು ಬ್ಯಾಟ್ಸಮನ್ ಸೆಂಚುರಿ ಹೊಡೆದೇ ಹೊಡೆಯುತ್ತೇನೆ: ಎದುರಾಳಿಗೆ ಭರತ್ ಬೊಮ್ಮಾಯಿ ಟಕ್ಕರ್
ಹಾವೇರಿ, ನವೆಂಬರ್ 03: ಜಿಲ್ಲೆ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದೆ. ಹಣ, ಹೆಂಡದ ಹೊಳೆ ಹರಿಯಲಿದೆ ಎಂದು ಉಭಯ ಪಕ್ಷದ ನಾಯಕರ ಆರೋಪಿಸಿದ್ದಾರೆ. ಈ ಮಧ್ಯೆ ನಾವೇ ಗೆಲ್ಲಲಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲುವ ಉತ್ಸಾಹದಲ್ಲಿದ್ದು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಗೆ ಟಕ್ಕರ್ ನೀಡಿದ್ದಾರೆ.
ಭಾನುವಾರ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತವರುಮೆಳ್ಳಳ್ಳಿ, ಕುಣಿ ಮರಳಿಹಳ್ಳಿ, ಅಲಸೂರು, ಹೊಸ ಅಲಸೂರು ಗ್ರಾಮಗಳಲ್ಲಿ ಮತ ಯಾಚನೆ ಮಾಡಿದರು. ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.

ನಾನು ಬ್ಯಾಟ್ಸಮನ್, ಸೆಂಚುರಿ ಹೊಡೆದೇ ಹೊಡೆಯುತ್ತೇನೆ ಎಂದಿದ್ದಾರೆ. ಶಿಗ್ಗಾವಿ ಉಪ ಚುನಾವಣೆ ಅಖಾಡವನ್ನು ಕ್ರಿಕೇಟ್ ಗೆ ಹೋಲಿಸಿ ಮಾತನಾಡಿದ ಭರತ್ ಬೊಮ್ಮಾಯಿ ಅವರು, ನಾನು ಸೆಂಚುರಿ ಹೊಡೆದೇ ಹೊಡೆಯುತ್ತೇನೆ.
ನಾವು ಟಿ ಟ್ವಿಂಟಿ , ಒನ್ ಡೇ ಆಡುವುದಿಲ್ಲ, ಟೆಸ್ಟ್ ಮ್ಯಾಚ್ ಆಡುತ್ತೇವೆ. ನಮ್ಮದೇನಿದ್ದರೂ ಲಾಂಗ್ ಇನ್ನಿಂಗ್ಸ್ ಎಂದು ಹೇಳಿದರು. ಹೀಗೆ ಹೇಳುವ ಮೂಲಕ ಸರಾಗವಾಗಿ ಅತ್ಯಧಿಕ ಮತಗಳು ತಮಗೆ ಸಿಗಲಿವೆ. ಪಕ್ಷದಲ್ಲಿ ಬಿಜೆಪಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಚಾರಕ್ಕೆ ಹೋದಾಗ ಯುವಕರ ಬೆಂಬಲ ವ್ಯಾಪಕವಾಗಿ ಸಿಗುತ್ತಿದೆ. ಯುವಕರೆಲ್ಲಾ ಉತ್ತಮ ಪ್ತತಿಕ್ರಿಯೆ ನೀಡುತ್ತಿದ್ದಾರೆ
ನೂರಾರು ಯುವಕರು ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನವರು ಈಗ ಪ್ರಚಾರಕ್ಕೆ ಓಡಾಡುತ್ತಿರುವುದು ನಮ್ಮ ತಂದೆ ಮಾಡಿರುವ ಸಿಸಿ ರಸ್ತೆಗಳಲ್ಲೇ ಎಂದು ಹೇಳಿದರು.
ಜಿಲ್ಲೆಯ ರೈತರಿಗೆ ನೀಡಿದ ನೊಟೀಸ್ ವಾಪಸ್ಗೆ ಆಗ್ರಹ
ಮಾಜಿ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿಯೇ ಸರ್ಕಾರ ವಕ್ಪ್ ಹೆಸರಿನಲ್ಲಿ ಭೂಮಿ ಲಪಟಾಯಿಸಲು ಹೊಂಚು ಹಾಕಿದೆ. ಈ ಸಂಬಂಧ ಜಿಲ್ಲೆಯ ನೂರಾರು ರೈತರ ಖಾತೆಗಳ ಬದಲಾವಣೆಗೆ ಜಿಲ್ಲಾಧಿಕಾರಿ ಎಸಿ, ತಹಸೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ. ತಕ್ಷಣ ಅದನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಜಿಲ್ಲಾಧಿಕಾರಿ ಜಿಲ್ಲೆಯ ಶಿಗ್ಗಾವಿ, ಸವಣೂರು, ಹಿರೆಕೆರೂರು, ಬ್ಯಾಡಗಿ, ಹಾನಗಲ್, ರಟ್ಟಿಹಳ್ಳಿ ತಾಲೂಕು ತಹಸೀಲ್ದಾಗಳು 23-8-2024 ರಂದು ರೈತರಿಗೆ ನೊಟಿಸ್ ಕೊಟ್ಟಿದ್ದಾರೆ. ಇವರು ಕೇವಲ ಸರ್ವೆ ನಂಬರ್ ಕೊಟ್ಟಿದ್ದಾರೆ. ಆ ಸರ್ವೆ ನಂಬರ್ ನಲ್ಲಿ ಯಾರಿದ್ದಾರೆ ಗೊತ್ತಿಲ್ಲ.
ಗೆಜೆಟ್ ಯಾರ ಹೆಸರಿನಲ್ಲಿ ಇರಬೇಕೆಂದು ಮುಸ್ಲೀ ಜಮಾತ್ ಮುಗಳಿಕಟ್ಟಿ, ಹುನಗುಂದ, ಬನ್ನೂರ, ಬೆಳಲಕೊಪ್ಪ ಈ ಥರ ನೊಟಿಸ್ ಕೊಟ್ಟಿದ್ದಾರೆ. ಇದರಿಂದ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ ಶಾಂತಿ ಸ ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ. ಯಾವುದಾದರೂ ಆದೇಶ ಮಾಡುವ ಮೊದಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತುಷ್ಟೀಕರಣ ರಾಜಕಾರಣ ಬೇಡ ಎಂದು ಒತ್ತಾಯಿಸಿದರು.












Click it and Unblock the Notifications