ರಾಣೆಬೆನ್ನೂರು: "ಮೈಸೂರ ಹುಲಿ" ಎಂದೇ ಪ್ರಸಿದ್ಧಿಯಾಗಿದ್ದ ಹೋರಿ ಇನ್ನಿಲ್ಲ, ಮುಗಿಲು ಮುಟ್ಟಿದ ಆಕ್ರಂದನ
ರಾಣೆಬೆನ್ನೂರಿನಲ್ಲಿ ಮೈಸೂರು ಹುಲಿ ಎಂದೇ ಪ್ರಖ್ಯಾತಿ ಪಡೆದಿದ್ದ ಹೋರಿಯೊಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದ್ದಾರೆ.
ಹಾವೇರಿ, ಜನವರಿ, 29: ಮೈಸೂರು ಹುಲಿ ಎಂದೇ ಪ್ರಖ್ಯಾತಿ ಪಡೆದಿದ್ದ ಹೋರಿಯೊಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ಈ ಕೊಬ್ಬರಿ ಹೋರಿಯನ್ನು ಪೈಲ್ವಾನರ ಮಕ್ಕಳು ಸಾಕಿದ್ದರು. ಇದು ಅಖಾಡಕ್ಕೆ ಇಳಿದರೆ ಸಾಕು ಮೈದಾನದಲ್ಲಿದ್ದ ಅಭಿಮಾನಿಗಳು ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. 12 ವರ್ಷಗಳಲ್ಲಿ ಯಾರಿಂದಲೂ ಈ ಹೋರಿಯ ಮೈ ಮುಟ್ಟವ ಸಾಹಸಕ್ಕೂ ಮುಂದಾಗಿರಲಿಲ್ಲ. ಇದೀಗ ಅದೇ "ಮೈಸೂರು ಹುಲಿ" ಅಂತಲೇ ಹೆಸರುವಾಸಿಯಾಗಿದ್ದ ಕೊಬ್ಬರಿ ಹೋರಿ ಅಪಾರ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದೆ.

ಕಣ್ಣೀರಿನ ವಿದಾಯ ಹೇಳಿದ ಅಭಿಮಾನಿಗಳು
"ಮೈಸೂರು ಹುಲಿ"ಯನ್ನು ನೆನೆದು ಯುವಕರು ಕಣ್ಣೀರಿಡುತ್ತಿದ್ದಾರೆ. ಅಯ್ಯೋ ದೇವಾ ನಿನ್ನ ಆಟ ನೀಲಿಸಿದೆಯಲ್ಲ ಎಂದು ಯುವಕರು ಗೋಳು ತೋಡಿಕೊಂಡಿದ್ದಾರೆ. ಈ ಎಲ್ಲ ಮನಕಲಕುವ ದೃಶ್ಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಕಂಡು ಬಂದಿದೆ. ಮೈಸೂರಿ ಹುಲಿ ಅಂದರೆ ಸಾಕು ಒಂದು ಭಾರಿ ಅಖಾಡಕ್ಕಿಳಿದರೆ ಸ್ಪರ್ಧೆಯಲ್ಲಿ ಬಹುಮಾನ ಇಲ್ಲದೆ ವಾಪಸ್ ಬಂದಿರುವ ಉದಾಹರಣೆಯೇ ಇಲ್ಲವಂತೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೋರಿ ಬೇದರಿಸುವ ಸ್ಪರ್ಧೆಗೆ ಅಭಿಮಾನಿಗಳ ಸಾಗರವೇ ಇದೆ. ಉತ್ತರ ಕರ್ನಾಟದಲ್ಲಿ ಹೋರಿ ಮಾಲೀಕರು ಅಂದರೆ ಅದು ಎಲ್ಲಿಲ್ಲದ ಗೌರವ.

ಮೈಸೂರು ಹುಲಿ ಎಂದು ಖ್ಯಾತಿಯಾಗಿದ್ದ ಹೋರಿ
ಅದರಲ್ಲೂ ಮೈಸೂರು ಹುಲಿ ಎಂದು ಖ್ಯಾತಿ ಪಡೆದ ಪೈಲ್ವಾನ್ ನಂಜಪ್ಪನ ತಮ್ಮ ಕೂಡ ಪೈಲ್ವಾನ್ ಕರಿಬಸಪ್ಪ ಗೂಳಣ್ಣನವರ ಪೈಲ್ವಾನರಾಗಿದ್ದಾರೆ. ಈ ಪೈಲ್ವಾನ್ ಮಕ್ಕಳೂ ಹೈನುಗಾರಿಕೆ ಜೊತೆಗೆ ದೊಡ್ಡಪ್ಪ ಹೆಸರಿಟ್ಟ ಮೈಸೂರು ಹುಲಿಯನ್ನೇ ಮನೆ ಮಗನಂತೆ ಸಾಕಿದ್ದರು. ಈ ಹೋರಿ ರಾಜ್ಯದ ನಾನಾ ಭಾಗಗಳಲ್ಲಿ ಸ್ಪರ್ಧಿಸಿ ಹಲವು ಬಹುಮಾನಗಳನ್ನು ಜಯಸಿ ಪೈಲ್ವಾನರ ಹೆಸರನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿತ್ತು. ಆದರೆ ಇದೀಗ ಸೋಲಿಲ್ಲದ ಸರದಾರ ಮೈಸೂರು ಹುಲಿ ಎಂಬ ಹೋರಿ ಅಪಾರ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪಯಣ ಬೇಳೆಸಿದ್ದಾನೆಂದು ಹೇಳುತ್ತಾ ಮಾಲೀಕ ಶಿವಣ್ಣ ಭಾವುಕರಾದರು.
ಹೋರಿ ಅಭಿಮಾನಿ ಅಂದರೆ ಅದೊಂದು ಶೌರ್ಯ ಅಂತಾ ನಂಬಿರುವ ಕುಟುಂಬ ಇದು. ರಾಜ್ಯದ ನಾನಾ ಭಾಗದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ "ಮೈಸೂರ ಹುಲಿ" ಹೋರಿಯ ಹವಾ ಜೋರಾಗಿಯೇ ಇತ್ತು. ಇನ್ನು ಚಿಕ್ಕ ವಯಸ್ಸಿನಿಂದ ಮೈಸೂರು ಹುಲಿ ಎಂಬ ಖ್ಯಾತಿಯ ಹೋರಿಯ ಪಾಲನೆ ಮಾಡುತ್ತಾ ನಿಂಗರಾಜ ಈ ಹೋರಿಯ ಅಭಿಮಾನಿಯಾಗಿದ್ದ. ಇನ್ನು ಜನರು ನಿಂಗಪ್ಪನನ್ನು ಹೋರಿಯ ಹೆಸರಿನಿಂದ ಕೂಗುತ್ತಿದ್ದರು. ಮಾಲೀಕರ ಅಳಿಯ ನಿಂಗರಾಜ ಹೋರಿಯ ಹೆಸರಿಂದಲೇ ಫೇಮಸ್ ಆಗಿದ್ದ. ಇನ್ನು ಇದರ ಜೊತೆ ನಿತ್ಯ ಒಡನಾಟ ಹೊಂದಿದ್ದ ನಿಂಗಪ್ಪ ಕಣ್ಣೀರಿಟ್ಟಿದ್ದಾರೆ. ಹಾಗೆಯೇ ಬಾರದ ಲೋಕಕ್ಕೆ ಸಾಗಿದ ಹೋರಿಗೆ ಹಾರ ಹಾಕಿ ಅಭಿಮಾನಿಗಳು ಕಂಬನಿ ಮಿಡಿದರು.Mysuru huli famed ox death in Ranebennur of Haveri district,












Click it and Unblock the Notifications