ರಾಹುಲ್‌ಗಾಂಧಿಗೆ ಆರ್‌ಎಸ್‌ಎಸ್‌ ಬಗ್ಗೆ ಮಾಹಿತಿ ಇಲ್ಲ: ಸಿಎಂ ಬೊಮ್ಮಾಯಿ

ಶಿಗ್ಗಾಂವಿ, ಡಿಸೆಂಬರ್ 05: ರಾಹುಲ್ ಗಾಂಧಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸುದ್ದಿಗಾರರ ಪ್ರಶ್ನಿಸಿದ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಈ ಮಧ್ಯೆ ಸೀತಾ ರಾಮ್ ಮತ್ತು ಶ್ರೀರಾಮ್ ಜಯಕಾರ ವಿಚಾರವಾಗಿ ಬೊಮ್ಮಾಯಿ ಮಾತನಾಡಿದರು. ಆರ್ಎಸ್ಎಸ್ ನಲ್ಲಿ ಮಹಿಳೆಯರದ್ದೇ ಆದ ದುರ್ಗಾ ಸೇನೆ ಇದೆ. ನಾವು ಭಾರತ ಮಾತೆಗೆ ಜೈ ಎನ್ನುತ್ತೇವೆ. ಮಾತೆ ಎಂದರೆ ಹೆಣ್ಣು. ಭಾರತ್ ಮಾತಾ ಕಿ ಜೈ ಎಂದೇ ನಾವು ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತೇವೆ. ಇದನ್ನು ಆರ್ಎಸ್ಎಸ್ ಬಗ್ಗೆ ಮಾಹಿತಿ ಇಲ್ಲದ ರಾಹುಲ್ ಗಾಂಧಿಗೆ ತಿಳಿಸಬೇಕಿದೆ ಎಂದರು.

ನನ್ನನ್ನು ಹೆಚ್ಚು ಪ್ರೀತಿಸುವ ನನ್ನ ಕ್ಷೇತ್ರದ ಜನರಿಗೆ ಕ್ಷೇತ್ರಕ್ಕೆ ಬಂದಾಗ ವಿಶೇಷ ಅವಕಾಶ ಕೊಡುವ ಅಗತ್ಯವಿದೆ. ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Rahul Gandhi He Dont Know About RSS CM Basavaraj Bommai Said

ಕೇವಲ ಶಿಗ್ಗಾವಿ ಮಾತ್ರವಲ್ಲದೇ ಬೆಳಗಾವಿ, ಬಳ್ಳಾರಿ, ಕುಂದಗೋಳ, ಹಾನಗಲ್ ಜನತೆ ಸಹ ಇಲ್ಲಿಗೆ ಬಂದು ಅವಹಾಲು ಸಲ್ಲಿಸುತ್ತಾರೆ. ಜನತಾ ದರ್ಶನದಲ್ಲಿ ಬಹುತೇಕ ಮಂದಿ ಉದ್ಯೋಗ ಮತ್ತು ಮನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಊರಿನ ಅಭಿವೃದ್ಧಿಯ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಜನರ ಅವಹಾಲುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಕೆಲಸ ಆಗುತ್ತದೆ ಎಂದು ತಿಳಿಸಿದರು.

ಪ್ರಚಾರದ ಅಗತ್ಯ ಇಲ್ಲ

ಕೆಲವರು ವಾರಕ್ಕೊಮೆ ಅಥವಾ 15 ದಿನಕ್ಕೊಮ್ಮೆ ಜನತಾ ದರ್ಶನ ಮಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದರು. ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ದಿನವೂ ಜನರ ಅವಹಾಲುಗಳನ್ನು ಕೇಳಿ ಪರಿಹಾರವನ್ನು ಕೊಡುವ ಕೆಲಸವಾಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಕ್ಷೇತ್ರದ ಜೊತೆಗೆ ಇಡೀ ರಾಜ್ಯದ ಜವಾಬ್ದಾರಿಯೂ ನನ್ನ ಮೇಲಿದೆ. ಹಾಗಾಗಿ ಸಮಯ ಹೊಂದಿಸಿಕೊಂಡು ಕ್ಷೇತ್ರದಲ್ಲಿ ಸಮಯ ಕಳೆಯಲು ಪ್ರಯತ್ನ ಮಾಡುತ್ತೇನೆ ಎಂದು ಬೊಮ್ಮಾಯಿ ಕ್ಷೇತ್ರದ ಜನರ ಕುರಿತ ಕಾಳಜಿ ವಿವರಿಸಿದರು.

Rahul Gandhi He Dont Know About RSS CM Basavaraj Bommai Said

ಖುದ್ದು ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಜನತಾ ದರ್ಶನದಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+