ಹಾವೇರಿ: ನದಿಯಲ್ಲಿ ಕೊಚ್ಚಿಹೋದ ಲಾರಿ, ಇಬ್ಬರು ನೀರುಪಾಲು, ಓರ್ವ ಪಾರು
ಬೆಂಗಳೂರು, ಜು.13: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದೆ, ದಕ್ಷಿಣ, ಒಳನಾಡು, ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಕಳೆದ ಎರಡು ದಿನಗಳಿಂದು ಹಾವೇರಿಯಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ವರದಾ ನದಿ ತುಂಬಿ ಹರಿಯುತ್ತಿದೆ, ನದಿ ನೀರಿಗೆ ಲಾರಿ ಕೊಚ್ಚಿ ಹೋಗಿದ್ದು ಲಾರಿಯಲ್ಲಿದ್ದ ಮೂವರ ಪೈಕಿ ಇಬ್ಬರು ನೀರು ಪಾಲಾಗಿದ್ದು, ಓರ್ವ ಪಾರಾದ ಘಟನೆ ನಡೆದಿದೆ.

ಹಾವೇರಿ ಬಳಿ ವರದಾ ನದಿಯ ನಾಗನೂರು ಸೇತುವೆ ಮುಳುಗಡೆಯಾಗಿದ್ದು, ನೀರು ತುಂಬಿ ಹರಿಯುತ್ತಿದೆ, ದುರಾದೃಷ್ಟವೆಂಬಂತೆ ಲಾರಿ ಸೇತುವೆ ಮೇಲೆ ಚಲಿಸಿದೆ, ಇಬ್ಬರು ನೀರಿನಲ್ಲಿ ತೇಲಿ ಹೋಗಿದ್ದಾರೆ.

ಬಸವಾರಜ ಸೋಮಣ್ಣವರ(29) ಲಕ್ಷ್ಮಣ ದೊಡ್ಡತಳವಾರ(35) ಚಾಲಕ ನೀರು ಪಾಲು, ಗುಡ್ಡಪ್ಪ ಸೋಮಣ್ಣವರ (25) ಪಾರಾಗಿದ್ದಾರೆ. ಹಾವೇರಿಯಿಂದ ಹಾನ್‌ಗಲ್‌ನತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications