Waqf: ಮುಸ್ಲಿಮರ ಮತ ಕ್ರೋಢೀಕರಣಕ್ಕಾಗಿ ವಕ್ಫ್ ಆಸ್ತಿ ಮಾಡುತ್ತಿದ್ದಾರೆ: ತೇಜಸ್ವಿ ಸೂರ್ಯ
ಹಾವೇರಿ, ನವೆಂಬರ್ 08: ಶಿಗ್ಗಾವಿ ಉಪ ಚುನಾವಣೆಯಲ್ಲಿ ಗೆಲ್ಲಲು, ಮುಸ್ಲೀಮರ ಓಟು ಕ್ರೋಢಿಕರಿಸಲು ರಾಜ್ಯ ಸರ್ಕಾರ ರೈತರ ಜಮೀನನ್ನು ವಕ್ತ್ ಆಸ್ತಿ ಮಾಡಲು ಹೊರಟಿದೆ. ರಾಜ್ಯ ಸರ್ಕಾರ ಕೃಪಾ ಪೋಷಿತ ವಕ್ಪ್ ಆಟೋಟೋಪ ಇಂದು ಚರಮ ಸ್ಥಿತಿಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ವಕ್ಟ್ ಬೋರ್ಡ್ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಗುಡುಗಿದರು.
ಶಿಗ್ಗಾವಿ ತಾಲೂಕು ತಡಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಹಾವೇರಿಯ ಜಿಲ್ಲೆಯ ರೈತರು ಜಂಟಿ ಸದನ ಸಮಿತಿ ಅದ್ಯಕ್ಷರ ಎದುರಿಗೆ ನಮ್ಮ ಮನೆ ಮಗನ ಹೆಸರಿಗೆ ಇದ್ದ 4 ಎಕರೆ ಜಮೀನಿಗೆ ವಕ್ಪ್ ಅಂತ ಸೇರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದ ಅವರು ಆಕ್ರೋಶ ಹೊರ ಹಾಕಿದರು.

ಆ ವರದಿ ಮಾಧ್ಯಮದವರು ಬಿತ್ತಿರಿಸಿದ್ದೀರಿ, ರೈತರನ್ನು ಯಾಕೆ ಬಲಿ ಕೊಡುತ್ತಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್ ಐ ಆರ್ ಹಾಕಿಸಿದ್ದಾರೆ ಎಂದು ದೂರಿದರು.
ಪ್ರಶ್ನಿಸಿದವರ ವಿರುದ್ಧವೇ ಎಫ್‌ಐಆರ್
ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ವಕ್ಪ್ ನಿಂದ ಅಲ್ಲ, ಬೇರೆ ಯಾವುದೋ ಕಾರಣಕ್ಕೆ ಅಂತ ಬಲವಂತವಾಗಿ ಪೊಲೀಸರ ಕೈಲಿ ಹೇಳಿಸಿದ್ದಾರೆ. ಏನು ಸಾಧಿಸಲು ಹೊರಟಿದ್ದೀರಿ ಸರ್ಕಾರದವರು? ವಾಕ್ ಸ್ವಾತಂತ್ರ್ಯ ಅಂತ ಮಾತನಾಡುವವರು? ಸುದ್ದಿ ಬಿತ್ತರಿಸಿದ್ದಕ್ಕೆ ಎಫ್ ಐ ಆರ್ ಹಾಕಿದ್ದೀರಿ. ಆತ್ಮಹತ್ಯೆ ಮಾಡಿಕೊಂಡ ರೈತನ ತಂದೆ ಎಲ್ಲಾ ಟಿವಿಗೂ ಮಾತನಾಡಿದ್ದಾರೆ.

ನಮ್ಮ ಮಗನ ಪಹಣಿಯಲ್ಲಿ ವಕ್ಪ್ ಅಂತ ಸೇಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂತ ಅವರ ತಂದೆ ಹೇಳಿದರು. ಆ ರೈತ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಅಂತ ಅವರ ತಂದೆಗೂ ಹೆಚ್ಚು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
300 ಎಕರೆ ಜಮೀನು ತನ್ನದು ಎನ್ನುತ್ತಿರುವ ವಕ್ಪ್ ಬೋರ್ಡ್
ಸಂತೋಷ್ ಶಿವಪ್ಪ ಕೌದಿ ಎನ್ನುವರ ಪಹಣಿಯಲ್ಲಿ ಮುಸ್ಲಿಂ ಸಮಾಜದವರು ಶವ ಸಂಸ್ಕಾರಕ್ಕೆ ಹಾಗೂ ಪ್ರಾರ್ಥನೆ ಸಲ್ಲಿಸಲು ಅಂತ ಕಾಲಂ ನಂಬರ್ 11ರಲ್ಲಿ ಸೇರಿಸಿದ್ದಾರೆ. ಇದೇನು ನಡೆದಿದೆ? ಯಾವ ಊರಿಗೆ ಹೋದರೂ ಇದೇ ಆಗಿದೆ
ನೂರಾರು ವರ್ಷ ಉಳುಮೆ ಮಾಡಿಕೊಂಡು ಇದ್ದ ಜಾಗಕ್ಕೆ ವಕ್ಪ್ ಅಂತ ಮಾಡಿದ್ದಾರೆ. ಇವರ ಜಮೀನು ಎನ್ ಎ ಕೆಜೆಪಿ ಕೂಡಾ ಆಗಿದೆ. ಒಂದೊಂದು ತಾಲೂಕಿನಲ್ಲಿ 250- 300 ಎಕರೆ ಜಮೀನು ವಕ್ಪ್ ಅಂತ ಕ್ಲೇಮ್ ಮಾಡುತ್ತಿದ್ದಾರೆ. ಬಂದು ಭೇಟಿ ಆಗುತ್ತೇವೆ ಎಂದು ಕೋಲಾರದಿಂದ ರೈತರು ಫೋನ್ ಮಾಡಿದ್ದರು.
ನಡೆಯುತ್ತಿರುವ ಅಕ್ರಮ ಪ್ರಶ್ನಿಸಿದರೆ ಎಫ್ ಐ ಆರ್ ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ಉಪಚುನಾವಣೆಗಳಲ್ಲಿ ಮಸಲ್ಮಾನರ ಮತ ಕ್ರೂಡಿಕರಣ ಮಾಡಬೇಕು. ಈ ಉಪ ಚುನಾವಣೆಗಳಲ್ಲಿ ಗೆಲ್ಲಬೇಕು ಎಂಬ ಒಂದೇ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಸರ್ಕಾರ ವಕ್ಪ್ ಕಾಯಿದೆಗೆ ತಿದ್ದುಪಡಿ ತಂದು ವಕ್ಪ್ ಪರಮಾಧಿಕಾರ ಮೊಟಕುಗೊಳಿಸುತ್ತದೆ. ಅದಕ್ಕಿಂತ ಮುಂಚೆ ಪ್ರತಿ ಹಳ್ಳಿ, ತಾಲೂಕುಗಳಲ್ಲಿ ನೂರಾರು ಎಕರೆ ಜಮೀನು ಮುಸಲ್ಮಾನರಿಗೆ ಕೊಟ್ಟಬಿಡಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಕ್ಪ್ ಅಂತ ಎಫ್ ಐ ಆರ್ ನಲ್ಲಿ ಇವರು ಉಲ್ಲೇಖಿಸಿರಲ್ಲ. ಆದರೆ ಪಹಣಿಯಲ್ಲಿ ವಕ್ಪ್ ಅಂತ ಬಂದಿದೆ ಅಲ್ವಾ? ವಕ್ಪ್ ಅಂತ ದಾಖಲಾದರೆ ಕೃಷಿ ಸಾಲ ಸಿಗುವುದಿಲ್ಲ, ಸಬ್ಸಿಡಿ ನಿಂತು ಹೋಗುತ್ತದೆ. ಅವನ ಜಮೀನು ಮಾರಾಟ ಮಾಡಲು ಆಗಲ್ಲ ಜಮೀನು ಇದ್ದರೂ ಸತ್ತಂತೆ. ಯಾರಿಗೆ ಏನು ಕೇಳದೇ ವಕ್ಪ್ ಅಂತ ಸೇರಿಸಿದರೆ ಹೇಗೆ? ಇದರಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೆಲ್ಲವು ವಕ್ಪ್ ಎಂದು ಗೊತ್ತಾದರೆ ಸಮಾಜ ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಮಾದ್ಯಮದವರ ಬಾಯಿ ಮುಚ್ಚಿಸಿಲು ಹೊರಟಿದ್ದಾರೆ. ಇಲ್ಲಿನ ರೈತ ಜಂಟಿ ಸದನ ಸಮಿತಿ ನಾಟಕ ಅಂದರಲ್ಲವಾ? ರೈತರು ಹಾಗಾದರೆ ನಾಟಕ ಮಾಡುತ್ತಿದ್ದಾರಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.












Click it and Unblock the Notifications