Nyaya Jata: ಒಂದಾದ ಬಿಜೆಪಿ ಉಚ್ಛಾಟಿತ ನಾಯಕರಾದ ಯತ್ನಾಳ್ -ಈಶ್ವರಪ್ಪ!
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಂದಾಗಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಅಧಿಕಾರದ ವಿರುದ್ಧ ಬಹಿರಂಗವಾಗಿ ಗುಡುಗುವ ಹಾಗೂ ಕಳೆದ ಚುನಾವಣೆಯಲ್ಲಿ ಪುತ್ರ ವಾತ್ಸಲ್ಯದ ಬಗ್ಗೆ ಕಿಡಿ ಕಾರಿದ್ದ ಇಬ್ಬರು ನಾಯಕರು ಜೊತೆಯಾಗಲಿದ್ದಾರೆ.
ಹೌದು, ಮುಸ್ಲಿಂ ಮೂಲಭೂತವಾದಿಯ ಜವ್ ಜಿಹಾದ್‌ಗೆ ಅಮಾಯಕ ಹಿಂದು ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಹಾವೇರಿ ಜಿಲ್ಲೆಯ ಮಾಸೂರಿನಲ್ಲಿ ನಡೆದ ಲವ್ ಜಿಹಾದಿಗೆ ಬಲಿಯಾದ ಯುವತಿ ಸ್ವಾತಿ ಬ್ಯಾಡಗಿಗೆ ಆದ ಅನ್ಯಾಯದ ವಿರುದ್ಧ ಹಾವೇರಿಯಲ್ಲಿ "ಕ್ರಾಂತಿವೀರ ಬ್ರಿಗೇಡ್" ವತಿಯಿಂದ "ನ್ಯಾಯ ಜಾತ" ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ಹಾವೇರಿಯಲ್ಲಿ ಏಪ್ರಿಲ್ 24ರಂದು ಬೆಳಗ್ಗೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಪ್ರಮುಖರಾದ ಬಸವನಗೌಡ ಪಾಟೀಲ್ ಯತ್ನಾಳ್ ರವರು ಕೆ.ಎಸ್. ಈಶ್ವರಪ್ಪ, ಮತ್ತವರ ಪುತ್ರ ಕಾಂತೇಶ್ ಹಾಗೂ ಅನೇಕ ಪೂಜ್ಯರ ಮುಖಂಡರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ 'ನ್ಯಾಯ ಜಾತ' ನಡೆಯಲಿದೆ. ಅನೇಕ ಹಿಂದು ಸಂಘಟನೆಗಳು ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಹಾವೇರಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊಸಮನೆ ಸಿದ್ಧಪ್ಪ ವೃತ್ತದವರೆಗೆ ಬೃಹತ್ ಮೆರವಣಿಗೆ ಮೂಲಕ 'ನ್ಯಾಯ ಜಾತ' ಆರಂಭವಾಗಲಿದೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನ್ಯಾಯ ಜಾತ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ 'ಕ್ರಾಂತಿವೀರ ಬ್ರಿಗೇಡ್' ಕರೆ ನೀಡಿದೆ. ಈ ಮೂಲಕ ಲವ್ ಜಿಹಾದ್ ವಿರುದ್ಧ ಹಿಂದೂಗಳಲ್ಲಿ ಜಾಗೃತಿ ಮೂಡಿಸಲಿದೆ.
ಸ್ವಾತಿ ಹತ್ಯೆ ಪ್ರಕರಣದ ಹಿನ್ನೆಲೆ..
ಲವ್ ಜಿಹಾದ್ ಹೆಸರಿನಲ್ಲಿ ಜಿಲ್ಲೆಯ ಮಾಸೂರು ಮೂಲದ ಯುವತಿ ಸ್ವಾತಿ ಬ್ಯಾಡಗಿ ಅನ್ನು ಮಾರ್ಚ್ 03ರಂದು ಕೊಲೆಯಾಗಿದ್ದು, ಮಾರ್ಚ್ 06ರಂದು ರಾಣೆಬೆನ್ನೂರು ತಾಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿ ಸ್ವಾತಿ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಇದೊಂದು ಕೊಲೆ ಎಂದು ತಿಳಿದು ಬಂದಿದೆ. ಈ ಕೊಲೆಯನ್ನು ಆಕೆ ಪ್ರೀತಿಸಿದ್ದ ನಯಾಜ್ ಎಂಬಾತ ಮತ್ತವರ ಸ್ನೇಹಿತರು ಸಂಚು ರೂಪಿಸಿ ಕೃತ್ಯ ನಡೆಸಿದ್ದರು ಎಂಬ ಆರೋಪ ಇದೆ. ಘಟನೆ ಬಳಿಕ ಪೊಲೀಸರು ನಯಾಜ್‌ನನ್ನು ಬಂಧಿಸಿದ್ದರು.
ನಂತರ ಹಾವೇರಿ ಜಿಲ್ಲೆಯ ಮಾಸೂರು ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು. ಅಂದು ಕರ್ನಾಟಕ ಲವ್ ಜಿಹಾದ್ ಹತ್ಯೆಗೆ ಮತ್ತೊಮ್ಮೆ ಸಾಕ್ಷಿಯಾಗಿತ್ತು. ಅನೇಕ ಹಿಂದೂ ಪರ ಸಂಘಟನೆಗಳು ಕಿರಿ ಕಾರಿದವು. ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಇದರ ಮುಂದುವರಿದ ಭಾಗವಾಗಿ ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಜಂಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.












Click it and Unblock the Notifications