Haveri Constituency:25ವರ್ಷದ ನಂತರ ಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿ: ಕನಸು ನನಸಾಗಿಸುವ ಬಗ್ಗೆ ಗವಿಸಿದ್ಧಪ್ಪ ದ್ಯಾಮಣ್ಣನವರ್ ಮಾತು
ಬೆಂಗಳೂರು, ಮೇ 06: ಮಧ್ಯ ಕರ್ನಾಟಕದ ಏಲಕ್ಕಿ ಕಂಪನಿ ಹಾವೇರಿಯು ಜಿಲ್ಲೆಯಾಗಿ 25 ವರ್ಷ ಕಳೆದರೂ ಮಾದರಿ ಕ್ಷೇತ್ರದ ಕನಸು ನನಸಾಗಿರಲಿಲ್ಲ. ಇದೀಗ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಲು ಪಣತೊಟ್ಟ ಸರ್ಕಾರಿ ನೌಕರರೊಬ್ಬರು ರಾಜಕೀಯ ಪ್ರವೇಶಿಸಿದ್ದಾರೆ. ಪ್ರಸ್ತುತ 2023 ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾವೇರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 'ಗವಿಸಿದ್ಧಪ್ಪ ದ್ಯಾಮಣ್ಣನವರ್' ಅವರು 2005 ರಿಂದ 2021ರವರೆಗೆ ಜಿಲ್ಲೆಯ ಉಪತಹಶೀಲ್ದಾರ್ ಆಗಿ ಸೇವೆ ನೀಡಿದವರು. ಎರಡೂವರೆ ದಶಕಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರದ ಜನರ ಅಭಿವೃದ್ಧಿಗೆ ಸಂಕಲ್ಪ ತೊಟ್ಟೆ ನಾನು ರಾಜಕೀಯ ಪ್ರವೇಶಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಕ್ಷೇತ್ರ ಜನರು ಹೇಳುವಂತೆ ಈ ಬಾರಿ ಹಾವೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಜಿಲ್ಲೆಯ ಅಭಿವೃದ್ಧಿ ದೂರದೃಷ್ಠಿ ಹೊಂದಿರುವ ಗವಿಸಿದ್ಧಪ್ಪ ದ್ಯಾಮಣ್ಣನವರ್' ಅವರು ವಿಸ್ತಾರ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ಹಾಗಾದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಅವರ ಕನಸು, ಚಿಂತನೆಗಳು ಕುರಿತು ಅವರೇ ಹೇಳಿರುವ ಮಾಹಿತಿ ಇಲ್ಲಿದೆ.
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕನಸು ಹೀಗಿದೆ
ಗದಗ ತಾಲೂಕಿನ ಲಿಂಗದಾಳ ಗ್ರಾಮದದಲ್ಲಿ ಬಡ ಕುಟುಂಬದಲ್ಲಿ ಜನಿಸಿ ನಾನು ಸಹೋದರರ ಸಹಾಯದಿಂದ ಉನ್ನತ ಶಿಕ್ಷಣ ಪಡೆದು ಉಪ ತಹಶೀಲ್ದಾರ್ ಆದೆ. ಸರ್ಕಾರಿ ಸೇವೆಯಲ್ಲಿದ್ದಾಗ ಜನರ ಆಗು ಹೋಗುಗಳಿಗೆ ಸ್ಪಂದಿಸಿದ್ದೆ. ನನ್ನ ವ್ಯಾಪ್ತಿಯಲ್ಲಿನ ಸಾರ್ವಜನಿಕ ಕೆಲಸಗಳನ್ನು ತಡ ಮಾಡದೇ ಮಾಡಿಕೊಡಲಾಗಿದೆ. ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿಲ್ಲದೇ ಅವರಿಂದಲೇ ಅಧಿಕಾರಿ ಎನಿಸಿಕೊಂಡಿದ್ದೇನೆ. ಸದ್ಯ ಅದನ್ನೆಲ್ಲ ಗುರುತಿಸಿರುವ ಬಿಜೆಪಿ ಪಕ್ಷ ನನ್ನನ್ನು ಚುನಾವಣಾ ಕಣಕ್ಕಿಳಿಸಿದೆ ಎಂದು ದ್ಯಾಮಣ್ಣನವರ್ ತಿಳಿಸಿದರು.
2005 ರಿಂದಲೂ ನಾನು ಹಾವೇರಿಯನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಹಾವೇರಿ ಜಿಲ್ಲೆಯಾಗಿ ಎರಡೂವರೆ ದಶಕ ಕಳೆದರೂ ಅಭಿವೃದ್ಧಿ ಕೆಲಸಗಳು ಮಾತ್ರ ಸರಿಯಾಗಿ ಆಗಿಲ್ಲ. ಇಲ್ಲಿ ಕೈಗಾರಿಕೆಗಳಾಗಲಿ, ಕಾರ್ಖಾನೆಗಳಾಗಲಿ ಇಲ್ಲದ್ದರಿಂದ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿಯೇ ಇದೆ. ಒಳಚರಂಡಿ ವ್ಯವಸ್ಥೆಯಾಗಲಿ, ರಸ್ತೆಗಳು ಅಭಿವೃದ್ಧಿಗೊಂಡಿಲ್ಲ.

ಹತ್ತಾರು ಕಿಲೋ ಮೀಟರ್ ದೂರದಿಂದ ಕುಡಿಯುವ ನೀರು ನಗರಕ್ಕೆ ಬರುತ್ತಿದ್ದು, ಜನರ ಪರದಾಡುತ್ತಿದ್ದಾರೆ. ಇಂತಹ ಅನೇಕ ಮೂಲಭೂತ ಸಮಸ್ಯೆಗಳಿಂದ ಜನರು ತೊಂದರೆಗೀಡಾಗಿದ್ದಾರೆ. ಮುಖ್ಯವಾಗಿ ಹಾವೇರಿಗೆ ಹೊರ ವರ್ತುಲ ರಸ್ತೆಯ (Haveri Ring Road) ಅಗತ್ಯತೆ ಇದೆ. ಇದೆಲ್ಲ ಸಮಸ್ಯೆ ಸರಿಪಡಿಸುವ ಜೊತೆಗೆ ಮಾದರಿ ಕ್ಷೇತ್ರದ ಕನಸು ನನಸಾಗಿಸುವ ಉದ್ದೇಶದಿಂದ ರಾಜಕೀಯದಲ್ಲಿ ಧುಮುಕಿದ್ದೇನೆ ಎಂದರು.
ಜಿಲ್ಲೆ ವ್ಯಾಪ್ತಿಯಲ್ಲಿನ ಹೆಗ್ಗೆರಿ ಕೆರೆಯ ಒಣಗಿದೆ. ಅಲ್ಲಿ ನೀರು ತುಂಬಿಸಿ ಪ್ರೇಕ್ಷಣೀಯ ಸ್ಥಳ ಮಾಡುವ ಚಿಂತನೆ ಇದೆ. ಜನರು ಶಿಗ್ಗಾವಿಯ ಗೊಟಗೂಡಿ ಸೇರಿದಂತೆ ಜಿಲ್ಲೆ ಬಿಟ್ಟು ಬೇರೆಡೆ ತೆರಳುತ್ತಾರೆ. ಆಗ ಅವರಿಂದ ಹೆಚ್ಚು ಹಣ ಖರ್ಚಾಗುತ್ತದೆ. ಅದನ್ನು ತಪ್ಪಿಸಲು ಜಿಲ್ಲೆಯಲ್ಲಿಯೇ ಈ ಕೆರೆ ತುಂಬಿಸಿ ಪ್ರವಾಸಿ ತಾಣವಾಗಿಸಬೇಕೆಂಬುದು ನನ್ನ ಆಸೆ.
ಶಿಸ್ತಿನ ಸಿಪಾಯಿಂತೆ ಕೆಲಸ: ದ್ಯಾಮಣ್ಣನವರ್ ಭರವಸೆ
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕ್ಷೇತ್ರದಲ್ಲಿ ಕೈಗಾರಿಕೆಗಳು/ಕಾರ್ಖಾನೆಗಳನ್ನು ಸ್ಥಾಪಿಸಿ ಸಾಧ್ಯವಾದಷ್ಟು ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸಲಿದ್ದೇನೆ. ಅಕ್ಕಪ್ಪಕ್ಕದ ದಾವಣಗೆರೆ, ಗದಗ ಮುಂತಾದ ಜಿಲ್ಲೆಗಳು ಬೃಹದಾಕಾರವಾಗಿ ಬೆಳೆದಿವೆ. ಆದರೆ ಹಾವೇರಿ ಮಾತ್ರ ಅಭಿವೃದ್ಧಿ ಕಾಣದೇ ಸೊರಗಿದೆ. ಬಿಜೆಪಿಗೆ ಜನಾಶೀರ್ವಾದ ನೀಡಿದರೆ ಸರ್ಕಾರಿ ಕೆಲಸದಂತೆ ಶಿಸ್ತಿನಿಂದ ಕ್ಷೇತ್ರದಲ್ಲಿದ್ದುಕೊಂಡು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದ್ದೇನೆ. ಹಾವೇರಿಯನ್ನು ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
ಜಿಲ್ಲೆಗೆ ನೆರೆ, ಪ್ರವಾಹ, ಕೊರೊನಾ ಬಂದಾಗ ಸಹಾಯ
ಹಾವೇರಿಗೆ 2019ರಲ್ಲಿ ಅತೀವೃಷ್ಟಿ ಉಂಟಾಗಿತ್ತು. ಅಂದು ನೆರೆ-ಪ್ರವಾಹ ಸ್ಥಿತಿಯಲ್ಲಿ ಸಿಲುಕಿದ್ದ ನದಿ ಪಾತ್ರದ ಗ್ರಾಮಗಳ ಜನರಿಗೆ ಸಂಕಷ್ಟ ಪರಿಹರಿಸುವ ಪ್ರಮಾಣಿಕ ಪ್ರಯತ್ನ ಗವಿಸಿದ್ಧಪ್ಪ ದ್ಯಾಮಣ್ಣನವರ್ ಮಾಡಿದ್ದರು. ನದಿ ತೀರದ ಗೂಡುರು, ಗುಡಿಸಲಕೊಪ್ಪ, ಹಾಲಗಿ ಗ್ರಾಮಗಳಲ್ಲಿ ಜನರಿಗೆ ಊಟದ, ಪುನರ್ವಸತಿ ವ್ಯವಸ್ಥೆಯನ್ನು ಮುಂದಿ ನಿಂತು ಮಾಡಿಕೊಟ್ಟಿದ್ದಾರೆ. ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ನಿರಂತರವಾಗಿ ಜನರ ಸಹಾಯಕ್ಕೆ ಧಾವಿಸಿದ್ದರು. ಕೊರೊನಾ ವೇಳೆ ಸಹ ಸಂತ್ರಸ್ತರಿಗೆ ಊಟ ನೀಡಲಾಗಿದೆ. ಸರ್ಕಾರಿ ಅಧಿಕಾರಿಯಾದರೂ ಸಹ ಹಮ್ಮು ಇಲ್ಲದೇ ಜನಸಾಮಾನ್ಯರಂತೆ ಕೆಲಸ ಮಾಡಿದ್ದಾರೆ ಎಂದು ಕ್ಷೇತ್ರದ ಜನರು ಹೇಳುತ್ತಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications