ರೈತರು, ನೇಕಾರರು ನನ್ನ ಎರಡು ಕಣ್ಣುಗಳಿದ್ದಂತೆ:ಯಡಿಯೂರಪ್ಪ

Recommended Video

      Farmers and weavers are like my two eyes :BS Yediyurappa | Oneindia Kannada

      ಹಾವೇರಿ, ನವೆಂಬರ್ 29: ಈ ರಾಜ್ಯದ ರೈತರು ಮತ್ತು ನೇಕಾರರು ನನ್ನ ಎರಡು ಕಣ್ಣುಗಳದ್ದಂತೆ, ಅವರಿಗೆ ಎಂದೂ ತೊಂದರೆಯಾಗಲೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

      ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮತನಾಡಿದ ಅವರು, ಪ್ರತ್ಯೇಕ ಕೃಷಿ ಬಜೆಟ್ ನ್ನು ಮೊದಲು ಮಂಡಿಸಿದ್ದು ನಾನು, ನೇಕಾರರ, ರೈತ ಪರ ಕಾಳಜಿ ಹೊಂದಿರುವ ಮುಖ್ಯಮಂತ್ರಿ, ನೀವು ಹೆಮ್ಮೆ ಪಡುವಂತಹ ಕೆಲಸಗಳನ್ನೇ ಮಾಡುತ್ತೇನೆ ಎಂದಿದ್ದಾರೆ.

      ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಪರ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದರ ಮೂಲಕ ನನ್ನ ಕೈ ಬಲಪಡಿಸಬೇಕು, ಭಾಗ್ಯಲಕ್ಷ್ಮೀ ಯೋಜನೆಯಿಂದ ನನಗೆ ಒಳ್ಳೆಯ ಹೆಸರು ಬಂತು. ಎಲ್ಲ ಸಮುದಾಯದ ಅಭಿವೃದ್ದಿ ನನ್ನ ಗುರಿಯಾಗಿದೆ, ನನಗೆ ಜಾತಿ ರಾಜಕಾರಣ ಗೊತ್ತಿಲ್ಲ, ಎಲ್ಲರೂ ಒಂದೇ ಎಂದರು.

      Farmers And Weavers Are Like My Two Eyes: BS Yeddyurappa

      ಹಿಂದುಳಿದ ಸಮಾಜದ ಅಭಿವೃದ್ದಿಗೆ ದುಡಿದಿದ್ದೇನೆ, ನನ್ನ ಅವಧಿಯಲ್ಲಿಯೇ ಕಾಗಿನೆಲೆ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ, ನೀವೇ ಮುಂದೆ ಅದ್ಭುತ ಕೆಲಸ ಮಾಡಿದ್ದೀರಿ ಎಂದು ಹೇಳುತ್ತೀರಿ, ಇದೇ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಕಾಡುತ್ತಿರುವ ಭಯ ಎಂದರು.

      ರಾಣೇಬೆನ್ನೂರು ಕ್ಷೇತ್ರ ವ್ಯಾಪ್ತಿಯ ತುಮ್ಮಿನಕಟ್ಟೆಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಎಲ್ಲ ೧೫ ಕ್ಷೇತ್ರಗಳಲ್ಲಿಯೂ ನಾವೇ ಗೆಲ್ಲುತ್ತೇವೆ, ನಾನೇ ಪೂರ್ಣ ಅವಧಿಗೂ ಮುಖ್ಯಮಂತ್ರಿಯಾಗುತ್ತೇನೆ ಎಂದು ಭವಿಷ್ಯ ನುಡಿದರು. ಇದರಲ್ಲಿ ಯಾವ ಸಂಶಯವೂ ಬೇಡವೆಂದರು.

      ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪೂಜಾರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮತ್ತು ಜೆಡಿಎಸ್ ನಿಂದ ಮಲ್ಲಿಕಾರ್ಜುನ್ ಹಲಗೇರಿ ಇದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+