ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾವೇರಿ ಜಿ.ಪಂ ನೂತನ ಅಧ್ಯಕ್ಷರಾಗಿ ಏಕನಾಥ ಬಾನುವಳ್ಳಿ ಅವಿರೋಧ ಆಯ್ಕೆ

|
Google Oneindia Kannada News

ಹಾವೇರಿ, ಅಕ್ಟೋಬರ್ 23: ಹಾವೇರಿ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಕೋಳ ಜಿ.ಪಂ ಕ್ಷೇತ್ರದ ಸದಸ್ಯ ಏಕನಾಥ ಬಾನುವಳ್ಳಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಐದು ವರ್ಷ ಅವಧಿಯ ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆಯ ಉಳಿದ ಅವಧಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಏಕನಾಥ ಬಾನುವಳ್ಳಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರು, ನಿಯಮಾನುಸಾರ ಏಕನಾಥ ಬಾನುವಳ್ಳಿ ಅವರು ಹಾವೇರಿ ಜಿ.ಪಂ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಹಾವೇರಿ: ಚುನಾವಣೆಯಲ್ಲಿ ಎದುರಾಳಿಯನ್ನು ದುರ್ಬಲ ಎಂದು ತಿಳಿಯಬಾರದುಹಾವೇರಿ: ಚುನಾವಣೆಯಲ್ಲಿ ಎದುರಾಳಿಯನ್ನು ದುರ್ಬಲ ಎಂದು ತಿಳಿಯಬಾರದು

ಉಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಚುನಾವಣೆ ಪ್ರಕ್ರಿಯೆ ನಿರ್ವಹಿಸಿದರು.

 Ekanatha Banuvalli Elected As The Haveri Zillla Panchayat New President

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಾರಡಗಿ ರಮೇಶ ಬಸಪ್ಪ ದುಗ್ಗತ್ತಿ, ಅಗಡಿ ಕ್ಷೇತ್ರದ ಕೊಟ್ರೇಶಪ್ಪ ಬಸೆಗಣ್ಣಿ, ಮಾಸೂರ ಕ್ಷೇತ್ರದ ಎಸ್.ಕೆ ಕರಿಯಣ್ಣನವರ, ಕಾಗಿನೆಲೆ ಕ್ಷೇತ್ರದ ಅಬ್ದುಲ್ ಮುನಾಫ್ ಬಾಬುಲಿಸಾಬ್ ಎಲಿಗಾರ ಅವರುಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಕ್ಷೇತ್ರದ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವರನ್ನು ಸೂಚಿಸಿ ನಾಮನಿರ್ದೇಶನ ಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.

34 ಸದಸ್ಯ ಬಲದ ಹಾವೇರಿ ಜಿಲ್ಲಾ ಪಂಚಾಯಿತಿಯಲ್ಲಿ ಒಬ್ಬ ಸದಸ್ಯ ನಿಧನ ಹೊಂದಿದ ಕಾರಣ, 17 ಸದಸ್ಯರ ಕೋರಂ ಅವಶ್ಯವಿದ್ದು, 23 ಸದಸ್ಯರು ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದರು. ಒಬ್ಬರೇ ನಾಮನಿರ್ದೇಶನ ಸೂಚಿಸಿದ ಕಾರಣ ಅವಿರೋಧ ಆಯ್ಕೆಯಾಯಿತು. ಬಸವನಗೌಡ ದೇಸಾಯಿ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಸಲಾಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿರುವ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವರು ರಾಣೇಬೆನ್ನೂರು ತಾಲ್ಲೂಕು ಕಾಕೋಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಬಿ.ಎ ಪದವೀಧರರಾದ ಇವರು ಕೃಷಿ ವೃತ್ತಿಯಲ್ಲಿ ತೊಡಗಿದ್ದು, ರಾಣೇಬೆನ್ನೂರ ತಾಲ್ಲೂಕಿನ ಗುಡಗೂರು ಗ್ರಾಮದವರು.

1982 ರಿಂದ 1987 ರಲ್ಲಿ ರಾಣೆಬೆನ್ನೂರು ತಾಲ್ಲೂಕು ಹೊನ್ನತ್ತಿ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ 1992 ರವರೆಗೆ ಕಾರ್ಯನಿರ್ವಹಿಸಿದ್ದಾರೆ.

1995ರ ಚುನಾವಣೆಯಲ್ಲಿ ಗುಡಗೂರ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡು 2000 ದವರೆಗೆ ಕಾರ್ಯನಿರ್ವಹಿದ್ದಾರೆ. 2000 ರಿಂದ 2005 ರವರೆಗೆ ರಾಣೇಬೆನ್ನೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಸದಸ್ಯರು ಹಾಗೂ ಅಧ್ಯಕ್ಷರಾಗಿ ಹಾಗೂ 2005 ರಿಂದ 2011 ರವರೆಗೆ ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿದ್ದರು.

Recommended Video

ಆಂಜಿಯೋಪ್ಲಾಸ್ಟಿ ಚಿಕಿತ್ಸೆ , Kapil ಬೇಗ ಹುಷಾರಾಗಿ | Kapil Dev in Hospital | Oneindia Kannada

2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಣೇಬೆನ್ನೂರು ತಾಲ್ಲೂಕು ಕಾಕೋಳ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.

English summary
Ekanatha Banuvalli, a constituency member of Kakola ZP, was unanimously elected as the new president of the Haveri zilla panchayat on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X