ಸಾಲಮನ್ನಕ್ಕೆ ಪರಿಶಿಷ್ಟ ವರ್ಗದವರ ಹಣ ಬಳಕೆ: ಬಿಎಸ್ ವೈ ಆರೋಪ
ಹಾವೇರಿ, ಫೆಬ್ರವರಿ 22 : ಸಾಲಮನ್ನಕ್ಕೆ ಪರಿಶಿಷ್ಟ ವರ್ಗದ ಜನರ ಹಣವನ್ನು ಬಳಕೆ ಮಾಡಿದ್ದಾರೆ ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ ಏನು ಮಾಡಲು ಸಿದ್ಧವಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವು ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ . ಇದೀಗ ರೈತರ ಸಾಲಮನ್ನಾ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಗುರುವಾರ ನಡೆದ ಪರಿಶಿಷ್ಟ ವರ್ಗದ ಸಮಾವೇಶದಲ್ಲಿ ಮಾತನಾಡಿದ ಅವರು ಏಕವಚನದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು, ರಾಹುಲ್ ಗಾಂಧಿ ಬಚ್ಚಾ ಎಂದು ಕರೆದ ಅವರು ರಾಹುಲ್ ಗಾಂಧಿಯನ್ನು ಕರೆದುಕೊಂಡು ಬಂದು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು.

ಕೇಂದ್ರ ಸರಕಾರದ ದಲಿತರ ಹಣವೆಲ್ಲಿ ಹೋಗಿದೆ ಈ ಎಲ್ಲ ವಿಚಾರಗಳನ್ನ ನೆನಪಿಸಿದರೆ ಕಣ್ಣಲ್ಲಿ ನೀರು ಬರುತ್ತದೆ. ಸಿದ್ದರಾಮಯ್ಯ ಏನು ಹರಿಶ್ಚಂದ್ರ ಮಗನ, ಸಿದ್ದರಾಮಯ್ಯ ಅವರ ಎಲ್ಲ ಹಗರಣಗಳನ್ನ ಬಯಲಿಗೆಳೆದು ಜೈಲಿಗೆ ಕಳುಸುತ್ತೇವೆ ಎಂದರು.












Click it and Unblock the Notifications