ರಾಣೇಬೆನ್ನೂರು: ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಕಾದು ಕುಳಿತ ಎಂಎಲ್‌ಸಿ ಶಾಂತಾರಾಮ್ ಸಿದ್ಧಿ

ಹಾವೇರಿ, ಡಿಸೆಂಬರ್ 27: ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರಾದರೆ ಸಾಕು ಐಷಾರಮಿ ಕಾರಿನಲ್ಲಿ ಓಡಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಶಾಂತಾರಾಮ್ ಸಿದ್ಧಿಯವರು ಸಾಮಾನ್ಯ ಪ್ರಯಾಣಿಕರಂತೆ ಕುಳಿತು ಬಸ್‌ಗಾಗಿ ಕಾಯುತ್ತಿದ್ದರು. ಅವರನ್ನು‌ ನೋಡಿದವರಾರೂ ಇವರು ರಾಷ್ಟ್ರೀಯ ಪಕ್ಷವೊಂದರ ವಿಧಾನ ಪರಿಷತ್ ಸದಸ್ಯರು ಎಂಬುದನ್ನು‌ ಗುರುತಿಸಿಲ್ಲ.

ಸರಳವಾಗಿ ಜೀವನ ನಡೆಸುತ್ತಿರುವ ಶಾಂತಾರಾಮ್ ಸಿದ್ಧಿ ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ತಮ್ಮ ಓಡಾಡಕ್ಕೆ ಸಾರ್ವಜನಿಕ ಸಂಪರ್ಕವಾದ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಮಾತ್ರವಲ್ಲ ಶಾಂತಾರಾಮ್ ಸಿದ್ಧಿಯವರ ಬಳಿ ದುಬಾರಿ ವಾಚ್, ಶೂ, ಫೋನ್, ಬೆಲೆಬಾಳುವ ಉಡುಪು, ಸಹಾಯಕರು ಕೂಡ ಇಲ್ಲ.

Haveri: BJP MLC Shantaram Siddi Waiting to Take the Bus At Ranebennur Bus Stand; Pic Goes Viral


ಆಫ್ರಿಕನ್ ಮೂಲದ ಸಿದ್ಧಿ ಸಮುದಾಯದಿಂದ ಕರ್ನಾಟಕದ ಮೊದಲ ವಿಧಾನ ಪರಿಷತ್ ಸದಸ್ಯರಾಗಿರುವ ಶಾಂತಾರಾಮ್ ಸಿದ್ದಿ ಬಸ್‌ಗಾಗಿ ಕಾಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದರೂ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಇವರ ಸರಳ ಜೀವನಕ್ಕೆ ಇದೀಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಶಾಂತಾರಾಮ್ ಸಿದ್ದಿ, ಹಿತ್ಲಳ್ಳಿಯ ಸಣ್ಣ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾರೆ. ಮೂರು ದಶಕಗಳಿಂದ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆಯಲ್ಲಿ ದುಡಿಯುತ್ತಿರುವ ಶಾಂತಾರಾಮ್ ಸಿದ್ಧಿ, ಮಲೆನಾಡು, ಕರಾವಳಿಯಲ್ಲಿರುವ ಸಿದ್ದಿ, ಗೌಳಿ, ಕುಣಬಿ, ಗೊಂಡ, ಹಾಲಕ್ಕಿ ಮುಂತಾದ ಬುಡಕಟ್ಟು ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ, ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ.

ವಿಶೇಷವಾಗಿ ವನವಾಸಿಗಳ ವಸತಿ ಶಾಲೆ, ಸಮುದಾಯ ಶಿಕ್ಷಣ, ಆರೋಗ್ಯ ಶಿಬಿರ, ಕೌಶಲ್ಯ ತರಬೇತಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಹಳ್ಳಿಗರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಆರಂಭದಿಂದಲೂ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡ ಶಾಂತಾರಾಮ್ ಸಿದ್ಧಿಯವರನ್ನು ಬಿಜೆಪಿ ಗುರುತಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳಿಸಿದೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ವಿಧಾನ ಪರಿಷತ್‌ಗೆ ನೇಮಕವಾದ ಮೇಲೂ ಶಾಂತಾರಾಮ್ ಸಿದ್ಧಿ ಹಿಂದಿನಂತೆ ಸರಳ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

Recommended Video

      2021 ರಲ್ಲಿ ನಮ್ಮನ್ನು ಅಗಲಿದ ಮಹಾನ್ ಸಾಧಕರ ನೆನಪು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+