''55 ವರ್ಷ ದೇಶ ಆಳಿದ ಕಾಂಗ್ರೆಸ್‌ನವರ ಬಾಯಲ್ಲಿ ಇಂಥಾ ಮಾತುಗಳು!''
ಬೆಂಗಳೂರು, ಮೇ 06: ಭಾರತದ ದೇಶದ ಮೇಲೆ ಭಯೋತ್ಪಾದನೆಯ ದಾಳಿ ನಡೆದ ಸಂದರ್ಭದಲ್ಲಿ ಭಾರತ ಪಾಕ್ ನಡುವೆ ಯುದ್ದದ ಕಾರ್ಮೋಡ ದಟ್ಟವಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರ ಹೇಳಿಕೆಗಳು ಖಂಡನೀಯ. ಅವೆಲ್ಲ ನೋಡಿದಾಗ ಇವರು ಈ ದೇಶವನ್ನು 55 ವರ್ಷ ಆಳಿದ್ದಾರೊ ಇಲ್ಲವೊ ಎಂಬ ಸಂಶಯ ಮೂಡುತ್ತದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ ಪ್ರೇಮ ಅಧಪತನವಾಗಿರುವುದು ಸ್ಪಷ್ಟ ವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ದೂರಿದರು.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಚೀನಾ ಯುದ್ಧದಲ್ಲಿ ದೇಶಕ್ಕೆ ಸೋಲುಂಟಾಗಿದೆ. ದೇಶದ ವಿವಿಧ ಕಡೆಗಳಲ್ಲಿ ಅಂದರೆ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಭಯೋತ್ಪಾದಕ ದಾಳಿಗಳು ನಡೆದವು. ಈ ವೇಳೆ ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದು, ಮುಂಬೈ ಮೇಲೆ 2008 ರಲ್ಲಿ ನಡೆದ 26/11 ದಾಳಿಯಲ್ಲಿ 130 ಅಮಾಯಕರ ಸಾವುಂಟಾದಾಗ ಘಟನೆ ಪೂರ್ವದಲ್ಲಿ ಇಂಟಲಿಜೆನ್ಸ್ ವೈಫಲ್ಯ ಆಗಿದೆ ಎಂದು ಅವರು ಕಾಂಗ್ರೆಸ್ ಅವಧಿಯಲ್ಲಾದ ಮಹತ್ವ ಘಟನೆ, ದಾಳಿ ನೆನಪಿಸಿದರು.

ಬೇಜವಾಬ್ದಾರಿಯ ವಿರೋಧ ಪಕ್ಷ..
ಘಟನೆ ನಂತರ ಉಗ್ರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಭ ನಿರ್ಧಾರ ತೆಗೆದುಕೊಂಡಿದ್ದನ್ನು ಇದೇ ಕಾಂಗ್ರೆಸ್ ಮರೆತಿದೆ. ಕನಿಷ್ಠ ಅವರ ಪ್ರಧಾನಮಂತ್ರಿ ಇಂದಿರಾ ಗಾಂಧಿ ಯುದ್ದ ಮಾಡುವಾಗ ಅಂದಿನ ಸೇನೆಯ ಮುಖ್ಯಸ್ಥ ಮಾಣಿಕ್ ಷಾ ಅವರ ಮಾತು ಹೇಗೆ ಕೇಳಿದರೊ ಆ ಸಂದರ್ಭದಲ್ಲಿ ಎಲ್ಲ ವಿರೋದ್ಧ ಪಕ್ಷಗಳು ಸರ್ಕಾರದ ಪರವಾಗಿ ನಿಂತಿದ್ದವು. ಇದೆಲ್ಲ ನೆನಪಿಸಿಕೊಳ್ಳದೇ ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಾಗಿ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್ ಪಕ್ಷ. ಹೀಗಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರಪ್ರೇಮ ಅಧಪತನವಾಗಿರುವುದು ಸ್ಪಷ್ಟ ವಾಗಿದೆ.
ಭಾರತ ಮತ್ತು ಪಾಕಿಸ್ತಾನ ಯುದ್ಧ ನಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಉಗ್ರರು ದಾಳಿ ಮಾಡಿ ಭಾರತದವರನ್ನು ಹತ್ಯೆ ಗೈದಿದ್ದಾರೆ. ಭಾರತ ಯುದ್ಧಕ್ಕೆ ಸನಿಹವಿದೆ. ಇಂಥ ಸಂದರ್ಭದಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಬರುವ ದಿನಗಳಲ್ಲಿ ಜನರಿಗೆ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ಆಯಾಮಗಳನ್ನು ಮನಗಂಡು ಯುದ್ಧಕ್ಕೆ ಬೇಕಾಗಿರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಈಗಾಗಲೇ ಮೂರು ಸೇನಾಪಡೆಗಳಿಗೆ ಅಧಿಕಾರ ಕೊಟ್ಟಿರುವುದು ನೋಡಿದ್ದೇವೆ. ಇಡೀ ರಾಷ್ಟ್ರ ಒಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ಹೀಗಿದ್ದಾಗ ಕಾಂಗ್ರೆಸ್ ಕನಿಷ್ಠ ಜವಾಬ್ದಾರಿಯನ್ನಾದರೂ ಅರ್ಥಮಾಡಿಕೊಳ್ಳಲಿ. ಅವರ ಪ್ರತಿಯೊಂದು ಹೇಳಿಕೆಗಳಿಂದ ಪಾಕಿಸ್ತಾನಕ್ಕೆ ಪುಷ್ಠಿ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ದೂರಿದವರು ನೆನಪಿಸಿಕೊಳ್ಳಿ..
ಕಾಶ್ಮೀರ ಪಹಲ್ಗಾಮ್‌ನಲ್ಲಿ ದಾಳಿ ನಡೆದ ಸಂದರ್ಭದಲ್ಲಿ 26 ಮಂದಿ ಪ್ರವಾಸಿಗರನ್ನು ಕೊಲ್ಲಲಾಗಿದೆ. ತದನಂತರದ ಬೆಳವಣಿ ವೇಳೆ ಪ್ರಧಾನಿ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳು ಬೆಂಬಲಿಸಿದವರು. ಆದರೆ ಕರ್ನಾಟಕ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ, ವೈಪಲ್ಯ, ಗುಪ್ತಚರ ವೈಫಲ್ಯ ಎಂದು ಅಣುಕಿಸಿದ್ದರು. ಅಲ್ಲದೇ ತಮ್ಮ ಅವಧಿಯಲ್ಲಿ ನಡೆದಿದ್ದ ಘಟನೆಗಳಲ್ಲಿ ತಾವು ಕೈಗೊಂಡ ಕ್ರಮ, ಅಂದಿನ ಬೆಳವಣಿಗೆ ಮರೆತಿದ್ದಾರೆ. ಇಂತಹ ಸಂದರ್ಭದಲ್ಲೂ ಇಂಡೋ ಪಾಕ್ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಈ ವೇಳೆ ತುಷ್ಟೀಕರಣ ರಾಜಕೀಯ ಮಾಡುವುದು, ಪಾಕ್ ಪರವಾದಂತಹ ರೀತಿಯಲ್ಲಿ ಮಾತನಾಡುವುದು ತಪ್ಪು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.












Click it and Unblock the Notifications