ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಮ ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 20 ಸಾವಿರ ರೂ. ಪರಿಹಾರ

|
Google Oneindia Kannada News

ಹಾವೇರಿ, ಸೆ. 29: ರಾಜ್ಯದಲ್ಲಿ ಚರ್ಮ ಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟರೆ 20 ಸಾವಿರ ರೂಪಾಯಿಗಳ ಪರಿಹಾರ ಒದಗಿಸಲಾಗುವುದು ಹಾಗೂ ಗಂಟು ರೋಗಕ್ಕೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಹಾವೇರಿ ಭಾಗದಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿದೆ. ಗಂಟು ರೋಗ ಹರಡದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಅದಕ್ಕೆ ಈಗಾಗಲೇ ಸೂಚನೆ ನೀಡಿ ವಿಶೇಷ ತಂಡವನ್ನು ಕಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ರಾಣೇಬೆನ್ನೂರು; ಹನ್ನೊಂದು ಮಕ್ಕಳಿದ್ದರೂ ಬೀದಿಪಾಲಾದ ಪುಟ್ಟವ್ವ ಎಂಬ ವೃದ್ಧೆರಾಣೇಬೆನ್ನೂರು; ಹನ್ನೊಂದು ಮಕ್ಕಳಿದ್ದರೂ ಬೀದಿಪಾಲಾದ ಪುಟ್ಟವ್ವ ಎಂಬ ವೃದ್ಧೆ

ರಾಜ್ಯದಲ್ಲಿ ಈಗಾಗಲೇ ಗದಗ, ಕರಾವಳಿ, ಹಾವೇರಿ, ದೊಡ್ಡಬಳ್ಳಾಪುರ ,ಬೆಳಗಾವಿ, ಹಾವೇರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಹಾರ ಘೋಷಿಸಿ, ಚಿಕಿತ್ಸೆಗೆ ಸರ್ಕಾರ ಹಣ ಭರಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ

ವಿದ್ಯುಚ್ಛಕ್ತಿ ಸರಬರಾಜು ಐದು ಗಂಟೆಗಳ ಕಾಲವಿದ್ದು ಇದನ್ನು ಏಳು ಗಂಟೆಗಳಿಗೆ ವಿಸ್ತರಿಸಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಲಾಗುವುದು. ಈ ಬಗ್ಗೆ ಕೂಡಲೇ ಆದೇಶ ಹೊರಡಿಸಲಾಗುವುದು. ನಮ್ಮ ಸರ್ಕಾರ ವಿದ್ಯುತ್ ಸಂಸ್ಥೆಗಳ ಖಾಸಗೀಕರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ. 11,137 ಪೌರ ಕಾರ್ಮಿಕರ ಸೇವೆಯನ್ನು ಕರ್ನಾಟಕ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾಯಂಗೊಳಿಸಲಾಗಿದೆ. ಇನ್ನೆರಡು ಹಂತಗಳಲ್ಲಿ ಖಾಯಂ ಮಾಡುವ ಕೆಲಸವನ್ನು ಮಾಡಲಾಗುವುದು. ಅಂಗನವಾಡಿ, ಆಶಾ ಕಾರ್ಯಕರ್ತರಗೆ ಕೆಲಸಕ್ಕೆ ಸುರಕ್ಷತೆ, ಭದ್ರತೆ ನೀಡುವ ಕೆಲಸಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ದುಡಿಮೆಗೆ ಗೌರವ ಬರುವ ರೀತಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.

ದಿನಕ್ಕೆ 16 ರಿಂದ 17 ಗಂಟೆ ಕೆಲಸ ಮಾಡುತ್ತಿದ್ದೇನೆ; ಸಿಎಂ

ದಿನಕ್ಕೆ 16 ರಿಂದ 17 ಗಂಟೆ ಕೆಲಸ ಮಾಡುತ್ತಿದ್ದೇನೆ; ಸಿಎಂ

'ಈಗಿರುವ ಸಮಸ್ಯೆಗಳು ಹುಟ್ಟುಹಾಕಿರುವ ಸಮಸ್ಯೆಗಳಲ್ಲ. ಹತ್ತಾರು ವರ್ಷಗಳ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಚರ್ಚೆ ಮಾಡದೆ ಅಧಿಕಾರವಿದ್ದಾಗ ಪರಿಹಾರದ ಭಾಗವಾಗಿ ನಾವು ಕೆಲಸ ಮಾಡಬೇಕು. ಸಮಸ್ಯೆಗಳನ್ನು ಹಾಗೆಯೇ ಬಿಟ್ಟರೆ ಅದು ಉತ್ತಮ ಆಡಳಿತಗಾರರ ಲಕ್ಷಣವಲ್ಲ. ನಾನು ದಿನಕ್ಕೆ 16-17 ತಾಸು ಕೆಲಸ ಮಾಡುತ್ತಿದ್ದು, ಜನಪರವಾಗಿರುವ ತೀರ್ಮಾನಗಳನ್ನು ಮಾಡುತ್ತಿದ್ದೇನೆ. ಬಹಳ ವರ್ಷಗಳಿಂದ ಆಗದೇ ಇರುವಂಥ ಹಲವಾರು ತೀರ್ಮಾನಗಳನ್ನು ಕೈಗೊಂಡಿದ್ದೇನೆ" ಎಂದಿದ್ದಾರೆ.

ಪ್ರವಾಹ, ಬರಗಾಲ, ಏನೇ ಬಂದರೂ ಕನ್ನಡ ನಾಡಿನ ಜನತೆಯ ಜೀವನವನ್ನು ಕಷ್ಟಕ್ಕೆ ಈಡು ಮಾಡದೇ ಅವರ ಕಷ್ಟಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದೇವೆ. ಪ್ರವಾಹ ಬಂದಾಗ ಜನ ತೊಂದರೆಗೀಡಾಗುತ್ತಾರೆ. ನವಂಬರ್ ಪ್ರವಾಹವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 1400 ಕೋಟಿ ರೂ. ಗಳ ಪರಿಹಾರವನ್ನು ರೈತರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಪಾತ್ರ ಜೆ.ಹೆಚ್.ಪಟೇಲರದ್ದು

ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಪಾತ್ರ ಜೆ.ಹೆಚ್.ಪಟೇಲರದ್ದು

ರಾಜಕಾರಣಗಳಾಗಿ ಹೆಜ್ಜೆ ಗುರುತು ಬಿಟ್ಟು ಹೋಗಿರುವವರಲ್ಲಿ ಪ್ರಮುಖರಾದ ಜೆ.ಹೆಚ್ ಪಟೇಲರು ದೂರದೃಷ್ಟಿಯ ನಾಯಕ. ಜನಸಾಮಾನ್ಯರಿಗೆ ಒಳಿತು ಮಾಡುವ ವಿಚಾರವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಧೀಮಂತ ನಾಯಕರಾಗಿದ್ದರು. ಪ್ರತಿಪಕ್ಷದಲ್ಲಿದ್ದಾಗ ಮಾಡಿದ ಹೋರಾಟಕ್ಕೆ ಅಧಿಕಾರಕ್ಕೆ ಬಂದಾಗ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಜೆ.ಹೆಚ್. ಪಟೇಲರು ಕರ್ನಾಟಕ ರಾಜಕಾರಣದ ಒಂದು ದಂತಕಥೆ. ಅವರ ರಾಜ್ಯದ ಬಗೆಗಿನ ಕಳಕಳಿ, ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ, ತತ್ವಜ್ಞಾನಿಯಾಗಿದ್ದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ರಾಜ್ಯದಲ್ಲಿ ದೊಡ್ಡ ಜನಸಂಖ್ಯೆ ಹೆಚ್ಚಿದಾಗ ಉತ್ತಮ ಆಡಳಿತ ನಡೆಸಲು ಅನುಕೂಲವಾಗುವಂತೆ ಪಟೇಲರು ಏಳು ಜಿಲ್ಲೆಗಳ ರಚನೆ, ಕರ್ನಾಟಕದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು.ಈ ಎಲ್ಲ ಏಳು ಜಿಲ್ಲೆಗಳ ಜನತೆ ಇಂದಿಗೂ ಜೆ.ಹೆಚ್.ಪಟೇಲರನ್ನು ನೆನೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಟೀಕೆ ಟಿಪ್ಪಣಿಗೆ ತಲೆ‌ ಕೆಡಿಸಿಕೊಳ್ಳದೆ ಅಭಿವೃದ್ಧಿಪರ ಕೆಲಸ

ಟೀಕೆ ಟಿಪ್ಪಣಿಗೆ ತಲೆ‌ ಕೆಡಿಸಿಕೊಳ್ಳದೆ ಅಭಿವೃದ್ಧಿಪರ ಕೆಲಸ

ಹಾವೇರಿ ಜಿಲ್ಲೆಯ ನೀರಾವರಿ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಮೆಗಾ ಡೈರಿ, ಇಂಡಸ್ಟ್ರಿಯಲ್ ಪಾರ್ಕ್, ಟೆಕ್ಸ್ಟೈಲ್ ಪಾರ್ಕ್ ಗಳ ನಿರ್ಮಾಣವಾಗುತ್ತಿದೆ. ಜಿಲ್ಲೆಯ ಸ್ವರೂಪ ಪಡೆದುಕೊಂಡು ಅಭಿವೃದ್ಧಿಯ ಆಯಾಮ ದೊರೆತು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದಿದ್ದಾರೆ.

"ಅಭಿವೃದ್ದಿ ರಾಜಕಾರಣ ಮಾಡಬೇಕು. ಒಂದು ತಿಂಗಳು ಚುನಾವಣೆ ಮಾಡೋಣ. ಜನ ಯಾರಿಗೆ ಆಶಿರ್ವಾದ ಮಾಡುತ್ತಾರೊ ಅವರು ಜನಪರ ಕೆಲಸ ಮಾಡೋಣ. ನಾನು ಯಾವುದೇ ಟೀಕೆ ಟಿಪ್ಪಣಿಗೆ ತಲೆ‌ ಕೆಡಿಸಿಕೊಳ್ಳದೆ ಅಭಿವೃದ್ಧಿಪರ ಕೆಲಸ ಮಾಡುತ್ತಿದ್ದೇನೆ. ಜನ ಕಲ್ಯಾಣದ ಗುರಿಯಿಂದ ವಿಚಲಿತನಾಗದಂತೆ ಕೆಲಸ ಮಾಡುತ್ತಿದ್ದೇನೆ. ರಾಜಕಾರಣದಲ್ಲಿ ವಿರೋಧಿಗಳಿರಬೇಕು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಟೀಕೆ ಟಿಪ್ಪಣಿಗಳನ್ನ ಮೆಟ್ಟಿಲುಗಳನ್ನಾಗಿಸಿಕೊಂಡು ಯಶಸ್ಸು ಕಾಣುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
lumpy skin disease ; ₹ 20 thousand relief for cattle that died due to disease says Chief Minister Basavaraj Bommai in haveri. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X