• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮರ್ಯಾದೆ ಕೊಡಿ': ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಕ್ರೋಶ

|

ಹಾಸನ, ಜೂನ್ 20: ಮಾಜಿ ಸಚಿವ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ಮರ್ಯಾದೆ ಕೊಟ್ಟು ಮಾತನಾಡಿಸಿ'' ಎಂದು ರೇವಣ್ಣ ವಿರುದ್ಧ ಬೇಸರ ಹೊರಹಾಕಿದ್ದಾರೆ.

   Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

   ಹಾಸನದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಭಾಗಿಯಾಗಿದ್ದರು. 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ರೇವಣ್ಣ ಮಾತನಾಡುವ ಸಮಯದಲ್ಲಿ ಶ್ವೇತಾ ದೇವರಾಜ್ ಆರೋಪಗಳಿಗೆ ಉತ್ತರ ನೀಡಲು ಹೊರಟರು. ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇವಣ್ಣ ಏಕವಚನದಲ್ಲಿ ಮಾತನಾಡಿದ್ದಾರೆ.

   ''ಏಯ್ ನೋಡಮ್ಮ.. ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ'' ಎಂದು ಶ್ವೇತಾ ದೇವರಾಜ್‌ಗೆ ರೇವಣ್ಣ ಹೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಶ್ವೇತಾ ''ಮರ್ಯಾದೆ ಕೊಟ್ಟು ಮಾತನಾಡಿಸಿ'' ಎಂದಿದ್ದಾರೆ.

   ಇವರಿಬ್ಬರ ಜಗಳಕ್ಕೆ ಎಂಟ್ರಿಯಾದ ಭವಾನಿ ರೇವಣ್ಣ ಪತಿಗೆ ಬೆಂಬಲ ನೀಡಿದ್ದಾರೆ. ''ನೀನು ಮರ್ಯಾದೆ ಕೊಟ್ಟಿದ್ದರೆ ತಾನೇ ಅವರು ಕೊಡೋದು'' ಎಂದಿದ್ದಾರೆ. ರೇವಣ್ಣ ಹಾಗೂ ಶ್ವೇತಾ ದೇವರಾಜ್‌ ಗಲಾಟೆಯ ನಡುವೆ ಸಭೆಯಲ್ಲಿ ಭಾಗಿಯಾಗಿದ್ದವರಿಗೆ ಏನು ಮಾಡೊದು ತಿಳಿಯದಾಗಿತ್ತು.

   ಯಡಿಯೂರಪ್ಪ ಏನು ಶಾಶ್ವತವಾಗಿ ಇರ್ತಾನಾ: ಏಕವಚನದಲ್ಲಿ ವಾಗ್ದಾಳಿ

   ನಂತರ ಅಲ್ಲಿಯೇ ಇದ್ದ ಎಂಎಲ್‍ಸಿ ಗೋಪಾಲಸ್ವಾಮಿ, ಶ್ವೇತಾ ದೇವರಾಜ್‌ ಪರವಾಗಿ ಧ್ವನಿ ಎತ್ತಿದ್ದರು. ಆದರೆ, ರೇವಣ್ಣ ಅವರ ಬಾಯಿ ಮುಚ್ಚಿಸಿದರು. ಸಭೆಯಲ್ಲಿ ಕೂಗಾಟವೇ ಹೆಚ್ಚಾಗಿತ್ತು.

   English summary
   Hassan zilla panchayat president Shwetha Devaraj upset with former minister HD Revanna.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X