ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕ ಲೈವ್ ನೋಡಿ

|
Google Oneindia Kannada News

ಹಾಸನ, ನವೆಂಬರ್ 13 : ಶ್ರವಣಬೆಳಗೊಳದಲ್ಲಿ ಫೆಬ್ರವರಿಯಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕವನ್ನು ಸ್ಮಾರ್ಟ್ ಪೋನ್ ಮೂಲಕವೂ ವೀಕ್ಷಣೆ ಮಾಡಬಹುದಾಗಿದೆ. ಹಾಸನ ಜಿಲ್ಲಾಡಳಿತ ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

2018ರ ಫೆಬ್ರವರಿ 7ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಹಾ ಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಫೆ.26ರಂದು ಸಮಾರೋಪ ಸಮಾರಂಭ ನಡೆಯಲಿದೆ.

ಚಿತ್ರಗಳು : ಮಹಾಮಸ್ತಕಾಭಿಷೇಕದ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯಚಿತ್ರಗಳು : ಮಹಾಮಸ್ತಕಾಭಿಷೇಕದ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯ

Watch Mahamastakabhisheka 2018 live from anywhere

12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಾಭಿಷೇಕ ನೋಡಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಶ್ರವಣಬೆಳಗೊಳಕ್ಕೆ ಆಗಮಿಸಲು ಸಾಧ್ಯವಾಗದ ಜನರು ಸ್ಮಾರ್ಟ್‌ ಪೋನ್‌ಗಳ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?

ಜಿಲ್ಲಾಡಳಿತ ಕ್ಯೂರ್ ಆರ್ ಕೋಡ್ ಒಂದನ್ನು ಸಿದ್ಧಪಡಿಸಲಿದೆ. ಈ ಕೋಡ್‌ ಅನ್ನು ಸ್ಕ್ಯಾನ್ ಮಾಡುವ ಮೂಲಕ ಜನರು ಮಸ್ತಕಾಭಿಷೇಕದ ನೇರ ಪ್ರಸಾರವನ್ನು ವೀಕ್ಷಣೆ ಮಾಡಬಹುದಾಗಿದೆ.

ಮಸ್ತಕಾಭಿಷೇಕದ ವೇಳೆ ನೇರ ಪ್ರಸಾರ ನೀಡಲು ಬೇಕಾದ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ. ವಿಂದ್ಯಗಿರಿ ಪರ್ವತದಲ್ಲಿ ಮೊಬೈಲ್ ನೆಟ್‌ವರ್ಕ್‌ಗಳನ್ನು ಉತ್ತಮ ಪಡಿಸುವಂತೆ ಬಿಎಸ್‌ಎನ್‌ಗೆ ಮನವಿ ಮಾಡಲಾಗಿದೆ.

ಫೆಬ್ರವರಿ 17ರಿಂದ 26ರ ತನಕ ಮಸ್ತಕಾಭಿಷೇಕ ಲೈವ್ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. 360 ಡಿಗ್ರಿ ಕೋನದಲ್ಲಿ ಲೈವ್ ಪ್ರಸಾರವಾಗಲಿದ್ದು, ಸ್ಮಾರ್ಟ್ ಪೋನ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

English summary
The Hassan district administration is making preparations to live stream mahamastakabhisheka 2018. People with a smartphone or VR glass can see live from anywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X