ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಪ್ರೀತಂ ಗೌಡ ಸ್ಪಷ್ಟನೆ

ಹಾಸನ, ಫೆಬ್ರವರಿ 19: ಆಪರೇಷನ್ ಕಮಲ ಎನ್ನಲಾದ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಂಗದಲ್ಲಿ ತನಿಖೆ ನಡೆಯುತ್ತಿದೆ, ಆ ಧ್ವನಿ ನನ್ನದಲ್ಲ ಕಾನೂನಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ನಾನು ಯಾವುದೇ ರಾಜಕೀಯ ವೈಷಮ್ಯ ಮಾಡಿಲ್ಲ. ನನ್ನ ಶತ್ರುವಾದರೂ ವೈಯಕ್ತಿಕವಾಗಿ ಮಾತನಾಡುತ್ತೇನೆ. ನನಗೆ ಯಾರೂ ಶತೃಗಳಿಲ್ಲ. ನಾನು ಹಾಸನದಲ್ಲಿ ಇಲ್ಲದ್ದನ್ನು ಗಮನಿಸಿ ಈ ಘಟನೆ ನಡೆದಿರುವುದು ಖಂಡನೀಯ ಎಂದು ಹೇಳಿದರು.

ಕಾನೂನು ಪ್ರಕಾರ ನ್ಯಾಯಾಂಗ ತನಿಖೆ ಎದುರಿಸುತ್ತೇನೆ. ಒಬ್ಬ ಯುವಕನ ಮೇಲೆ ಯಾವ ರೀತಿ ರಾಜಕೀಯವಾಗಿ ದಾಳಿ ಮಾಡುವಾಗ ಯೋಚನೆ ಮಾಡಿ ಮಾಡಬೇಕು. ಒಮ್ಮೆಲೇ ಪ್ರಯೋಗ ಮಾಡಿದರೆ ಹೇಗೆ? ರಾಜಕಾರಣ ಮಾನವೀಯತೆಯ ಒಂದು ಭಾಗ ಎಂದು ಹೇಳಿದರು.

Voice is not mine as operation lotus audio says preetham gowda

ಹಾಸನ ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಒಬ್ಬರು ಸರ್ಕಾರಿ ಕಾರಿನಲ್ಲಿ ಓಡಾಡುತ್ತಾರೆ. ಮತ್ತೊಬ್ಬರು ವೇದಿಕೆಯಲ್ಲಿ ಬಂದು ಕೂರುತ್ತಾರೆ. ಮುಂದಿನ ಲೋಕಸಭಾ ಚುನಾವಣೆಗೆ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಕಾರ್ಯಕರ್ತರ ಸಂಕಲ್ಪ.

ಹಾಗಾಗಿ ಮುಂದಿನ ದಿನಗಳಲ್ಲಿ ಅದಕ್ಕಾಗಿ ಕಾರ್ಯನಿರ್ವಹಿಸುತ್ತೇವೆ. ಪಕ್ಷ ಹೇಳಿದಂತೆ ಕಾರ್ಯನಿರ್ವಹಿಸುತ್ತೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ, ಬಗ್ಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+