ಹಾಸನ ಜಿಲ್ಲೆಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ, ಕೋಟ್ಯಂತರ ರೂಪಾಯಿ ಹಣ ಪೋಲು, ಜನಾಕ್ರೋಶ
ಹಾಸನದಲ್ಲಿ ಅವೈಜ್ಞಾನಿ ರಸ್ತೆ ಕಾಮಗಾರಿ ಮಾಡಲಾಗಿದ್ದು, ಜನರು ನಮ್ಮ ಹಣವನ್ನು ಸುಮ್ಮನೆ ವ್ಯರ್ಥ ಮಾಡಿದ್ದಾರೆ ಎಂದು ಅಧಿಕಾರಿಗಳ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ ರಸ್ತೆ ಕಾಮಗಾರಿಗೆ ತಗುಲಿದ ವೆಚ್ಚ ಎಷ್ಟು ಎಂದು ಇಲ್ಲಿ ತಿಳಿಯಿರಿ.
ಹಾಸನ, ಫೆಬ್ರವರಿ, 05: ಹಾಸನ ನಗರದ ಹಲವು ಬಡಾವಣೆಗಳಿಗೆ ರಸ್ತೆ ಬೇಕು ಅಂತಾ ತುಂಬಾ ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಹೋರಾಟದ ಫಲವಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡಿ ಕಾಂಕ್ರಿಟ್ ರಸ್ತೆಯನ್ನೇನೋ ನಿರ್ಮಾಣ ಮಾಡಿದರು. ಆದರೆ ನೂತನವಾಗಿ ನಿರ್ಮಾಣ ಮಾಡಿರುವ ರಸ್ತೆಯನ್ನು ಹೊಡೆದು ಹಾರುತ್ತಾ ಇದ್ದಾರೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಹಾಸನದ ಜಯನಗರ, ಭಗತ್ ಸಿಂಗ್ ರಸ್ತೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ನೂತನವಾಗಿ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಕೋಟ್ಯಂತರ ಹಣವನ್ನು ಖರ್ಚು ಮಾಡಿ ಯುಜಿಡಿಯನ್ನು ನಿರ್ಮಿಸದೇ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ ಯುಜಿಡಿ ಮಾಡುವುದಕ್ಕೆ ಕಾಂಕ್ರಿಟ್ ರಸ್ತೆಯನ್ನು ಒಡೆಲಾಗುತ್ತಿದೆ. ರಸ್ತೆಯ ಮಧ್ಯಭಾಗ, ಪ್ರತೀ ಮನೆಯ ಬಳಿ ಕಾಂಕ್ರಿಟ್ ರಸ್ತೆಯನ್ನು ಒಡೆದು, ಯುಜಿಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜನಾಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿಗಳು
ಈ ಬಡಾವಣೆಗಳಿಗೆ ಹಲವು ವರ್ಷಗಳು ರಸ್ತೆಯೇ ಇರಲಿಲ್ಲ. ಸ್ಥಳಿಯ ನಿವಾಸಿಗಳ ಒತ್ತಾಯದ ಮೇಲೆ ಡಾಂಬರ್ ರಸ್ತೆಯನ್ನು ಮಾಡಲಾಗಿತ್ತು. ಹೊಸದಾಗಿ ನಿರ್ಮಾಣ ಮಾಡಿರುವ ರಸ್ತೆಯನ್ನೇ ಒಡೆದು ಹಾಕುತ್ತಿರುವುದರಿಂದ ವಾಹನಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಸ್ಥಳಿಯ ಜನರು ಧೂಳು ಹಾಗೂ ರಿಪೇರಿ ಕಾಮಾಗಾರಿ ಮಾಡುತ್ತಿರುವ ರಸ್ತೆಯಲ್ಲಿಯೇ ಓಡಾಡುವಂತೆ ಆಗಿದೆ. ನಮ್ಮಿಂದ ತೆರಿಗೆಯನ್ನು ವಸೂಲಿ ಮಾಡಿಕೊಂಡು ಹೀಗೆ ಪೋಲು ಮಾಡುತ್ತಾ ಇರೋದು ಎಷ್ಟು ಸರಿ? ಅಂತಾ ಸ್ಥಳಿಯರು ಪ್ರಶ್ನಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಕಾಂಟ್ರಿಕ್ ರಸ್ತೆ ನಿರ್ಮಿಸಿರುವುದಕ್ಕೆ ಕೋಟ್ಯಂತರ ಖರ್ಚು ಮಾಡಿದ್ದಲ್ಲದೇ, ಇದೀಗ ರಸ್ತೆಯನ್ನು ಒಡೆದು, ರಿಪೇರಿ ಕಾರ್ಯಕ್ಕೂ ಹಣ ವ್ಯವಹಿಸಬೇಕಿದೆ. ಸರ್ಕಾರದ ಹಣವನ್ನು ಹೀಗೆ ಬೇಕಾಬಿಟ್ಟಿ ಖರ್ಚು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒತ್ತಾಯ ಆಗಿದೆ.

ಕಡಿಮೆ ದರಕ್ಕೆ ಹರಾಜು
ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸದೆ ತರಾತುರಿಯಲ್ಲಿ ವಾಜಪೇಯಿ ಬಡಾವಣೆಯಲ್ಲಿರುವ 50 ಮೂಲೆ ನಿವೇಶನಗಳನ್ನು ಕಡಿಮೆ ದರಕ್ಕೆ ಹರಾಜು ಮಾಡಲಾಗಿದೆ. ಈ ಮೂಲಕ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಹರಾಜು ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ನಗರದ ಹೊರ ವಲಯದ ಇಂದಾವರ ಗ್ರಾಮದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸದಾಗಿ ವಾಜಪೇಯಿ ಬಡಾವಣೆ ರಚನೆಯಾಗಿದೆ. ಆದರೆ, ಈ ಬಡಾವಣೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಉದ್ಯಾನವನ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದಿಲ್ಲ. ಯಾವುದೇ ನಿವೇಶನಗಳನ್ನು ಹರಾಜು ಮಾಡುವ ಮೊದಲು ಮೂಲ ಸೌಕರ್ಯಗಳನ್ನು ನೀಡಬೇಕು. ಆದರೆ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಹರಾಜು ನಡೆಸಲು ನಗರಾಭಿವೃದ್ಧಿ ಪ್ರಾಧಿಕಾರ ತರಾತುರಿಯಲ್ಲಿ ದಿನಾಂಕ ನಿಗಧಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅನುಮಾನಕ್ಕೆ ಕಾರಣವಾದ ತರಾತುರಿ ಹರಾಜು
ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೊದಲೇ 50 ಮೂಲೆ ನಿವೇಶನಗಳನ್ನು ಹರಾಜಿಗೆ ಇಡುವುದರಿಂದ ಜನರು ಕಡಿಮೆ ದರಕ್ಕೆ ಹರಾಜು ಕೂಗುವುದರಿಂದ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರಕ್ಕೆ ದೊಡ್ಡ ನಷ್ಟ ಉಂಟಾಗಲಿದೆ. ಜೊತೆಗೆ ತರಾತುರಿಯಲ್ಲಿ ಹರಾಜು ಮಾಡಲು ಹೊರಟಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧಿಕಾರಿಕಾರಿಗೆ ನೀಡಿದ ಮನವಿಯಲ್ಲಿ ಹೇಳಿದ್ದಾರೆ. ಹಾಗೆಯೇ ಮೂಲೆ ನಿವೇಶನಗಳನ್ನು ಹರಾಜು ಮಾಡಲು ಉದ್ದೇಶಿಸಿರುವುದನ್ನು ರದ್ದುಗೊಳಿಸಬೇಕು. ಈ ಮೂಲಕ ಸರ್ಕಾರದ ಖಜಾನೆಗೆ ಆಗಲಿರುವ ನಷ್ಟವನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications