ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ-ಮಂಗಳೂರು ರೈಲು ಮಾರ್ಗ ಸಂಚಾರಕ್ಕೆ ಸಿದ್ಧ

By Gururaj
|
Google Oneindia Kannada News

ಹಾಸನ, ಜೂನ್ 12 : ಬೆಂಗಳೂರು-ಮಂಗಳೂರು ನಡುವಿನ ರೈಲು ಸೇವೆ ಇಂದು ಸಂಜೆ ಪುನಃ ಆರಂಭವಾಗಲಿದೆ. ಗುಡ್ಡ ಕುಸಿತಗೊಂಡಿದ್ದರಿಂದ ಸೋಮವಾರ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿ

ಭಾರೀ ಮಳೆಯಿಂದಾಗಿ ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮೂರು ಕಡೆ ಗುಡ್ಡ ಕುಸಿದಿದ್ದು, ಶಿರವಾಗಿಲು ಸೇರಿ ಎರಡು ಕಡೆ ಮರಗಳು ರೈಲು ಹಳಿಯ ಮೇಲೆ ಬಿದ್ದಿದ್ದವು. ಆದ್ದರಿಂದ ಸೋಮವಾರ ಹಾಸನ ಮೂಲಕ ಮಂಗಳೂರಿಗೆ ಸಾಗುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು.

Train services to begin on Hassan-Mangaluru line

ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಗಲಿರುವ ಶ್ರಮಿಸಿ ರೈಲು ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಇಂದು ಸಂಜೆಯಿಂದಲೇ ರೈಲು ಸೇವೆ ಪುನಃ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತಮಳೆ, ಗುಡ್ಡ ಕುಸಿತ : ಹಾಸನ-ಮಂಗಳೂರು ರೈಲು ಸ್ಥಗಿತ

ಭಾರೀ ಮಳೆಯ ಕಾರಣ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆ ಮೇಲೆ ಬಿದ್ದಿದ್ದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಲಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಪುನರಾರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಎರಡೂ ಕಡೆಗಳಲ್ಲಿ ಒಟ್ಟು 210 ವಾಹನಗಳು ರಸ್ತೆ ಮಧ್ಯೆ ಸಿಲುಕಿದ್ದವು. ಅವುಗಳಲ್ಲಿ ಸುಮಾರು 1,500 ಮಂದಿ ಇದ್ದರು' ಎಂದು ಹೇಳಿದ್ದಾರೆ.

English summary
Train services between Hassan and Mangaluru have been suspended after following a landslide at three places. Train services to begin from June 12, evening, track now cleared for rail service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X