ಹಾಸನದಲ್ಲಿ ಹೆಚ್ಚಾಯ್ತು ಮತಾಂತರ ಕೇಸ್; ಬ್ರೇಕ್ ಯಾವಾಗ?

ಹಾಸನ, ಅಕ್ಟೋಬರ್ 26: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಅಂತಾ ಒಂದು ಕಡೆ ಒತ್ತಾಯಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ ಮತಾಂತರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇವೆ.

ಇನ್ನು ಇತ್ತ ಹಾಸನದಲ್ಲೊಂದು ಮತಾಂತರ ಕೇಸ್ ಪತ್ತೆಯಾಗಿದ್ದು, ತಾಯಿಯನ್ನು ಮತಾಂತರ ಮಾಡಿದ್ದಾರೆಂದು ಮಗನೇ ಪೊಲೀಸರಿಗೆ ದೂರು ನೀಡಿದ್ದಾನೆ. ಮಗ ಬೆಂಗಳೂರಿನಲ್ಲಿ ವಾಸವಿದ್ದ ಸಮಯದಲ್ಲಿ ತಾಯಿಯನ್ನೇ ಮತಾಂತರ ಮಾಡಿದ್ದಲ್ಲದೇ, ಕಿಡ್ನಾಪ್ ಮಾಡಿದ್ದಾರೆ. ಅಲ್ಲದೇ ತನ್ನ ಜಮೀನಿನಲ್ಲಿದ್ದ ಸಣ್ಣ ಗುಡಿಯಲ್ಲಿ ನೆಲ ಸಮಮಾಡಿ, ಚರ್ಚ್ ಮಾಡುವುದಕ್ಕೆ ಮುಂದಾಗಿದ್ದಾರೆಂದು ಮಗ ಗಂಭೀರವಾಗಿ ಆರೋಪಿಸಿದ್ದಾನೆ.

ಹೌದು. ಇಂತಹದ್ದೊಂದು ಪ್ರಕರಣ ನಡೆದಿರುವುದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಸಮೀಪದ ಮರಗೂರು ಗ್ರಾಮದಲ್ಲಿ. ಗ್ರಾಮದ ಅರವಿಂದ್ ಯೋಗರಾಜ್ ಎಂಬಾತ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಗ್ರಾಮದಲ್ಲಿ ತನ್ನ 65 ವರ್ಷದ ತಾಯಿ ಪುಟ್ಟಮ್ಮ ವಾಸವಿದ್ದರು.

Hassan: Son Complained To The Police That The Mother Had Been Converted

ಪುಟ್ಟಮ್ಮ ಕಳೆದ ಎಂಟು ವರ್ಷದಿಂದ ಸಮೀಪದ ಮೈನ್ಸ್ ಒಂದರಲ್ಲಿ ಕೆಲಸವನ್ನೂ ಮಾಡ್ಕೊಂಡಿದ್ದರು. ಕೆಲವರು ನನ್ನ ತಾಯಿಗೆ ಇಲ್ಲ ಸಲ್ಲದ ಆಸೆ ಹಾಗೂ ಬೆದರಿಕೆಯನ್ನು ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಅಲ್ಲದೇ ನನ್ನ ಜಮೀನಿನಲ್ಲಿದ್ದ ಮಾಸ್ತಮ್ಮ ಗುಡಿಯನ್ನು ನೆಲಸಮ ಮಾಡಿ ಚರ್ಚ್ ಮಾಡುವುದಕ್ಕೆ ಮುಂದಾಗಿದ್ದರು.

ಈ ವಿಚಾರ ಗೊತ್ತಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ನಾನು ಪುನಃ ದೇವಾಲಯ ನಿರ್ಮಾಣ ಮಾಡಿದ್ದೆ, ಇದೀಗ ನನ್ನ ತಾಯಿ ನಾಪತ್ತೆಯಾಗಿದ್ದಾರೆ. ದಯಮಾಡಿ ಈ ಮತಾಂತರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಮಗ ಅರವಿಂದ್ ಯೋಗರಾಜ್ ಆರೋಪಿಸಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ನನ್ನ ತಾಯಿ ವಾಸವಿದ್ದ ಮನೆಯನ್ನು ಖಾಲಿ‌ ಮಾಡಿಸಿದವರ ವಿರುದ್ಧ ಕ್ರಮ ಕೈಕೊಂಡು, ವಾಪಸ್ಸು ಹಿಂದೂ ಧರ್ಮಕ್ಕೆ ಕರೆತನ್ನಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ವಿಶ್ವ ಹಿಂದೂ ಪರಿಷತ್‌ಗೆ ಮಗ ಅರವಿಂದ್ ಯೋಗರಾಜ್ ದೂರ ನೀಡಿದ್ದಾರೆ.

Hassan: Son Complained To The Police That The Mother Had Been Converted

ಹಾಸನ ಜಿಲ್ಲೆಯೊಂದರಲ್ಲೇ ನಾಲ್ಕು ಲಕ್ಷ ಮಂದಿ ಮತಾಂತರಗೊಂಡಿದ್ದು, ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು, ಮತಾಂತರಗಳ ವಿರುದ್ಧ ಗಂಭೀರ ಕ್ರಮಗೊಳ್ಳಬೇಕೆಂದು ಹಿಂದೂ ಸಂಘಟನೆಯ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ.

ಇಲ್ಲಿ ಬಲವಂತವಾಗಿ ತಾಯಿಯನ್ನು ಮತಾಂತರ ಮಾಡಿದ್ದಾರೋ, ಇಲ್ಲವೋ ಎಂಬುದು ಪೊಲೀಸರ ತನಿಖೆಯಿಂದ ಹೊರಬೇಕು. ಒಟ್ಟಿನಲ್ಲಿ ಹಿಂದೂಪರ ಸಂಘಟನೆಗಳು ಒತ್ತಾಯ ಮಾಡುತ್ತಿರುವಂತೆ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರಷ್ಟೇ ಇಂತಹ ಮತಾಂತರ ಪ್ರಕರಣಗಳಿಗೆ ಬ್ರೇಕ್ ಬಿದ್ದಂತಾಗುತ್ತದೆ.

ಹಾಸನದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು
ಹಾಸನದ ರಾಜೀವ್‌ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಂದೇಶ್ (20) ನೇಣಿಗೆ ಶರಣಾಗಿದ್ದು, ಮೃತ ವಿದ್ಯಾರ್ಥಿ ಅರಸೀಕೆರೆ ತಾಲ್ಲೂಕಿನ ಹಿರಿಯಾಳು ಗ್ರಾಮದವನಾಗಿದ್ದಾನೆ.

ಸಾಯುವ ಮುನ್ನ ವಿಡಿಯೋ ಮಾಡಿರುವ ಸಂದೇಶ್, ಎಜುಕೇಶನ್ ‌ಸಿಸ್ಟಂನಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಂ ಇದ್ದರೂ ಇಲ್ಲದಂತಾಗಿದೆ. ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ನ್ಯೂಸ್ ಚಾನಲ್, ಟ್ವಿಟರ್, ಫೇಸ್‌ಬುಕ್, ವಾಟ್ಸಪ್ ಎಲ್ಲದರಲ್ಲೂ ಈ ವಿಡಿಯೋ ಅಪ್‌ಲೋಡ್ ಮಾಡಿ ಎಂದು ಹೇಳಿದ್ದಾನೆ.

Hassan: Son Complained To The Police That The Mother Had Been Converted

ನನ್ನ ಸುಟ್ಟರೆ ಬೂದಿಯಾಗುತ್ತದೆ, ಮಣ್ಣು ಮಾಡಿದರೆ ಕೊಳೆಯುತ್ತದೆ, ಆದ್ದರಿಂದ ನನ್ನ ಅಂಗಾಂಗಳನ್ನು ದಾನ ಮಾಡಿ. ಜಗದ್ಗುರು ನಿರ್ಮಲಾನಂಧನಾಥ ಸ್ವಾಮೀಜಿ ಆಶೀರ್ವಾದ ಪಡೆಯುವುದು ನನ್ನ ಜೀವನದ ಆಸೆಯಾಗಿತ್ತು. ಸಿಎಂ, ಎಜುಕೇಶನ್ ಮಿನಿಸ್ಟರ್, ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ನಾನು ಬೋರ್ಡಿಂಗ್‌ನಲ್ಲಿ ಇದ್ದಾಗಲೂ ಅಪ್ಪ‌- ಅಮ್ಮನ ಪ್ರೀತಿಯನ್ನು ಮಿಸ್ ಮಾಡಿಕೊಂಡೆ, ಈಗಲೂ ಮಿಸ್ ಮಾಡಿಕೊಳ್ಳುತ್ತೇನೆ. ಎರಡು ವರ್ಷ ನನಗೆ ಒಳ್ಳೆಯ ಸ್ನೇಹ ನೀಡಿದ ಸಿಂಚು ನಿನಗೆ ಥ್ಯಾಂಕ್ಸ್. ಸಿಂಚನ‌ ನನ್ನ ಅಂತ್ಯಕ್ರಿಯೆಯಲ್ಲಿ ನೀನು ಭಾಗವಹಿಬೇಕು ಎಂದು ಹೇಳಿ ನಂತರ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾನೆ.

Recommended Video

      Sachin Tendulkar ಅವರು Shami ವಿಚಾರವಾಗಿ ಹೇಳಿದ್ದೇನು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+