ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
Recommended Video

ಹಾಸನ, ಆಗಸ್ಟ್ 24: ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜಕೀಯ ಎನ್ನುವುದು ಇಂದಿನ ದಿನಗಳಲ್ಲಿ ಹಣ, ಜಾತಿಯ ಆಧಾರದ ಮೇಲೆ ನಿಂತಿದೆ, ಇದು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಎನಿಸಿಕೊಳ್ಳುವುದಿಲ್ಲ, ಒಂದು ಹುದ್ದೆಯನ್ನು ಅಲಂಕರಿಸಿದ ಮೇಲೆ ಎಲ್ಲ ಜಾತಿ, ಧರ್ಮದ ಪರವಾಗಿಯೂ ಕೆಲಸ ಮಾಡಬೇಕಾಗುತ್ತದೆ.
ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಕೆಲಸ ಮಾಡಿದರೆ ಜನನಾಯಕ ಎಂದು ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜನರು ಉತ್ತಮ ಕೆಲಸ ಮಾಡುವವರನ್ನು ಗೆಲ್ಲಿಸಬೇಕು, ನಾನು ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ಎಲ್ಲರೂ ಒಂದಾಗಿದ್ದಾರೆ, ಒಳಗೊಳಗೆ ಪಿತೂರಿಗಳು ಸಾಕಷ್ಟು ನಡೆಯುತ್ತಿರುತ್ತದೆ.

ಆದರೆ ನನ್ನ ಐದು ವರ್ಷ ಆಡಳಿತದಲ್ಲಿ ಎಲ್ಲಾ ಜಾತಿಯ ಬಡ ವರ್ಗದವರಿಗೆ ಸಹಾಯ ಮಾಡಿದ್ದೇನೆ, ಜನರು ಮತ್ತೆ ನನಗೆ ಆಶೀರ್ವಾದ ಮಾಡುತ್ತಾರೆ, ನಾನು ಸಿಎಂ ಆಗೇ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ನಾನು ಯಾರಿಗೂ ಹೆದರುವುದಿಲ್ಲ, ಮುಂದೆಯೂ ಹೋರಾಡುತ್ತೇನೆ ಎಂದರು.











Click it and Unblock the Notifications