ಹಿರಿಯ ಅಧಿಕಾರಿಗಳೇ ಹೊಣೆ : ಎಸಿ ವಿಜಯಾ ತಾಯಿ ಆರೋಪ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹಾಸನ, ಜುಲೈ 22 : "ನನ್ನ ಮಗಳು ವಿಜಯಾ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಕ್ಕೆ ಹಿರಿಯ ಅಧಿಕಾರಿಗಳೇ ಕಾರಣ. ಜಿಲ್ಲಾಧಿಕಾರಿ ಉಮೇಶ್ ಎಚ್.ಕುಸುಗಲ್ ಮತ್ತು ಅಪರ ಜಿಲ್ಲಾಧಿಕಾರಿ ಜಾನಕಿಯವರೇ ನೇರಹೊಣೆ" ಎಂದು ಹಾಸನದ ಉಪವಿಭಾಗಾಧಿಕಾರಿ ವಿಜಯಾ ಅವರ ತಾಯಿ ಸಮಿತ್ರಮ್ಮ ಆರೋಪಿಸಿದ್ದಾರೆ.

ಹಾಸನದ ಉಪವಿಭಾಗಾಧಿಕಾರಿ ವಿಜಯಾ ಅವರು ಮನನೊಂದು ಮನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದೆ. ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಅವರು ಯತ್ನಿಸಿದ್ದರು. ಹಾಸನ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಹಿಮ್ಸ್)ಗೆ ಅವರನ್ನು ದಾಖಲಿಸಲಾಗಿದೆ. [ಮನೆಯಲ್ಲೆ ಆತ್ಮಹತ್ಯೆಗೆ ಯತ್ನಿಸಿದ ಹಾಸನ ಎಸಿ ವಿಜಯಾ]

Senior officials responsible for daughter's suicide attempt : Mother of Vijaya

ಹಿರಿಯ ಅಧಿಕಾರಿಗಳಿಂದ ಆರೋಪಕ್ಕೊಳಗಾಗಿದ್ದೇನೆಂದು ಆರೋಪಿಸಿ ಮಹಿಳಾ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದು ಒಂದು ವಾರದಲ್ಲಿ ಇದು ಎರಡನೇಯದು. ಜುಲೈ 19ರಂದು ಬೆಂಗಳೂರಿನಲ್ಲಿ ಪಿಎಸ್ಐ ರೂಪಾ ತಂಬದ್ ಅವರು ಮಾತ್ರೆ ನುಂಗಿ ಜೀವ ನೀಗಿಕೊಳ್ಳಲು ಯತ್ನಿಸಿದ್ದರು. [ಪಿಎಸ್ ಐ ರೂಪಾ ಹೇಳಿಕೆ ಇಲ್ಲದ ವರದಿ ಮೇಘರಿಕ್ ಕೈಗೆ!]
Senior officials responsible for daughter's suicide attempt : Mother of Vijaya

ವಿಜಯರವರ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರನ್ನ ಕಳೆದ ತಿಂಗಳು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಆಕೆಯ ಸ್ಥಾನಕ್ಕೆ ಎಚ್.ಎಲ್. ನಾಗರಾಜು ಬಂದಿದ್ದರು. ಆದರೆ ಸರ್ಕಾರಕ್ಕೆ ಸೆಡ್ಡು ಹೊಡೆದು ಕೆಎಟಿ ಮೊರೆಯೋಗಿ ಮತ್ತೆ ಎಸಿ ಸ್ಥಾನದಲ್ಲಿ ಅವರು ಮುಂದುವರೆದಿದ್ದರು.

ಕಳೆದ ಒಂದೂವರೆ ವರ್ಷದಿಂದ ಹಾಸನದ ಉಪವಿಭಾಗಾಧಿಕಾರಿಯಾಗಿ ವಿಜಯಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರ ಮೇಲೆ ಬಹಳಷ್ಟು ಆರೋಪಗಳನ್ನು ಸಾರ್ವಜನಿಕರು ಮಾಡುವ ಮೂಲಕ ಪ್ರತಿಭಟನೆಯನ್ನು ನಡೆಸಿದ್ದರು. [ಕರ್ನಾಟಕದ ಪೊಲೀಸರು ಸಮೂಹಸನ್ನಿಗೊಳಗಾಗಿದ್ದಾರಾ?]

Senior officials responsible for daughter's suicide attempt : Mother of Vijaya

ಆರೋಪಗಳಿಗೆ ಸಂಬಂಧಿಸಿದ ವಿಚಾರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಅವರು ಸಂಜೆ ವೇಳೆಗೆ ಮನೆಗೆ ಬಂದು ಏಕಾಏಕಿ ತನ್ನ ರೂಮಿನ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Senior officials responsible for daughter's suicide attempt : Mother of Vijaya

ಆಸ್ಪತ್ರೆಗೆ ಎಎಸ್ಪಿ ಶೊಭಾರಾಣಿ, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಇದಾದ ಬಳಿಕ ಮಾಜಿ ಸಚಿವ ಎಚ್.ಡಿ. ರೇವಣ್ಣ, ಕ್ಷೇತ್ರದ ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ಭೇಟಿ ನೀಡಿ ವಿಚಾರಿಸಿದರು.
Senior officials responsible for daughter's suicide attempt : Mother of Vijaya

ಎಸಿ ವಿಜಯಾ ಆತ್ಮಹತ್ಯೆಗೆ ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ರೇವಣ್ಣ, ಅವರು ಇಂತಹ ಘಟನೆ ನಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ನಡುವೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆ ಮುಂದೆ ಕೆಲ ಗಂಟೆಗಳ ಕಾಲ ಕುಳಿತು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. [ಗಣಪತಿ ಆತ್ಮಹತ್ಯೆ ಕೇಸ್: ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior officials are responsible for daughter's suicide attempt, mother of Vijaya has alleged. AC Vijaya tried to end her life by hanging at her home, alleging harassment by highter authorities. She has been admitted to Hassan Institute of Medical Science.
Please Wait while comments are loading...