ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಸನದಲ್ಲಿ ಹೊಸ ಲಾಕ್ ಡೌನ್ ನಿಯಮ ಜಾರಿ

ಹಾಸನ, ಜುಲೈ 6: ಕೊರೊನಾ ಕೇಸುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಶಾಸಕ ಪ್ರೀತಂ ಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಲಾಕ್ ಡೌನ್ ನಲ್ಲಿ, ಮಂಗಳವಾರದಿಂದ (ಜು 7) ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

Recommended Video

      ಚಿತ್ರದುರ್ಗ ರೈತನ ಬದುಕನ್ನು ನಾಶ ಮಾಡಿದ ಕೊರೊನ | Chitradurga | Oneindia Kannada

      ಜುಲೈ 3-5ರ ಅವಧಿಯಲ್ಲಿ ಜಿಲ್ಲೆಯಲ್ಲಿ 52 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು ಎಂಟು ಮಂದಿ ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿ, ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 231.

      ನಗರದ ನಗರಸಭಾ ಸಭಾಂಗಣದಲ್ಲಿ ವರ್ತಕರು, ಸಾರ್ವಜನಿಕರ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ. ಹಾಗೆಯೇ, ಇದು ನಾಳೆಯಿಂದಲೇ ಜಾರಿಗೆ ಬರಲಾಗಿದೆ.

      New Lock System In Hassan From July 7, Saturday And Sunday Complete Close Down

      ಸಭೆಯಲ್ಲಿ ತೀರ್ಮಾನವಾದಂತೇ, ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಾತ್ರ ವ್ಯಾಪಾರ, ವಹಿವಾಟು ನಡೆಸಲು ನಿರ್ಧರಿಸಲಾಗಿದೆ.

      ಹಾಗೆಯೇ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲು ಬಹುಮತದಿಂದ ತೀರ್ಮಾನಿಸಲಾಗಿದೆ. "ಮುಂದಿನ ಸೋಮವಾರ ಕೊರೋನ ಸೋಂಕಿನ ಹರಡುವ ಸಾಧ್ಯತೆಗಳ ಕುರಿತು ಮತ್ತೆ ಸಭೆ ನಡೆಸಲಾಗುವುದು" ಶಾಸಕ ಪ್ರೀತಂ ಗೌಡ ಟ್ವೀಟ್ ಮಾಡಿದ್ದಾರೆ.

      ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಸೋಂಕಿತರು ಬಿಡುಗಡೆಯನ್ನು ಹೊಂದಿಲ್ಲ. ಇದುವರೆಗೆ ಒಟ್ಟಾರೆಯಾಗಿ 253 ಮಂದಿ ಬಿಡುಗಡೆ ಹೊಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+