ವಾಟ್ಸಪ್ ಮೆಸೇಜ್,ಒಂದು ಮದುವೆ ನಿಲ್ಲಿಸಿ, ಮತ್ತೊಂದು ಮದುವೆ ಮಾಡಿಸ್ತು

ಸಕಲೇಶಪುರ, ನವೆಂಬರ್ 30: ನೀವು ಸಿನಿಮಾಗಳಲ್ಲಿ ನೋಡಿಯೇ ಇರ್ತೀರಾ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಿಲ್ಲಿಸಿ ಎಂದು ಪ್ರಿಯಕರನೋ ಅಥವಾ ಪೊಲೀಸ್ ಬರುತ್ತಾರೆ. ಆದರೆ ತಾಳಿ ಕಟ್ಟುವ ಸಸಮಯದಲ್ಲಿ ಬಂದ ವಾಟ್ಸಪ್ ಸಂದೇಶವೊಂದು ಮದುವೆ ಮುರಿದುಬೀಳುವಂತೆ ಮಾಡಿದೆ.

ಇನ್ನೇನು ತಾಳಿ ಕಟ್ಟಲು ಕೆಲವೇ ನಿಮಿಷಗಳು ಬಾಕಿ ಇದ್ದಾಗ ಬಂದ ವಾಟ್ಸಪ್ ಸಂದೇಶದಿಂದ ಹಿರಿಯರು ನಿಶ್ಚಯಿಸಿದ್ದ ಮದುವೆ ನಿಂತು ಹೋಗಿದೆ.

ಪಟ್ಟಣದ ಶೀನಪ್ಪನಶೆಟ್ಟಿ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಬೈಕೆರೆ ಗ್ರಾಮದ ಯೋಧ ತಾರೇಶ್ ಜೊತೆ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಶ್ರುತಿ ಎಂಬುವವರ ವಿವಾಹ ಗುರುವಾರ ನಿಶ್ಚಯವಾಗಿತ್ತು. ಎಲ್ಲಾ ಶಾಸ್ತ್ರಗಳು ಸಾಂಗವಾಗಿ ನೆರವೇರುತ್ತಿದ್ದವು.

Marriage cancelled beacause of whatsApp message

ಆಕೆ, ತಾಳಿ ಕಟ್ಟಲು ಕೆಲ ನಿಮಿಷಗಳು ಬಾಕಿ ಇದ್ದಾಗ ವರನ ಮೊಬೈಲ್ ಫೋನ್‌ಗೆ ವಧುವಿನ ಪ್ರಿಯತಮ ಆಕೆಯ ಜತೆಗಿರುವ ಫೋಟೊಗಳನ್ನು ಕಳುಹಿಸಿದ್ದಾನೆ. ಕೂಡಲೇ ವರ ಈ ಹುಡುಗಿಯನ್ನು ಮದುವೆ ಆಗಲ್ಲ ಎಂದು ಮಂಟಪದಿಂದ ಹೊರ ನಡೆದಿದ್ದಾನೆ. ನಂತರ ವಧುಬಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ನಂತರ ಪ್ರಿಯಕರನನ್ನು ಪೊಲೀಸ್ ಠಾಣೆಗೆ ಕರೆಸಿದ್ದಾರೆ. ವಧು ಪ್ರಿಯಕರನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ನಂತರ ಪ್ರೇಮಿಗಳ ಮದುವೆ ನೆರವೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+