ಹಾಸನ: ಪತ್ನಿ ಹತ್ಯೆ, ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ
ಹಾಸನ ಜುಲೈ.31: ಪತ್ನಿಯನ್ನು ಹತ್ಯೆ ಮಾಡಿದ್ದ ಪತಿಗೆ ಹಾಸನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹಲಸನಹಳ್ಳಿ ಗ್ರಾಮದ ಕುಮಾರ್ ಬಿನ್ ರಂಗಯ್ಯ ಅವರು 7 ವರ್ಷಗಳ ಹಿಂದೆ ಹಾಸನದ ಕೃಷ್ಣ ನಗರದ ವಾಸಿಯಾದ ಸರೋಜಮ್ಮ ಅವರ ಮಗಳಾದ ಸುನಿತ ರವರನ್ನು ಮದುವೆಯಾಗಿದ್ದರು. ಸ್ವಲ್ಪ ದಿನಗಳ ನಂತರ ಸುನಿತಾಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದರು.
ಸುನಿತಾಳು ತನ್ನ ವಸ್ತುಗಳನ್ನು ಬೇರೆಡೆಗೆ ಸಾಗಿಸಿಲ್ಲ ಎಂದು ಕೋಪಗೊಂಡು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದು ಈ ಕುರಿತು ಆತನ ವಿರುದ್ಧ ಹಾಸನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ವಿಚಾರಣೆ ನಡೆಸಿದ ಹಾಸನ ಮೂರನೇ ಅಪರ ಜಿಲ್ಲಾ ನ್ಯಾಯಾದೀಶರಾದ ಚಂದ್ರಶೇಖರ್ ಮರಗೂರು ರವರು ಆರೋಪಿಯ ಮೇಲಿನ ದೋಷಾರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿ ಎಚ್.ಆರ್.ಕುಮಾರ್ ಇವರಿಗೆ ಜೀವಾವಧಿ ಶಿಕ್ಷೆ ಹಾಗೂ 5000 ರೂ ದಂಡ ತುಂಬಲು ಆದೇಶಿರುತ್ತಾರೆ ತಪ್ಪಿದಲ್ಲಿ ಆರು ತಿಂಗಳು ಸದಾ ಸಜೆ ವಿಧಿಸಲು ಜು.23 ರಂದು ತೀರ್ಪು ನೀಡಿ ಆದೇಶಿಸಿದ್ದಾರೆ.












Click it and Unblock the Notifications