ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಆಗಲಿ-ಬಿಡಲಿ ಹಾಸನದಲ್ಲಿ ಚುನಾವಣೆ ಸ್ಪರ್ಧಿಸುವುದು ನಾವೇ: ರೇವಣ್ಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 01: ಮೈತ್ರಿ ಆಗಲಿ-ಬಿಡಲಿ ಹಾಸನದಲ್ಲಿ ಜೆಡಿಎಸ್‌ ನವರೇ ಚುನಾವಣೆಗೆ ನಿಲ್ಲುತ್ತಾರೆ ಅದರಲ್ಲಿ ಬೇರೆ ಮಾತಿಲ್ಲ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ನಿನ್ನೆ ಸಿದ್ದರಾಮಯ್ಯ ಅವರೊಂದಿಗೆ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಹಾಸನದಲ್ಲಿ ಕಾಂಗ್ರೆಸ್‌ಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಎ.ಮಂಜು ಒತ್ತಡ ಮಾಡಿದ್ದು ಅದರ ಬಗ್ಗೆ ರೇವಣ್ಣ ಹೀಗೆ ಪ್ರತಿಕ್ರಿಯಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ! ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿದ ಸಚಿವ ರೇವಣ್ಣ!

ಹಾಸನದಲ್ಲಿ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ. ಬೇಕಿದ್ದರೆ ತ್ರಿಕೋನ ಸ್ಪರ್ಧೆಯನ್ನೂ ಎದುರಿಸುತ್ತೇವೆ ಎಂದಿರುವ ರೇವಣ್ಣ, ಟಿಕೆಟ್ ಬಗ್ಗೆ ದೇವೇಗೌಡ ಅವರು ನಿರ್ಧರಿಸುತ್ತಾರೆ ಎಂದು ಹೇಳಿದರು.

JDS will contest from Hassan for Lok Sabha elections 2019: Revanna

ಹಾಸನದಲ್ಲಿ ಕಾಂಗ್ರೆಸ್ ಮುಖಂಡ ಎ.ಮಂಜು ಅವರು ರೇವಣ್ಣ ಕುಟುಂಬಕ್ಕೆ ಬಗಲ ಮುಳ್ಳಾಗಿದ್ದು, ಹಾಸನ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ಗೆ ಕಡ್ಡಾಯವಾಗಿ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿದ್ದಾರೆ.

ನಾನೇ ಭವಿಷ್ಯ ಹೇಳ್ತೀನಿ, ಸರ್ಕಾರಕ್ಕೆ ಯಾವ ಆಪತ್ತೂ ಇಲ್ಲ: ರೇವಣ್ಣ ನಾನೇ ಭವಿಷ್ಯ ಹೇಳ್ತೀನಿ, ಸರ್ಕಾರಕ್ಕೆ ಯಾವ ಆಪತ್ತೂ ಇಲ್ಲ: ರೇವಣ್ಣ

ಹಾಸನದಿಂದ ದೇವೇಗೌಡ ಅವರು ಸ್ಪರ್ಧಿಸಲಿ ನಮ್ಮ ಅಭ್ಯಂತರವಿಲ್ಲ ಆದರೆ ರೇವಣ್ಣ ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.

ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಲೋಕಸಭೆ ಚುನಾವಣೆಗೆ ಹಾಸನದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ಇದಕ್ಕೆ ಎ.ಮಂಜು ಮುಳ್ಳಾಗಿದ್ದಾರೆ. ಇದು ರೇವಣ್ಣ ಅವರ ಆಕ್ರೋಶಕ್ಕೆ ಕಾರಣವಾಗಿದೆ.

English summary
If coaltion happens or not happen in Lok Sabha elections 2019 between jds and congress, JDS will contest from Hassan for elections said minister and jds leader HD Revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X