• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಜ್ವಲ್ ರೇವಣ್ಣ ಸಸ್ಯಜ್ಞಾನ(?!) ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್

|
   ಎಂಪಿಯಾಗಿ ಮೊದಲ ಭಾಷಣದಲ್ಲೇ ಪ್ರಜ್ವಲ್ ರೇವಣ್ಣ ತಪ್ಪು | Oneindia Kannada

   ಹಾಸನ, ಜೂನ್ 13: ಜೆಡಿಎಸ್‌ನ ಏಕೈಕ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹಾಸ್ಯದ ಕಾರಣಕ್ಕೆ ಸುದ್ದಿಗೆ ಬಂದಿದ್ದಾರೆ ಪ್ರಜ್ವಲ್ ರೇವಣ್ಣ.

   ಮೊನ್ನೆ ಪರಿಸರ ದಿನಾಚರಣೆ ವೇಳೆ ಯಾವುದೋ ಕಾರ್ಯಕ್ರಮದಲ್ಲಿ ಜನರ ಬಳಿ ಮಾತನಾಡಿದ ರೇವಣ್ಣ ಅವರು ತಮ್ಮ ಪರಿಸರ ಜ್ಞಾನವನ್ನು ಪ್ರದರ್ಶಿಸಲು ಹೋಗಿ ಪಾಪ ಪೇಚಿಗೆ ಸಿಲುಕಿದ್ದಾರೆ.

   'ಇದು ಬಿಎಂಟಿಸಿ ಸೀಟಲ್ಲ, ಹಿರಿಯರಿಗೆ ಬಿಟ್ಟುಕೊಡೋಕೆ' ಟ್ವೀಟ್ ತಪರಾಕಿ

   ಗಿಡಗಳು ಕಾರ್ಬನ್ ಮಾನಾಕ್ಸೈಡ್ ಅನ್ನು ಒಡೆದು ಹಾಕಿ ಅದನ್ನು ಕಾರ್ಬನ್ ಡಯಾಕ್ಸೈಡ್ ಮಾಡುತ್ತದೆ ಎಂದೇನೋ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದ್ದು, ಸಂಸದ ಪ್ರಜ್ವಲ್ ರೇವಣ್ಣ ಅವರ ಪರಿಸರ ಪಾಂಡತ್ಯದ ಬಗ್ಗೆ ತರಹೇವಾರಿ ಕಮೆಂಟ್‌ಗಳು, ಪೋಸ್ಟ್‌ಗಳು ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಹರಿದಾಡುತ್ತಿದೆ.

   ಸಸ್ಯಗಳು ಇಂಗಾಲವನ್ನು (ಕಾರ್ಬನ್ ಡಯಾಕ್ಸೈಡ್) ಅನ್ನು ಹೀರಿಕೊಂಡು ಆಮ್ಲಜನಕವನ್ನು ನೀಡುತ್ತವೆ ಎಂದು ಹೇಳಲು ಹೋಗಿ ಪಾಪ ಕಾರ್ಬನ್ ಮಾನಾಕ್ಸೈಡ್ ಅನ್ನು ಒಡೆದು ಹಾಕಿ ಕಾರ್ಬನ್ ಡಯಾಕ್ಸೈಡ್ ಮಾಡುತ್ತದೆ ಎಂದು ಹೇಳಿ ವ್ಯಂಗ್ಯಕ್ಕೆ ಗುರಿ ಆಗಿದ್ದಾರೆ.

   ಅನರ್ಹಗೊಳ್ಳುವ ಭೀತಿಯಿಂದ ಪ್ರಜ್ವಲ್ ರಾಜೀನಾಮೆಗೆ ಮುಂದಾದರೆ?

   ಪ್ರಜ್ವಲ್ ರೇವಣ್ಣ ಪರವಾಗಿಯೂ ಕೆಲವರು ಪೋಸ್ಟ್ ಹಾಕಿದ್ದಾರೆ. ಎಂದೋ ಓದಿದ ರಸಾಯನ ಶಾಸ್ತ್ರ, ಜೀವಶಾಸ್ತ್ರಗಳು ಬಹುತೇಕರಿಗೆ ಮರೆತು ಹೋಗಿವೆ, ಅವರು ಅಚಾನಕ್ ಆಗಿ ಆಡಿದ ಮಾತಿಗಿಂತಲೂ ಅವರು ಮಾಡುವ ಕೆಲಸದ ಮೇಲೆ ಅವರನ್ನು ಅಳೆಯಿರಿ ಎಂದು ಮನವಿ ಮಾಡಿದ್ದಾರೆ.

   ಗೆದ್ದರೂ ಅನರ್ಹರಾಗುತ್ತಾರಾ? ಪ್ರಜ್ವಲ್ ರೇವಣ್ಣ ತಾತ್ಕಾಲಿಕ ಎಂಪಿ?

   ಇನ್ನೊಬ್ಬರು ಕಾರ್ಬನ್ ಮಾನಾಕ್ಸೈಡ್ (co) ಬಹಳ ಅಪಾಯಕಾರಿ, ಆದರೆ ಕಾರ್ಬನ್ ಡಯಾಕ್ಸೈಡ್ ಹಾಗಲ್ಲ ಆದ್ದರಿಂದ ಕಾರ್ಬನ್ ಮಾನಾಕ್ಸೈಡ್ ಅನ್ನು ಒಡೆದು ಕಾರ್ಬನ್ ಡಯಾಕ್ಸೈಡ್ ಅನ್ನಾಗಿ ಪರಿವರ್ತಿಸುವ ಗುಣ ಗಿಡಗಳಿಗೆ ಇರಲಿಕ್ಕೂ ಸಾಕು, ಈ ಬಗ್ಗೆ ಪ್ರಯೋಗಗಳಾಗಬೇಕು ಎಂದು ಹೇಳಿದ್ದಾರೆ.

   English summary
   JDS MP Prajwal Revanna trolled in Social Media for his comments about plants. He said in a program, plants took carbon monoxide and convert it into carbon dioxide.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X