ವೇದಿಕೆಯಲ್ಲೇ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ ಸೂರಜ್‌ ರೇವಣ್ಣ

ಜೆಡಿಎಸ್‌ ಎಂಎಲ್‌ಸಿ ಸೂರಜ್‌ ರೇವಣ್ಣ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ವೇದಿಕೆಯಲ್ಲೇ ಅವರು ಮಹಿಳೆಯರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಜೈಲು ಸೇರಿ ಹೊರಬಂದಿರುವ ಸೂರಜ್‌ ಅವರು ಇತ್ತೀಚೆಗೆ ಅಬ್ಬರದ ಭಾಷಣಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸೂರಜ್‌ ರೇವಣ್ಣ ಭಾಷಣದ ವೇಳೆ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

JDS MLC Suraj Revanna Accused Of Using Offensive Language About Women On Stage

ನನಗ ಹುಷಾರಿಲ್ಲದೆ ಸೋಕಾದ ರೀತಿ ಆಗಿತ್ತು. ಅದಕ್ಕೆ ದೃಷ್ಟಿ ಕೂಡ ತೆಗೆಸಿದರು. ಆಗ ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮು*ಡೆಯರ ಕಣ್ಣು ಅಂತ ದೃಷ್ಟಿ ತೆಗೆದ್ರು. ಆಗ ನಾನು ಕೆಟ್ಟ ಸೂ*ಯರ ಕಣ್ಣು ಅಂತ ಏಕೆ ಹೇಳಲಿಲ್ಲ ಎಂದು ಮನಸ್ಸಿನಲ್ಲೇ ಕೇಳಿಕೊಂಡೆ ಎಂದು ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ನಾಲಿಗೆಹರಿಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇನ್ನು ನಾನು ಮಹಿಳೆಯರಿಗೆ ಬಗ್ಗೆ ತಪ್ಪಾಗಿ ಮಾತನಾಡುತ್ತಿಲ್ಲ. ಕೆಲವರು ನಮ್ಮಜ್ಜ ದೇವೇಗೌಡರ ವಿರುದ್ಧ ಎಂದು ತೋರಿಸಿಕೊಳ್ಳದೆ, ಪಕ್ಷದ ಒಳಗೇ ಇದ್ದುಕೊಂಡು ಮೋಸ ಮಾಡುತ್ತಿದ್ದಾರೆ. ಅವರಿಗೆ ಈ ಮಾತು ಹೇಳಿದ್ದೇನೆ. ಕೆಟ್ಟ ಸೂ*ಯರ ಕಣ್ಣು ತೆಗೆದು ಬಿಡವ್ವ ಎಂದು ಹೇಳಿಕೊಂಡೆ ಎಂದು ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ.

ಇದು ಯಾವುದೇ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿಷಯವಲ್ಲ. ಕೆಲವರು ನಾಟಕ ಆಡಿಕೊಂಡು ಅವರು ಬಂದಾಗ ಹಾಲು ಕೊಟ್ಟು ಜೊತೆಯಲ್ಲೇ ಇರುತ್ತೇವೆ ಎನ್ನುತ್ತಾರೆ. ಆದರೆ ಇನ್ನೊಬ್ಬರು ಬಂದಾಗ ಕೂಡ ಅವರಿಗೂ ಹಾಲು ಕೊಡುತ್ತಾರೆ ಎಂದು ಮಾರ್ಮಿಕವಾಗಿ ಸೂರಜ್‌ ಮಾತನಾಡಿದ್ದಾರೆ.

JDS MLC Suraj Revanna Accused Of Using Offensive Language About Women On Stage

ಹಾಸನದಲ್ಲಿ ಯಾವುದೇ ಪಕ್ಷವಿಲ್ಲ, ಇರುವುದು ಎರಡೇ ಪಕ್ಷ ಎಂದು ನಮ್ಮ ತಾತ ದೇವೇಗೌಡರು ಹೇಳುತ್ತಿದ್ರು. ಒಂದು ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧವಾಗಿರುವ ಪಕ್ಷ. ಅದರ ಅನುಭವ ನನಗೆ ಈಗ ಆಗುತ್ತಿದೆ ಎಂದಿದ್ದಾರೆ. ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಸೂರಜ್‌ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸೂರಜ್‌ ಮತ್ತೊಂದು ಕಾರ್ಯಕ್ರಮದಲ್ಲಿ ನಾನು ಪೆನ್‌ಡ್ರೈವ್‌ ಹಂಚಿ ಎಂಎಲ್‌ಸಿ ಆದವನಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ನೀಡಿದ್ದರು. ಇದೇ ಮಾತನ್ನು ಅವರು ನಿನ್ನೆಯೂ ಪುನರುಚ್ಛರಿಸಿದ್ದಾರೆ. ನಾನು ಪೆನ್​ಡ್ರೈವ್​ ಹಂಚಿ ಎಂಎಲ್​ಸಿ ಆಗಲಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವ ಇಲಾಖೆಯಲ್ಲಿ ತೊಂದರೆಯಾದ್ರೂ ನನ್ನ ಗಮನಕ್ಕೆ ತಿಳಿಸಿ. ನಿಮ್ಮ ಜೊತೆ ಯಾರು ಬರ್ತಾರೋ ಬಿಡ್ತಾರೀ ನಾನಂತೂ ಬರ್ತೇನೆ ಎಂದು ಅಭಯ ನೀಡಿದ್ದಾರೆ.

ನಾನು ಯಾವುದೇ ಜಾತಿ, ಧರ್ಮ, ಜನಾಂಗ ನೋಡದೆ ಕೆಲಸ ಮಾಡುವೆ. ನಮ್ಮಜ್ಜ ದೇವೇಗೌಡರು ಯಾವುದೇ ಜಾತಿ ನೋಡಬೇಡ ಎಂದು ನನಗೆ ಕಿವಿಮಾತು ಹೇಳಿದ್ದಾರೆ. ಒಂದು ಸಮುದಾಯ ಒಂದು ಸಲ ನಮ್ಮ ಕೈ ಬಿಡಬಹುದು. ಆದ್ರೆ ಅವರಿಗೆ ಸತ್ಯ ತಿಳಿದ ಬಳಿನ ನಮ್ಮ ಕೈಹಿಡಿಯುತ್ತಾರೆ ಎಂದು ದೊಡ್ಡಗೌಡ್ರು ಹೇಳಿದ್ದಾರೆ ಎಂದು ಸೂರಜ್‌ ನೆನೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+