ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ; ಅಕ್ರಮ ಅಕ್ಕಿ ಸಾಗಾಟ, 471 ಚೀಲ ವಶಕ್ಕೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಮೇ 10: ಹಾಸನ ನಗರದ ಕೈಗಾರಿಕಾ ಪ್ರದೇಶದ ಗೋದಾಮಿಗೆ ಅಕ್ರಮವಾಗಿ 471 ಚೀಲ ಅಕ್ಕಿ ದಾಸ್ತಾನು ಮಾಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಡಿಸಿಬಿಐ ಪೊಲೀಸರು ದಾಳಿ ಮಾಡಿದರು.

ಜಿಲ್ಲೆಯಲ್ಲಿ ಬಡವರಿಗೆ ವಿತರಣೆ ಆಗಬೇಕಿದ್ದ 471 ಚೀಲ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ದಂಧೆ ಬಯಲಾಗಿದೆ. ಅಕ್ರಮವಾಗಿ ಅಕ್ಕಿ ತಂದು ಖಾಸಗಿ ಗೋಡೌನ್‌ನಲ್ಲಿ ದಾಸ್ತಾನು ಮಾಡುವ ವೇಳೆ ದಾಳಿ ಮಾಡಲಾಗಿದೆ.

ಹಾಸನದ ಎಂಪಿಎಂಸಿ ಗೋಡೌನ್‌ನಿಂದ ಒಂದು ಲೋಡ್ ಪಡಿತರ ಅಕ್ಕಿಯನ್ನು ಸಾಗಟ ಮಾಡುತ್ತಿದ್ದರು. ಪಂಜಾಬ್‌ನಿಂದ ಕರ್ನಾಟಕಕ್ಕೆ ಅಕ್ಕಿಯನ್ನು ತಂದು ದಾಸ್ತಾನು ಮಾಡಲಾಗುತ್ತಿತ್ತು.

Illegal Transport Of Rise 471 Bags Sizeed

ಚಾಲಕನ ಸಮೇತ ಲಾರಿ ಹಾಗೂ 471 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

23 ಟನ್ ಅಕ್ಕಿ ಕಳ್ಳ ಸಾಗಾಣೆ ಪತ್ತೆ: ಶನಿವಾರ ಹಾಸನದ ಎಪಿಎಂಸಿಯಲ್ಲಿ ಅಕ್ರಮವಾಗಿ ಲೋಡ್ ಮಾಡಲಾಗುತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ವಸಂತ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Illegal Transport Of Rise 471 Bags Sizeed

23 ಟನ್ ಅಕ್ಕಿ ಕಳ್ಳ ಸಾಗಾಣೆ ಪತ್ತೆಯಾಗಿತ್ತು. ಸ್ಥಳದಲ್ಲಿದ್ದ ಲಾರಿ ಚಾಲಕ ನಿಜಾಂ ಪಾಷಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಲಾರಿ ಭದ್ರಾವತಿ ಮೂಲದ ಅಶೋಕ್ ಎಂಬುವವರಿಗೆ ಸೇರಿದ್ದು ಎಂಬುದು ತಿಳಿದುಬಂದಿತ್ತು.

English summary
471 bags of rice seized in Hassan. Rice illegally transport from Hassan APMC building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X