ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಸೀಡ್ ಬಾಲ್ ಬಾಂಬ್ ಪ್ರಯೋಗಿಸುವುದು ಹೇಗೆ?

By Mahesh
|
Google Oneindia Kannada News

ಹಾಸನ, ಜುಲೈ 10: ಹಸಿರು ವನ ಬೆಳೆಸಲು ಮತ್ತು ಸಂರಕ್ಷಿಸಲು ಬೀಜದ ಉಂಡೆಗಳನ್ನು ಮಾಡಿ ಬಿತ್ತುವ ಕಾರ್ಯ ಹಾಸನ ಜಿಲ್ಲೆಯಲ್ಲಿ ನಡೆಯಿತು. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸಗಣಿ ಮತ್ತು ಬೀಜಗಳನ್ನು ಬಳಸಿ ಬೀಜದ ಉಂಡೆ(Seed Balls) ಗಳನ್ನು ತಯಾರಿಸಲಾಯಿತು.ಹಸಿರು ವನ ಬೆಳೆಸಲು ಮತ್ತು ಸಂರಕ್ಷಿಸಲು ಬೀಜದ ಉಂಡೆಗಳನ್ನು ಮಾಡಿ ಬಿತ್ತುವ ಕಾರ್ಯ ಹಾಸನ ಜಿಲ್ಲೆಯಲ್ಲಿ ನಡೆಯಿತು. ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಸಗಣಿ ಮತ್ತು ಬೀಜಗಳನ್ನು ಬಳಸಿ ಬೀಜದ ಉಂಡೆಗಳನ್ನು ತಯಾರಿಸಲಾಯಿತು.

ಈ ಬೀಜದ ಉಂಡೆಗಳನ್ನು ಕೆಮ್ಮಣ್ಣಿನಲ್ಲಿ ಹದವಾಗಿ ಕಲಸಿಕೊಂಡು ಅದರಲ್ಲಿ ಕಾಡಿನ ಬೀಜವನ್ನು ಇಟ್ಟು ಉಂಡೆಯ ರೂಪವನ್ನು ಕೊಟ್ಟು ನಂತರ ನೆರಳಿನಲ್ಲಿ ಒಣಗಿಸಿ ಗಟ್ಟಿಯಾದ ಮೇಲೆ ಇವುಗಳನ್ನು ಎಲ್ಲಿಬೇಕಾದರೂ ಇಡಬಹುದು ಅಥವಾ ಎಸೆಯಬಹುದು. ಇವು ಮಳೆ ಆಶ್ರಯವಿಲ್ಲದೆ ಬರಗಾಲದಲ್ಲೂ ಮೂರು ನಾಲ್ಕು ವರ್ಷಗಳವರೆಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತವೆ.

How to use seed balls Seed Ball Bombing Program Hassan

ಮಳೆ ಬಂದ ತಕ್ಷಣ ಮಣ್ಣಿನ ಉಂಡೆ ತೇವಾಂಶವನ್ನು ಹೀರಿಕೊಂಡು ಮೊಳಕೆ ಒಡೆಯಲು ಪ್ರಾರಂಭಿಸುತ್ತವೆ.ಈ ರೀತಿ ಮೊಳಕೆ ಒಡೆದ ಉಂಡೆಗಳಿಗೆ ಯಾವುದೇ ಪೋಷಣೆ ಬೇಕಾಗಿರುವುದಿಲ್ಲ. ನಿರುಮ್ಮಳವಾಗಿ ಬೇರುಬಿಟ್ಟು ಬೆಳೆಯುತ್ತವೆ. ಅರಣ್ಯೀಕರಣಕ್ಕೆ ಇದು ಉತ್ತಮ ಮಾರ್ಗವಾಗಿದೆ.

ಮಣ್ಣಿನ ಉಂಡೆಗಳಲ್ಲಿ ಕಾಡಿನ ಬೀಜಗಳನ್ನು ಇಟ್ಟು ನೆರಳಿನಲ್ಲಿ ಒಣಗಿಸಿ ಗೋ ಮಾಳದಲ್ಲೋ ಗುಂಡು ತೋಪಿನಲ್ಲೋ ಎಸೆಯುವುದರಿಂದ ಮಳೆಗಾಲ ಬಂದಾಗ ಬೇರು ಬಿಟ್ಟು ಸ್ವತಂತ್ರವಾಗಿ ಸಸಿಗಳು ಬೆಳೆಯುತ್ತವೆ. ಇದರಿಂದ ಕಡಿಮೆ ಶ್ರಮದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು .


ವನ ಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯದಲ್ಲಿ ಪಾಲ್ಗೊಂಡು ಈ ಮೂಲಕ ಯುವ ಜನರಿಗೆ ಮಾದರಿಯಾದರು. ಇದರ ವಿಡಿಯೊ ಚಿತ್ರಣ ಇಲ್ಲಿದೆ.

English summary
How to use seed balls and how Seed Ball Bombing Program conducted, here is a demonstration by Hassan agricultural college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X