ಚುನಾವಣೆ ವೇಳೆ ಪ್ರೀತಂ ಗೌಡ ಎಡವಟ್ಟು? ತಮ್ಮದೇ ಕ್ಷೇತ್ರದ ಜನತೆಯನ್ನು ಹೀಗ್‌ ಅಂದ್ಬಿಟ್ರಾ ಹಾಸನ ಶಾಸಕ

ಹಾಸನ, ಏಪ್ರಿಲ್‌, 25: ಒಂದು ಭಾಷೆ, ಜನಾಂಗ, ಊರಿನ ಸಾಧನೆ ಬಗ್ಗೆ ಹೊಗಳಬೇಕು ನಿಜ, ಆದರೆ ಮಾನಗೆಟ್ಟವರಂತೆ ತಮ್ಮ ಊರನ್ನೇ ಧಿಕ್ಕರಿಸುವ ರೀತಿಯಲ್ಲಿ ಕೀಳಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ನೀವೆ ಹೇಳಿ. ಶಾಸಕರೊಬ್ಬರು ತಮ್ಮ ಊರಾದ ಹಾಸನದ ಜನರನ್ನು ಬುದ್ಧಿಗೇಡಿಗಳು ಅನ್ನುವ ನೀಚಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ಅಸಹ್ಯವಾಗಿದೆ. ಹೀಗೆ ಶಾಸಕ ಪ್ರೀತಂಗೌಡ ಅವರು ಹಾಸನ ಜನರನ್ನು ನಿಂದಿಸಬಾರದಾಗಿತ್ತು ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಹಾಸನ ಜಿಲ್ಲೆಯ ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಇಲ್ಲಿ ಜೆಡಿಎಸ್‌ ಮತ್ತು ಬಿಜೆಪಿಯ ಅಭ್ಯರ್ಥಿ ಪ್ರೀತಂಗೌಡ ನಡುವೆ ವಾಗ್ವಾದಗಳು ಆಗುತ್ತಲೇ ಇರುತ್ತದೇ. ಆದರೆ ಇದೀಗ ಹಾಸನ ಜನರಿಗೆ ಬುದ್ಧಿ ಇಲ್ಲ ಎಂದಿದ್ದಾರೆಂಬ ಶಾಸಕ ಪ್ರೀತಂಗೌಡ ಅವರ ವೀಡಿಯೋ ವೈರಲ್ ಆಗಿದ್ದು, ಅವರ ಈ ಹೇಳಿಕೆಗೆ ಜೆಡಿಎಸ್‌ ನಾಯಕರು ಕೆಂಡಕಾರುತ್ತಿದ್ದಾರೆ.

Hassan people are not intelligent: Preetham J.Gowda video goes viral

ನಮ್ಮ‌ ತಂದೆ, ತಾಯಿ ಶಿಕ್ಷಕರಾಗಿದ್ದರು, ಅವರು ಹಾಸನದ ಜನ ವಡ್ಡ ಜನಗಳು, ಅವರಿಗೆ ಸ್ವಲ್ಪ ಬುದ್ಧಿ ಕಮ್ಮಿ. ಮಂಗಳೂರಿನವರನ್ನು ನೋಡಿ ಬುದ್ಧಿ ಕಲಿತುಕೊಳ್ಳಿ ಎಂದು ಹೇಳಿದ್ದರು ಅನ್ನುವ ಪ್ರೀತಂಗೌಡ ಅವರ ವಿಡಿಯೋ ಸದ್ಯ ಎಲ್ಲೆಡೆ ವೈರಲ್‌ ಆಗಿದೆ. ಹಾಸನದಲ್ಲಿ ನಡೆದಿದ್ದ ಕರಾವಳಿ ಮಿತ್ರ ಮಂಡಳಿ ಸಭೆಯಲ್ಲಿ ಹೀಗೆ ಪ್ರೀತಂಗೌಡರು ಮಾತನಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಶಾಸಕ ಪ್ರೀತಂಗೌಡ ಜನರನ್ನು ನಿಂದಿಸಿದ್ದಾರೆನ್ನಲಾದ ವಿಡಿಯೋ ಜೆಡಿಎಸ್ ಹಾಸನ ಎಂಬ ಪೇಸ್ ಬುಕ್ ಪೇಜ್‌ನಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. "ಹಾಸನದಲ್ಲಿ ನಿಂತು ಕರಾವಳಿ ಜನರೆದುರು ಹಾಸನದವರಿಗೆ ಬುದ್ಧಿ ಕಮ್ಮಿ ಅಂತೀರಾ. ಜನ್ಮತಾಳಿದ ಊರನ್ನೇ ಶಾಸಕರು ಅವಮಾನಿಸಿದ್ದಾರೆ ಎಂದು ಫೇಸ್‌ಬುಕ್‌ ಪೇಜ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ."

ಅಲ್ಲದೆ ಕಾಂತಾರ ಮೂವಿ ಬಂದಮೇಲೆ ಕರಾವಳಿ ಇಡೀ ದೇಶದಲ್ಲಿ ಖ್ಯಾತಿ ಆಗಿದ್ದು. ಇದು ಕರಾವಳಿಯನ್ನು ಉತ್ತುಂಗಕ್ಕೆ ಹೊಯ್ದಿದೆ. ಈ ಮೂಲಕ ನನ್ನ ಆತ್ಮೀಯ ಗೆಳೆಯ ರಿಷಬ್ ಶೆಟ್ಟಿ ಕರಾವಳಿಯಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ಎನ್ನುವ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+