Election: ಹಾಸನದಲ್ಲಿಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಮೈತ್ರಿಯಲ್ಲಿ ಸ್ಥಾನಕ್ಕಾಗಿ ಮನಸ್ತಾಪ!

ಹಾಸನ ಆಗಸ್ಟ್ 21: ಹಾಸನದಲ್ಲಿಂದು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಸಾಕಷ್ಟು ರಾಜಕೀಯ ಬೆಳವಣಿಗೆಗಳು ಕಂಡು ಬಂದಿವೆ. ಚುನಾವಣೆಯಲ್ಲಿ ಮೈತ್ರಿ ಪಕ್ಷದಲ್ಲೇ ಜಿದ್ದಾಜಿದ್ದಿ ಉಂಟಾಗುವ ಲಕ್ಷಣಗಳು ಕಾಣಿಸುತ್ತಿವೆ. ಹೆಚ್ಚಿನ ಸದಸ್ಯರ ಬಲ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಎರಡೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿವೆ.

ಹೌದು.. ಇಂದು ಹಾಸನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಹೈದರಾಬಾದ್‌ನಿಂದ ಹಾಸನಕ್ಕೆ ಜೆಡಿಎಸ್ ನಗರಸಭೆ ಸದಸ್ಯರು ಆಗಮಿಸಿದ್ದಾರೆ. ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಬಂದು ಬಸ್ ಮೂಲಕ ಹಾಸನಕ್ಕೆ ಸದಸ್ಯರು ಆಗಮಿಸಿದ್ದಾರೆ. ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಸನದ ಖಾಸಗಿ ಹೊಟೆಲ್‌ನಲ್ಲಿ ಸಭೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Hassan Municipal Corporation President Vice President Election today

ಜೆಡಿಎಸ್ ಜೆಡಿಎಸ್ ನ17, ಇಬ್ಬರು ಪಕ್ಷೇತರ ಹಾಗು ಇಬ್ಬರು ಬಿಜೆಪಿ ಸದಸ್ಯರ ಬಲ‌ ಹೊಂದಿದೆ. ಅಧಿಕಾರ ಗದ್ದುಗೆ ಹಿಡಿಯಲು 18 ಸದಸ್ಯರ ಬೆಂಬಲ ಬೇಕಿರೊ ಹಿನ್ನೆಲೆಯಲ್ಲಿ, ಇಬ್ಬರು ಪಕ್ಷೇತರ ಹಾಗೂ ಇಬ್ಬರು ಬಿಜೆಪಿ ಸದಸ್ಯರ ಬೆಂಬಲವನ್ನು ಜೆಡಿಎಸ್ ಪಡೆಯುತ್ತಿದೆ.

ಅಂತಿಮವಾಗಿ ಅಧ್ಯಕ್ಷ ಉಪಾಧ್ಯಕ್ಷ ಯಾರಾಗಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ. ಇದಕ್ಕಾಗಿ ಶಾಸಕ‌ ಸ್ವರೂಪ್ ಪ್ರಕಾಶ್ ಹಾಗು ರೇವಣ್ಣ ನೇತೃತ್ವದಲ್ಲಿ ನಗರಸಭೆ ಸದಸ್ಯರ ಸಭೆ ನಡೆದಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಬಗ್ಗೆಯೂ ಚರ್ಚೆ ನಡೆಯಲಿದೆ. ಅಧ್ಯಕ್ಷ ಹುದ್ದೆಗೆ ಉಳಿದಿರೊ 20 ತಿಂಗಳ ಅವಧಿಯನ್ನು‌ 10-10 ತಿಂಗಳ ಹಂಚಿಕೆಗೆ ಬಿಜೆಪಿ ಪಟ್ಟು ಹಿಡಿದಿದೆ. ಆದರೆ ಮೊದಲ ಅವಧಿಯಲ್ಲಿ ಮೀಸಲಾತಿ ಕಾರಣ ಅಧ್ಯಕ್ಷ ಉಪಾಧ್ಯಕ್ಷ ಎರಡೂ ಹುದ್ದೆ ಪಡೆಯಲು ಜೆಡಿಎಸ್ ಪ್ರಯತ್ನ ನಡೆಸಿದೆ.

ಹೌದು.. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವರ್ಕೌಟ್ ಆಗಿದೆ. ಆದರೆ ಹಾಸನದಲ್ಲಿ ಮಾತ್ರ ಮೈತ್ರಿ ವರ್ಕೌಟ್ ಆಗಿಲ್ಲ. ಈ ನಡುವೆ ಇಂದು ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಂತರ ಮೊದಲ ಹತ್ತು ತಿಂಗಳು ಅಧಿಕಾರವನ್ನು ಬಿಜೆಪಿಗೆ ಬಿಟ್ಟುಕೊಡಿ ಅಂತ ಬಿಜೆಪಿ ನಾಯಕ ಪ್ರೀತಂಗೌಡ ಬೇಡಿಕೆ ಇಟ್ಟಿದ್ದಾರೆ. ಆದರೆ ಪ್ರೀತಂಗೌಡ ಬೇಡಿಕೆಗೆ ಕಿವಿಕೊಡದ ಜೆಡಿಎಸ್‌ ನಾಯಕರು ಮೈತ್ರಿಯನ್ನೂ ಲೆಕ್ಕಿಸದೇ ಯಾವುದೇ ಕಾರಣಕ್ಕೂ ಅಧ್ಯಕ್ಷೀಯ ಸ್ಥಾನ ಬಿಟ್ಟುಕೊಡಲ್ಲ ಅಂತ ಹೇಳಿದೆ.

Hassan Municipal Corporation President Vice President Election today

ಜೆಡಿಎಸ್ 17, ಬಿಜೆಪಿ 14, ಕಾಂಗ್ರೆಸ್ 02, ಪಕ್ಷೇತರ 02 ಸೇರಿ ಒಟ್ಟು 35 ಸದಸ್ಯರ ಬಲವನ್ನು ನಗರಸಭೆ ಹೊಂದಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜೆಡಿಎಸ್‌ನ 14 ಸದಸ್ಯರು, ಇಬ್ಬರು ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಜೆಡಿಎಸ್ ಟೀಂ ಹೈದರಾಬಾದ್‌ಗೆ ಕಳುಹಿಸಿದೆ. ಅಧ್ಯಕ್ಷ ಸ್ಥಾನಕ್ಕೆ 18 ಮತಗಳ ಅಗತ್ಯವಿದ್ದು, ಜೆಡಿಎಸ್‌ ಬಳಿ ಈಗಾಗಲೇ 17 ಸದಸ್ಯರು ಬಲವಿದ್ದು ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದೆ.

ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌: ಕರ್ನಾಟಕದಲ್ಲಿ ದುಬಾರಿ ಮದ್ಯದ ಬೆಲೆ ಇಳಿಕೆ?

ಜೊತೆಗೆ ಚುನಾವಣೆ ಬೆನ್ನಲ್ಲೆ ಹಾಸನ ನಗರಸಭೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ ಪೊಲೀಸರನ್ನು ನಿಯೋಜನೆ ಮಾಡಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಈಗ ನಗರಸಭೆ ಅಧ್ಯಕ್ಷ ಉಪ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗೆ 9:30 ರಿಂದ 12 ರ ವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗಧಿಯಾಗಿದ್ದು, ನಾಮಪತ್ರದ ಪ್ರಕ್ರಿಯೆ ಆರಂಭವಾದ್ರೂ ನಗರಸಭೆಯುತ್ತ ನಾಯಕರು ಸುಳಿಯದೇ ಇರುವುದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+