ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಕರ್ಮಭೂಮಿಯಲ್ಲಿ ಶೂನ್ಯದಿಂದ ಹದಿಮೂರಕ್ಕೆ ಏರಿದ ಬಿಜೆಪಿ

|
Google Oneindia Kannada News

Recommended Video

ದೇವೇಗೌಡ್ರ ಕರ್ಮಭೂಮಿ ಹಾಸನ ನಗರಸಭೆ ಬಿಜೆಪಿ ತೆಕ್ಕೆಗೆ | Oneindia kannada

ಹೇಳಿ ಕೇಳಿ ಪಕ್ಕಾ ಜೆಡಿಎಸ್ ಬೆಲ್ಟ್, ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಕರ್ಮಭೂಮಿ, ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದೇ ಹೆಚ್ಚು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜಿಲ್ಲೆಯ ಒಂದು ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿ, ಹಾಸನ ನಗರಸಭೆ ಚುನಾವಣೆಯಲ್ಲಿ ಮತ್ತೆ ತನ್ನ ಅಸ್ತಿತ್ವವನ್ನು ಎತ್ತಿಹಿಡಿದಿದೆ.

ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ, ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್-ಜೆಡಿಎಸ್ ಮುಂದಿದೆ. ಬಿಜೆಪಿ ನಿರೀಕ್ಷಿತ ಫೈಟ್ ನೀಡಲು ಸಾಧ್ಯವಾಗಲಿಲ್ಲ ಎನ್ನುವ ಮಾತನ್ನು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ : ಹಾಸನದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್ಸ್ಥಳೀಯ ಸಂಸ್ಥೆ ಚುನಾವಣೆ : ಹಾಸನದಲ್ಲಿ ಶಕ್ತಿ ಪ್ರದರ್ಶಿಸಿದ ಜೆಡಿಎಸ್

ಅದು ಸೆಪರೇಟ್, ಇದು ಸೆಪರೇಟ್ ಚುನಾವಣೆ ಎಂದು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್-ಜೆಡಿಎಸ್, ಫಲಿತಾಂಶ ಹೊರಬಿದ್ದ ಮೇಲೆ, ಮೈತ್ರಿ ಸರಕಾರಕ್ಕೆ ಜನರ ಆಶೀರ್ವಾದ ಇದೆ ಅಂದಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ ಎನ್ನುವ ಅದೇ ಹಳೇ ಡೈಲಾಗ್ ಅನ್ನು ಎರಡೂ ಪಕ್ಷದ ಮುಖಂಡರು ಪುನರುಚ್ಚರಿಸಿದ್ದಾರೆ.

ಹಾಸನ ಜಿಲ್ಲಾ ವ್ಯಾಪ್ತಿಯ ಒಟ್ಟು ಎರಡು ನಗರಸಭೆ ಮತ್ತು ಮೂರು ಪುರಸಭೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಮುಂದುವರಿದಿದೆ. ಎಲ್ಲೂ ಜೆಡಿಎಸ್ಸಿಗೆ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಂಡು ಅಧಿಕಾರಕ್ಕೇರುವ ಅವಶ್ಯಕತೆಯಿಲ್ಲ. ಹೊಳೆನರಸೀಪುರದಲ್ಲಂತೂ, ರೇವಣ್ಣ ಪಕ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಈ ಪುರಸಭೆಯ 23ಕ್ಷೇತ್ರವನ್ನೂ ಗೆದ್ದು ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018

ಹಾಸನದಲ್ಲಿ ಪಕ್ಷ ಜಯಗಳಿಸುವುದು ದೇವೇಗೌಡರಿಗೆ ನಿರೀಕ್ಷಿತವೇ, ಆದರೆ ಪಕ್ಕಾ ಜೆಡಿಎಸ್ ಬೆಲ್ಟ್ ನಲ್ಲಿ ಬಿಜೆಪಿ ಸಾಧನೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಿಗೆ ಎಚ್ಚರಿಕೆಯ ಗಂಟೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ, ಜೆಡಿಎಸ್ಸಿಗೆ ಅನಿರೀಕ್ಷಿತ ಶಾಕ್ ನೀಡಿತ್ತು. ಹಾಸನ ನಗರಸಭೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ, ಮುಂದೆ ಓದಿ..

ಹಾಸನ ಜಿಲ್ಲಾ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳು

ಹಾಸನ ಜಿಲ್ಲಾ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳು

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ಮತ್ತು ಸಕಲೇಶಪುರ ಅಸೆಂಬ್ಲಿ ಕ್ಷೇತ್ರದಲ್ಲಿ ಹಾಸನ ಕ್ಷೇತ್ರವೊಂದನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಜೆಡಿಎಸ್ ಜಯಭೇರಿ ಬಾರಿಸಿತ್ತು. ಇದೇ ಮೊದಲ ಬಾರಿಗೆ, ಬಿಜೆಪಿ ಪ್ರೀತಂ ಗೌಡ, ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು 13,006 ಮತಗಳ ಅಂತರದಿಂದ ಸೋಲಿಸಿದ್ದರು.

ಕಳೆದ ಚುನಾವಣೆಯ ಅಚ್ಚರಿಯ ಫಲಿತಾಂಶ

ಕಳೆದ ಚುನಾವಣೆಯ ಅಚ್ಚರಿಯ ಫಲಿತಾಂಶ

ಹಾಸನ ಅಸೆಂಬ್ಲಿ ಕ್ಷೇತ್ರದ ಈ ಫಲಿತಾಂಶ ಕಳೆದ ಚುನಾವಣೆಯ ಅಚ್ಚರಿಯ ಫಲಿತಾಂಶಗಳಲ್ಲೊಂದಾಗಿತ್ತು. ಬಿಜೆಪಿಯ ಯುವ ಮುಖಂಡ ಪ್ರೀತಂ ಗೌಡ, 63,348 ಮತಗಳನ್ನು ಪಡೆದು, ಜೆಡಿಎಸ್ಸಿನ ಎಚ್ ಎಸ್ ಪ್ರಕಾಶ್ ಅವರನ್ನು ಸೋಲಿಸಿದ್ದರು. ದೇವೇಗೌಡರಿಗೆ ಇದು ತೀರಾ ಅನಿರೀಕ್ಷಿತ ಸೋಲಾಗಿತ್ತು. ಈಗ ಹಾಸನ ನಗರಸಭೆಯಲ್ಲೂ ಬಿಜೆಪಿ ತನ್ನ ಶಕ್ತಿಪ್ರದರ್ಶನ ಮಾಡಿದೆ. ಜೆಡಿಎಸ್ ನಿರಾಯಾಸವಾಗಿ ಇಲ್ಲಿ ಅಧಿಕಾರಕ್ಕೇರಲಿದೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?ಸ್ಥಳೀಯ ಸಂಸ್ಥೆ ಚುನಾವಣೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ಜೆಡಿಎಸ್ 17, ಬಿಜೆಪಿ 13 ಮತ್ತು ಕಾಂಗ್ರೆಸ್ ಎರಡು

ಜೆಡಿಎಸ್ 17, ಬಿಜೆಪಿ 13 ಮತ್ತು ಕಾಂಗ್ರೆಸ್ ಎರಡು

ಹಾಸನ ನಗರ ಸಭೆಯ ಒಟ್ಟು 35 ವಾರ್ಡ್ ಗಳಲ್ಲಿ ಜೆಡಿಎಸ್ 17, ಬಿಜೆಪಿ 13 ಮತ್ತು ಕಾಂಗ್ರೆಸ್ ಎರಡು ಸ್ಥಾನದಲ್ಲಿ ಜಯಗಳಿಸಿದೆ. ಜಿಲ್ಲೆಯ ಎರಡು ನಗರಸಭೆ (ಹಾಸನ, ಅರಸೀಕೆರೆ) ಮತ್ತು ಮೂರು ಪುರಸಭೆಗೆ (ಚನ್ನರಾಯಪಟ್ಟಣ, ಹೊಳೆನರಸೀಪುರ, ಸಕಲೇಶಪುರ) ಚುನಾವಣೆ ನಡೆದಿತ್ತು. ಚನ್ನರಾಯಪಟ್ಟಣ ಮತ್ತು , ಹೊಳೆನರಸೀಪುರದಲ್ಲಿ ಬಿಜೆಪಿ ಖಾತೆ ತೆರೆದಿಲ್ಲ, ಇನ್ನು ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಸಾಧನೆಯೂ ಶೂನ್ಯ.

ಬಿಜೆಪಿಯನ್ನು ಶೂನ್ಯದಿಂದ 13ನೇ ಸ್ಥಾನಕ್ಕೇರಿಸಿದ ಹಾಸನ ಜನತೆ

ಬಿಜೆಪಿಯನ್ನು ಶೂನ್ಯದಿಂದ 13ನೇ ಸ್ಥಾನಕ್ಕೇರಿಸಿದ ಹಾಸನ ಜನತೆ

ಬಿಜೆಪಿಯನ್ನು ಶೂನ್ಯದಿಂದ 13ನೇ ಸ್ಥಾನಕ್ಕೇರಿಸಿದ ಹಾಸನ ಜನತೆಗೆ ನಾನು ಚಿರಋಣಿ ಎಂದು ಹಾಸನ ಶಾಸಕ ಪ್ರೀತಂ ಗೌಡ ಟ್ವಿಟ್ಟರ್ ಮೂಲಕ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. 13ಸ್ಥಾನ ಗಳಿಸುವುದರಲ್ಲಿ ನಿಮ್ಮ ಶ್ರಮ, ಶಕ್ತಿ ಹಾಗೂ ನಿಮ್ಮ ಆಡಳಿತವೇ ಕಾರಣ ಎಂದು ಅಭಿಮಾನಿಗಳು ಅವರ ಬೆನ್ನು ತಟ್ಟಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಗಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ.

ಕೆಲವೊಂದು ಆಯ್ದ ಟ್ವೀಟ್ ಹೀಗಿದೆ..

ಕೆಲವೊಂದು ಆಯ್ದ ಟ್ವೀಟ್ ಹೀಗಿದೆ..

ಬಿಸ್ಕತ್ತು ಎಸೆದೆ ಅಂತ, ಬೀಗಬೇಡ, ಜನರು ಹಸಿರು ಶಾಲು ಬೇಡ, ಕೇಸರಿ ಧ್ವಜ ಬೇಕು ಅಂತ ಹೇಳೋದನ್ನ ನೋಡಿದ್ದೀನಿ... ಸರ್ ಹಾಸನದಲ್ಲಿ ಜೆ ಡಿ ಎಸ್ ಭದ್ರ ಕೋಟೆಯನ್ನು ಛಿದ್ರ ಮಾಡಿ ಆ ಭದ್ರ ಕೋಟೆಯಲ್ಲಿ ಕಮಲ ಲಕಲಕಿಸುವ ಹಾಗೆ ಮಾಡಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು .ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಹಾಸನ ನಗರ ಜನತೆಗೆ ಧನ್ಯವಾದಗಳು .ಹಾಸನದಲ್ಲಿ ಕಮಲವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿ ನೀವು ಹಾಸನ ಜಿಲ್ಲಾ ಉಸ್ತುವಾರಿ ಆಗಲೆಂದು ನಮ್ಮ ಆಸೆ.

English summary
Hassan Municipal corporation election 2018, BJP bags 13 seats out of 35. JDS won 17 and Congress manage to win just two seats. Hassan is the strong belt of JDS and BJP winning 13 seats is politically calculated as big win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X