ಹಿಮ್ಸ್ ಕಳಂಕ ತೊಡೆದು ಹಾಕಲು ಮುಂದಾದ ಡಿಸಿ ರೋಹಿಣಿ

Posted By:
Subscribe to Oneindia Kannada

ಹಾಸನ, ನವೆಂಬರ್ 11: ನವಜಾತ ಶಿಶುಗಳ ಆರೈಕೆ ಮಾಡುವಲ್ಲಿ ವಿಫಲವಾಗಿ ಕಳೆದ ಐದು ತಿಂಗಳಲ್ಲಿ 159ಕ್ಕೂ ಮಕ್ಕಳ ಸಾವನ್ನು ಕಂಡಿದ್ದ ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆ (ಹಿಮ್ಸ್) ಸುಧಾರಣೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂದಾಗಿದ್ದಾರೆ.

ನವಜಾತ ಶಿಶುಗಳ ಆರೈಕೆಗಾಗಿ ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆಯ (ಹಿಮ್ಸ್) ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದ ಹಾಸಿಗೆ ಸಾಮರ್ಥ್ಯವನ್ನು 50ಕ್ಕೆ ಹೆಚ್ಚಿಸಲು ಸಿದ್ಧತೆ ಭರದಿಂದ ಸಾಗಿದೆ.

ನವೆಂಬರ್ 1 ರಿಂದ ಏಕರೂಪದ ಆರೋಗ್ಯ ಭಾಗ್ಯ ಜಾರಿ: ಸಿಎಂ

ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನ. 14ರಂದು ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕವನ್ನು ಸಾಂಕೇತಿಕವಾಗಿ ಉದ್ಘಾಟಿಸುವ ಮೂಲಕ 'ಮಕ್ಕಳ ದಿನಾಚರಣೆ' ಕೊಡುಗೆಯಾಗಿ ನೀಡಲು ಜಿಲ್ಲಾಡಳಿತ ಹಾಗೂ ಹಿಮ್ಸ್ ನಿರ್ಧರಿಸಿದೆ.

ಉದ್ಯೋಗಾರ್ಥಿಗಳ ಮುಖಕ್ಕೆ ಹಿಮ್ಸ್ ಮಂಕುಬೂದಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶುಕ್ರವಾರ ಸಂಜೆ ಹಿಮ್ಸ್ ಗೆ ಭೇಟಿ ನೀಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ ಹಾಜರಿದ್ದರು.

ವೈದ್ಯಕೀಯ ಉಪಕರಣಗಳ ಅಳವಡಿಕೆ

ವೈದ್ಯಕೀಯ ಉಪಕರಣಗಳ ಅಳವಡಿಕೆ

ರೇಡಿಯೆಂಟ್ ವಾರ್ಮರ್, ನಿಯೋನಾಟಲ್ ವೆಂಟಿಲೇಟರ್, ಬಬ್ಬಲ್ ಸಿಪಿಎಪಿ, ಎಬಿಜಿ ಮೆಷಿನ್, ಸಿರಂಜ್ ಪಂಪ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವೈದ್ಯಕೀಯ ಸೇವೆಗೆ ದೊರೆಯುವಂತೆ ವ್ಯವಸ್ಥೆ ಮಾಡಲು ರೋಹಿಣಿ ಸಿಂಧೂರಿ ಅವರು ತಿಳಿಸಿದರು.

ಹಿಮ್ಸ್ ಘಟಕದಲ್ಲಿನ ಹಾಸಿಗೆ ಸಾಮರ್ಥ್ಯ ಹೆಚ್ಚಳ

ಹಿಮ್ಸ್ ಘಟಕದಲ್ಲಿನ ಹಾಸಿಗೆ ಸಾಮರ್ಥ್ಯ ಹೆಚ್ಚಳ

ಹಿಮ್ಸ್ ನ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಸ್ತುತ 20 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ನವಜಾತ ಶಿಶುಗಳಿಗೆ ಮತ್ತಷ್ಟು ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಘಟಕದಲ್ಲಿನ ಹಾಸಿಗೆ ಸಾಮರ್ಥ್ಯವನ್ನು 50ಕ್ಕೆ ಹೆಚ್ಚಿಸಲಾಗುತ್ತಿದೆ ಇದು ರಾಜ್ಯದಲ್ಲೇ ಅತೀ ಹೆಚ್ಚು ಹಾಸಿಗೆ ಸಾಮರ್ಥ್ಯವಿರುವ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಲಿದೆ.

ತಾಯಂದಿರು ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ

ತಾಯಂದಿರು ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ

ಹಿಮ್ಸ್ ನಲ್ಲಿ ಜನಿಸುವ ಹಾಗೂ ಹೊರಗಿನಿಂದ ಚಿಕಿತ್ಸೆಗಾಗಿ ಬರುವ ನವಜಾತ ಶಿಶುಗಳಿಗೆ ಪ್ರತ್ಯೇಕವಾಗಿ ವೈದ್ಯಕೀಯ ಸೇವೆ ಕಲ್ಪಿಸುವುದರ ಜೊತೆಗೆ ತಾಯಂದಿರು ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಉಸಿರಾಟ, ನಂಜು, ಶ್ವಾಸಕೋಶ ಮತ್ತು ಹೃದಯ ಸಂಬಂಧಿತ ತೊಂದರೆ, ಕಡಿಮೆ ತೂಕ, ಅವಧಿ ಪೂರ್ವ ಜನನ ಸೇರಿದಂತೆ ಇನ್ನಿತರೆ ಆರೋಗ್ಯ ಸಂಬಂಧಿತ ತೊಂದರೆಗಳು ಕಂಡುಬರುತ್ತಿದ್ದು, ನವಜಾತ ಶಿಶುಗಳ ಶುಶ್ರೂಷೆಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ.

ಎನ್.ಎಚ್.ಎಂ ನಿಂದ ಹಿಮ್ಸ್ ಗೆ ಯಂತ್ರೋಪಕರಣ

ಎನ್.ಎಚ್.ಎಂ ನಿಂದ ಹಿಮ್ಸ್ ಗೆ ಯಂತ್ರೋಪಕರಣ

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ), ನರ್ಸಿಂಗ್ ಸ್ಟಾಫ್ ಮತ್ತು ವೈದ್ಯಕೀಯ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಹಿಂದೂಸ್ತಾನ್ ಪೆಟ್ರೋ ಕೆಮಿಕಲ್ಸ್ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ಪಡೆಯುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಮಕ್ಕಳ ವಿಭಾಗದ ಮುಖ್ಯ ಡಾ. ಪ್ರಸನ್ನ ತಿಳಿಸಿದರು.ಡಾ. ಕುಮಾರ್, ಡಾ. ಮನುಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hassan DC Rohini Sindhuri said new born child care unit of Hassan Institute of Medical Sciences will be fully functional from November 14, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ