ಹಾಸನಾಂಬ ಗರ್ಭಗುಡಿ ಬಾಗಿಲು ಓಪನ್; ಈ ಬಾರಿ ಜಾತ್ರಾ ಉತ್ಸವ ಹೇಗಿದೆ? ಇಲ್ಲಿದೆ ಮಾಹಿತಿ
ಹಾಸನ, ಅಕ್ಟೋಬರ್, 13: ಗುರುವಾರ ಮಧ್ಯಾಹ್ನ 12:12ಕ್ಕೆ ಸರಿಯಾಗಿ ಹಾಸನಾಂಬ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ. ವರ್ಷದ ಬಳಿಕ ಹಾಸನಾಂಬೆ ತಾಯಿ ದರ್ಶನ ಭಾಗ್ಯ ಕರುಣಿಸಿದ್ದಾಳೆ.
ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನ, ಎಸ್‌ಪಿ ಹರಿರಾಂಶಂಕರ್ ಸೇರಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ಹಾಸನಾಂಬ ಗರ್ಭಗುಡಿಯ ಬಾಗಿಲನ್ನು ತೆರೆದಿದ್ದಾರೆ. ಸಂಪ್ರದಾಯದ ಪ್ರಕಾರ ಅರಸು ಮನೆತನದವರು ಬಾಳೆಕಂಬ ಕತ್ತರಿಸಿದ ನಂತರ ದೇವಾಲಯದ ಬಾಗಿಲನ್ನು ತೆರೆದಿದ್ದಾರೆ.
ನಂತರ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ. ಇಂದು ದೇವಾಲಯದ ಸ್ವಚ್ಛತೆ, ಸುಣ್ಣಬಣ್ಣ ಬಳಿಯುವುದಕ್ಕೆ ಹಾಗೂ ಪೂಜೆ, ನೈವೇದ್ಯಕ್ಕೆ ಅವಕಾಶ ನೀಡಲಾಗಿದೆ. ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾಸನಾಂಬ ಗರ್ಭಗುಡಿಯ ಬಾಗಿಲು ಓಪನ್
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯ ದೇಗುಲದ ಬಾಗಿಲು ಈಗಾಗಲೇ ತೆರೆದಿದೆ. ಗುರುವಾರ ಇಂದು ಆರಂಭವಾಗುವ ಜಾತ್ರೆ ಅಕ್ಟೋಬರ್ 27ರವರೆಗೂ ನಡೆಯಲಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಕಾಯುತ್ತಿದ್ದಾರೆ. ಹಾಸನಾಂಬೆಗೆ ವಿಶೇಷ ಅಲಂಕಾರ ಕಾರ್ಯಗಳನ್ನು ಮಾಡಿದ್ದಾರೆ. ಹಾಗೂ ಶಾಸ್ತ್ರೋಕ್ತವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿದೆ. ಇಂದಿನಿಂದ ಶುರುವಾಗುವ ಜಾತ್ರೆ ಒಟ್ಟು 12 ದಿನಗಳ ಕಾಲ ನಡೆಯಲಿದ್ದು, ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ.
ಸಾರ್ವಜನಿಕರಿಗೆ ದರ್ಶನಕ್ಕಿಲ್ಲ ಅವಕಾಶ
ಹಾಸನಾಂಬೆ ದೇಗುಲದ ಬಾಗಿಲು ತೆರೆದರೂ ಸಾರ್ಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇಂದು ಕೇವಲ ತಾಯಿಯ ಗರ್ಭಗುಡಿ ಸ್ವಚ್ಛತೆ, ಪೂಜೆ, ನೈವೇದ್ಯಕ್ಕೆ ಮಾತ್ರ ಅವಕಾಶ ಇರಲಿದೆ. ಆದರೆ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ದೇವಿಯ ದರ್ಶನ ಪಡೆಯಬಹದಾಗಿದೆ. ಸಂಜೆ 4 ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಅಕ್ಟೋಬರ್ 15 ರಿಂದ ಅಕ್ಟೋಬರ್ 25ರವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 1ರ ವರೆಗೆ, ಮಧ್ಯಾಹ್ನ 3:30ರಿಂದ ರಾತ್ರಿ 10ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಧ್ಯಾಹ್ನ 1ರಿಂದ 3:30ರವರೆಗಿನ ನೈವೇದ್ಯದ ಸಂದರ್ಭದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಅಕ್ಟೋಬರ್ 25 ಮಂಗಳವಾರದಂದು ಸೂರ್ಯಗ್ರಹಣ ಇರುವುದರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಮತ್ತೆ ಅಕ್ಟೋಬರ್ 26 ದೀಪಾವಳಿ ದಿನದಂದು ವಿಶೇಷ ದರ್ಶನಕ್ಕೆ ಅವಕಾಶ ಇರಲಿದ್ದು, ಬೆಳಗ್ಗೆ 6 ರಿಂದ ಸಂಜೆ 4ರ ತನಕ ದರ್ಶನ ನಡೆಯಲಿದೆ. ಮತ್ತೆ ರಾತ್ರಿ 11ರಿಂದ ಬೆಳಗ್ಗೆ 7ರ ತನಕ ಅವಕಾಶ ಇರಲಿದೆ. ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಅಕ್ಟೋಬರ್ 27ರಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.












Click it and Unblock the Notifications