ಬೇಲೂರು, ಹಳೇಬೀಡು ವಿಶ್ವಪಾರಂಪರಿಕ ತಾಣದ ಪಟ್ಟಿಗೆ
ಹಾಸನ, ಡಿಸೆಂಬರ್ 10 : ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ವಿಶ್ವಪರಾಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೆಗೊಳಿಸಲು ನಾಮ ನಿದೇಶನಗೊಳಿಸಿ ಶಿಫಾರಸು ಮಾಡಲಾಗಿದೆ. ಈಗಾಗಲೇ ತಾತ್ಕಲಿಕ ಪಟ್ಟಿಯಲ್ಲಿ ದೇವಾಲಯಗಳು ಸೇರಿವೆ.
ಕರ್ನಾಟಕ ಸರ್ಕಾರ ಬೇಲೂರು ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಹಾಗೂ ಮೈಸೂರು ಜಿಲ್ಲೆಯ ಸೋಮನಾಥ ದೇವಾಲಯಗಳನ್ನು ವಿಶ್ವ ಪರಾಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ.
ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಇವುಗಳನ್ನು ಸೇರಿಸಲಾಗಿದೆ. ಬೇಲೂರು, ಹಳೇಬೀಡಿನ ದೇವಾಲಯದ ವಿನ್ಯಾಸ ವಾಸ್ತುಶಿಲ್ಪಗಳು ಹಾಗೂ ಮಾನವ ಮೌಲ್ಯಗಳನ್ನು ಪ್ರರ್ದಶಕ ರೂಪಗಳು ಗಮನಿಸಿ ಇವುಗಳು ಪಟ್ಟಿಗೆ ಸೇರಬೇಕು ಎಂದು ಪ್ರಸ್ತಾವನೆಯಲ್ಲಿ ಬೇಡಿಕೆ ಇಡಲಾಗಿದೆ.

ನಾಮ ನಿರ್ದೇಶಕ ವಾದ ಸ್ಥಳಗಳಲ್ಲಿ ಸ್ಥಳ ನಿರ್ವಹಣೆ ಯೋಜನೆಯ ವಿನ್ಯಾಸವನ್ನು ಯುನೆಸ್ಕೋಗೆ ಕಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ನಗರ / ಗ್ರಾಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವ್ಯವಸ್ಥಿತವಾದ ಮತ್ತು ದೂರದೃಷ್ಟಿ ಚಿಂತನೆಗಳ ಯೋಜನೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕಿದೆ.
ಬೆಂಗಳೂರಿನ ಇನ್ ಟೆಕ್ ತಜ್ಞರಾದ ಪಂಕಜ್ ಈ ಕುರಿತು ಮಾತನಾಡಿದ್ದು, "ಯುನೆಸ್ಕೋ ಮಾರ್ಗಸೂಚಿಯಂತೆ ದೇವಾಲಯದ ಸುತ್ತಮುತ್ತ ನೂರಾರು ವರ್ಷಗಳಿಂದ ಇರುವ ಮನೆಗಳು, ವಾಸ್ತುಶಿಲ್ಪಗಳು ಮುಂದಿನ ಪೀಳಿಗೆಗೆ ಅಲ್ಲಿನ ಸಂಸ್ಕೃತಿಯನ್ನು ತಿಳಿಸಬೇಕಾಗುತ್ತದೆ" ಎಂದರು.
ಯುನೆಸ್ಕೋ ವಿಶ್ವ ಪರಾಂಪರಿಕ ತಾಣ ಪಟ್ಟಿಗೆ ನಾಮ ನಿರ್ದೇಶನದ ಸಂದರ್ಭ ದಸ್ತಾವೇಜು ಸಲ್ಲಿಕೆ ವೇಳೆ ಸಂಭಂದಪಟ್ಟ ಸ್ಥಳ ನಿರ್ವಹಣಾ ವ್ಯವಸ್ಥೆಯ ವಿಸ್ಕೃತ ಯೋಜನೆ ಸಲ್ಲಿಕೆ ಮಾಡಬೇಕು ಇದರಲ್ಲಿ ಬಫರ್ ವಲಯಗಳನ್ನು ಗುರುತಿಸಬೇಕು.
ಕರ್ನಾಟಕದಲ್ಲಿನ ಹಂಪಿ, ಬಾದಾಮಿ ಈಗಾಗಲೇ ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಬೇಲೂರು ಮತ್ತು ಹಳೇಬೀಡು ಹಾಸನ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.












Click it and Unblock the Notifications