Get Updates
Get notified of breaking news, exclusive insights, and must-see stories!

Hassan: ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಬೃಹತ್ ರೆಸಾರ್ಟ್ ಅರಣ್ಯ ಇಲಾಖೆ ವಶ

ಬೆಂಗಳೂರು, ಜುಲೈ 19: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸರ್ಕಾರಿ ವ್ಯಾಪ್ತಿಯ ಜಮೀನು ಒತ್ತುವರಿ ನಡೆಯುತ್ತಲೇ ಇದೆ. ಇದೀಗ ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಬೃಹತ್ ರೆಸಾರ್ಟ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯ ಮೋರ್ಕಣ್ಣುಗುಡ್ಡದಲ್ಲಿ 15 ಎಕರೆ ಅರಣ್ಯ ಪ್ರದೇಶದ ಸರ್ಕಾರಿ ಜಾಗದಲ್ಲಿ ಬೃಹತ್ ರೆಸಾರ್ಟ್ ನಿರ್ಮಿಸಲಾಗಿತ್ತು. ಸುದ್ದಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರೆಸಾರ್ಟ್ ಸಮೇತ ಜಾಗಕ್ಕೆ ವಶಪಡಿಸಿಕೊಂಡಿದ್ದಾರೆ. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Forest Dept Seized 14 Acres Land encroached Upon To Build A Resort In Sakaleshpur, Hassan.

ಕಳೆದ ವರ್ಷ 2022 ಮಾರ್ಚ್‌ ನಲ್ಲಿ ಸ್ಟೋನ್ ವ್ಯಾಲಿ ರೆಸಾರ್ಟ್‌ಗೆ ಅರಣ್ಯ ಇಲಾಖೆಯು ನೋಟಿಸ್ ಜಾರಿ ಮಾಡಿತ್ತು. ರೆಸಾರ್ಟ್‌ ಆಸ್ತಿಯ ಮಾಲೀಕರು ಹಾಗೂ ಅತಿಕ್ರಮಣವಾದರೂ ನಿರ್ಲಕ್ಷ್ಯ ವಹಿಸಿದ್ದ ಸಕಲೇಶಪುರ ತಹಶೀಲ್ದಾರ್ ಸೇರಿ ಒಟ್ಟು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಅರಣ್ಯ ಪ್ರದೇಶವೆಂದು ಘೋಷಿಸಲಾಗಿತ್ತು

ಒಟ್ಟು 7,938 ಎಕರೆ 38 ಗುಂಟೆ ಅರಣ್ಯ ವ್ಯಾಪ್ತಿಯ 14 ಎಕರೆ 36 ಗುಂಟೆ ಭೂಮಿಯನ್ನು ಅತಿಕ್ರಮಿಸಲಾಗಿದೆ. 1920 ರಲ್ಲಿ ಮೈಸೂರು ಮಹಾರಾಜರು ವಿಭಾಗ 4ರ ಭಾರತೀಯ ಅರಣ್ಯ ಕಾಯಿದೆ ಮತ್ತು ಮೈಸೂರು ಅರಣ್ಯ ನಿಯಂತ್ರಣ 1900ರ ಅಡಿಯಲ್ಲಿ ಈ ಪ್ರದೇಶವನ್ನು ಅರಣ್ಯ ಎಂದು ಕಾಯ್ದಿರಿಸಿದರು ಎಂದು ತಿಳಿದು ಬಂದಿದೆ.

Forest Dept Seized 14 Acres Land encroached Upon To Build A Resort In Sakaleshpur, Hassan.

ಅತಿಕ್ರಮಣ ಒಪ್ಪಿರುವ ರೆಸಾರ್ಟ್ ಮಾಲೀಕ ಸುಭಾಷ್ ಸ್ಟೀಫನ್ ಅವರು ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಒತ್ತುವರಿ ಮಾಡಿದ್ದ 10 ಎಕರೆ ಮೇಲಿನ ಹಕ್ಕು ಹಿಂಪಡೆಯುತ್ತೇವೆ ಎಂದು ತಿಳಿಸಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.

ರೆಸಾರ್ಟ್‌ ವಶಕ್ಕೆ ಪಡೆದ ಬಳಿಕ ಅಧಿಕಾರಿಗಳ ವಿಚಾರಣೆ ವೇಳೆ, ದೇವಲಡ್ಕೆರೆ ಗ್ರಾಮಲೆಕ್ಕಿಗರು 05 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದೆ. ಸೂಕ್ತ ದಾಖಲೆಗಳು, ಆಧಾರಗಳಿಲ್ಲದೇ ಮ್ಯುಟೇಶನ್ ಮಾಡಲಾಗಿದೆ. ವ್ಯಾಪ್ತಿಯ ಅರಣ್ಯಾಧಿಕಾರಿಗಳ ವರದಿಯಲ್ಲಿ ಒಟ್ಟು 14 ಎಕರೆ 36 ಗುಂಟೆ ಒತ್ತುವರಿ ಆಗಿದೆ ಎಂದು ತಿಳಿದು ಬಂದಿದೆ.

ಅರಣ್ಯ ಜತೆ ಇನ್ನಿತರ ಪ್ರದೇಶಗಳ ಬದಲಾವಣೆ

ವಿಶಾಲವಾದ ರೆಸಾರ್ಟ್‌ ನಿರ್ಮಿಸಲು ಅರಣ್ಯವನ್ನು ನಾಶ ಮಾಡಲಾಗಿದೆ. ರಸ್ತೆಗಳು, ಈಜುಕೊಳ, ಟ್ಯಾಂಕ್ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಇತರ ಸೌಕರ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ ಎಂದು ಆರ್ಎಫ್ಒ ಅಧಿಕಾರಿ ಹೇಳಿದರು. ಅರಣ್ಯ ಪ್ರದೇಶ ಮಾತ್ರವಲ್ಲದೇ ಚರಂಡಿ ಜಾಲಗಳು ಮತ್ತು ಜೌಗು ಪ್ರದೇಶಗಳನ್ನು ಸಹ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಅರಣ್ಯ ಇಲಾಖೆಯು ಕಳೆದ ವರ್ಷ 2022ರ ಜುಲೈ 26 ರಂದು ಹೊರಡಿಸಿದ್ದ ಆದೇಶದಲ್ಲಿ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳ, ಹಾಸನ, 14 ಎಕರೆ 36 ಗುಂಟೆ, ಕಂದಾಯ ಇಲಾಖೆಯಿಂದ ಅಕ್ರಮವಾಗಿ ಮಂಜೂರಾದ 05 ಎಕರೆ ಸೇರಿ ಒಟ್ಟು 14 ಎಕರೆ 36 ಗುಂಟೆ ಭೂಮಿ ಅತಿಕ್ರಮಣವಾಗಿದೆ. ಸದ್ಯ ರೆಸಾರ್ಟ್ ವಶಪಡಿಸಿಕೊಂಡಿದ್ದು, ಭೂಮಿ ತೆರವಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ.

ಭೂಮಿ ತೆರವು ಮಾಡಿ ಮೊದಲಿನಂತೆ ಯಥಾಸ್ಥಿತಿಗೆ ತರಲು ಉಂಟಾಗುವ ವೆಚ್ಚವನ್ನು ಒತ್ತುವರಿದಾರರೇ ಭರಿಸುವಂತೆ ತಿಳಿಸಲಾಗಿದೆ. ಭೂಮಿಯನ್ನು ವಶಕ್ಕೆ ಪಡೆದು ಅತಿಕ್ರಮಣವನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅತಿಕ್ರಮಣದಾರರಿಗೆ ಸಾಕಷ್ಟು ಸಮಯ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+