ಗಣರಾಜ್ಯೋತ್ಸವ ವೇದಿಕೆಯಲ್ಲೇ ರೇವಣ್ಣ, ಪ್ರೀತಮ್ ಗೌಡ ಕಿತ್ತಾಟ
ಹಾಸನ, ಜನವರಿ 26: ಸಚಿವ ಎಚ್‌ಡಿ ರೇವಣ್ಣ ಹಾಗೂ ಬಿಜೆಪಿ ಶಾಸಕ ಪ್ರೀತಮ್ ಗೌಡ ವೇದಿಕೆಯಲ್ಲೇ ಕಿತ್ತಾಡಿಕೊಂಡ ಪ್ರಸಂಗ ಹಾಸನದಲ್ಲಿ ಶನಿವಾರ ನಡೆದಿದೆ.
ಹಾಸನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದ ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿ ಬಳಿಕ ತಾರಕ್ಕೇರಿ ಕೆಲವು ಸಮಯಗಳ ಕಾಲ ಆತಂಕ ಸೃಷ್ಟಿಮಾಡಿತ್ತು.
ಧ್ವಜಾರೋಹಣದ ಬಳಿಕ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಬಿಜೆಪಿ ಶಾಸಕ ಪ್ರೀತಮ್ ಗೌಡ ಹಾಗೂ ಜೆಡಿಎಸ್ ಸಚಿವ ಹೆಚ್.ಡಿ.ರೇವಣ್ಣ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಬಿ.ಎಂ ರಸ್ತೆ ಒತ್ತುವರಿ ವಿಚಾರಕ್ಕೆ ಶುರುವಾದ ಮಾತಿನ ಚಕಮಕಿ ತಾರಕಕ್ಕೇ ಏರಿಬಿಟ್ಟಿತು.

ಬಿ.ಎಂ ರಸ್ತೆಯ ಕಟ್ಟಡಗಳ ವಿಚಾರವಾಗಿ ರೇವಣ್ಣ ಬಳಿ ಶಾಸಕ ಪ್ರೀತಮ್ ಗೌಡ ಪ್ರಶ್ನೆ ಮಾಡಿದರು. ಅದಕ್ಕೆ ಸಚಿವ ರೇವಣ್ಣ ನಂದೇನಿಲ್ಲಾ ಡಿಸಿ ಮೇಡಂ ಕೇಳು ಎಂದು ಹೇಳಿದರು. ಆದರೆ ಶಾಸಕರು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಕ್ಕೆ ರೇವಣ್ಣ ಕೋಪ ಮಾಡಿಕೊಂಡರು.











Click it and Unblock the Notifications