ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ: ಸಕಲೇಶಪುರದಲ್ಲಿ ಮುಂದುವರೆದ ಕಾಡಾನೆ ಆರ್ಭಟ; ಜನರಿಗೆ ಆತಂಕ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಅಕ್ಟೋಬರ್‌, 14; ಹಾಸನ ಜಿಲ್ಲೆ ಮಲೆನಾಡು ಭಾಗ ಸಕಲೇಶಪುರ ಪಟ್ಟಣದಲ್ಲಿ ಮತ್ತೆ ಕಾಡಾನೆಗಳ ಉಪಟಳ ಮುಂದುವರೆದಿದೆ. ಹಾಸನ ಪಟ್ಟಣ ಪ್ರದೇಶಕ್ಕೆ ಕಾಡಾನೆ ಆಗಮಿಸಿದ್ದು, ಸಕಲೇಶಪುರ ಪಟ್ಟಣ,‌ ಸದಾಶಿವನಗರ, ಪ್ರೇಮ ನಗರದಲ್ಲೂ ಅಟ್ಟಹಾಸ ಮೆರೆದಿದೆ.

ರಾತ್ರೋರಾತ್ರಿ ಕಾಡಾನೆಯನ್ನು ಕಂಡು ಅಲ್ಲಿನ ಸ್ಥಳೀಯರು ಗಾಬರಿಯಿಂದ ಮನೆಯೊಳಗೆ ಓಡಿಹೋಗಿದ್ದಾರೆ. ಈ ಭಾಗರದಲ್ಲಿ ಪದೇ ಪದೇ ಕಾಡಾನೆಗಳ ಉಪಟಳ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ರೊಚ್ಚಿಗೆದ್ದ ಜನ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಕ್ಷಣಗನೆ: 13 ದಿನಗಳ ದರ್ಶನದ ಸಮಯ ಇಲ್ಲಿದೆ ನೋಡಿಹಾಸನಾಂಬೆ ದರ್ಶನಕ್ಕೆ ಕ್ಷಣಗನೆ: 13 ದಿನಗಳ ದರ್ಶನದ ಸಮಯ ಇಲ್ಲಿದೆ ನೋಡಿ

ಹಾಸನದಲ್ಲಿ ತಪ್ಪದ ಕಾಡಾನೆಗಳ ದಾಳಿ

ಈ ಹಿಂದೆಯೂ ಸಹ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿತ್ತು. ಇದರಿಂದ ಹಳ್ಳಿಗಳ ಜನರು ಕಂಗಾಲಾಗಿದ್ದರು. ಕಾಡಾನೆಯಿಂದ ಶಾಶ್ವತ ನೆಮ್ಮದಿ ಕೊಡಿಸುವಂತೆ ಹಳ್ಳಿ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

Elephant attack in continued in Sakleshpur, People worried

ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ಹಲಸುಲಿಗೆ, ಮಠಸಾಗರ, ಉದೇವಾರ, ಜಾನೇಕೆರೆ, ಸತ್ತುಗಾಲ್, ಹಳೇ ಬೇಲೂರು, ಸುಂಡೇಕೆರೆ ಗ್ರಾಮಗಳು ಸದಾ ಕಾಡಾನೆ ದಾಳಿಗೆ ಸಿಲುಕುವ ಪ್ರದೇಶಗಳಾಗಿವೆ. ಮಳೆಗಾಲ ಪ್ರಾರಂಭ ಆಯಿತೆಂದರೆ ಸಾಕು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ರಾತ್ರಿ ಆಗುತ್ತಿದ್ದಂತೆ ಮನೆ ಬಾಗಿಲಿಗೆ ಬರುವ ಕಾಡಾನೆಗಳು, ಬೆಳೆದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದವು. ಇದರಿಂದ ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ ಎಂದು ಮಲೆನಾಡಿನ ರೈತರು ಅಳಲು ತೋಡಿಕೊಂಡಿದ್ದರು.

ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ

ಹಾಸನದಲ್ಲಿ ಕಾಡಾನೆ ದಾಳಿ ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಕಾಡಾನೆಗಳು ಬರೀ ರೈತರ ಬೆಳೆಗಳನ್ನು ನಾಶ ಮಾಡುವುದಲ್ಲದೆ, ಇದರ ಜೊತೆಗೆ ಮನುಷ್ಯರ ಪ್ರಾಣಗಳನ್ನು ತೆಗೆದುಕೊಂಡ ಉದಾಹರಣೆಗಳು ಇವೆ. ಇದರಿಂದ ರೊಚ್ಚಿಗೆದ್ದ ಜನರು ಅರಣ್ಯ ಇಲಾಖೆ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಆದರೆ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಕಾಡಾನೆಗಳ ದಾಳಿಯಿಂದ ಮುಕ್ತಿ ಕೊಡಿಸಿ ಎಂದರೂ ಕೂಡ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿವೆ. ಅರಣ್ಯ ಇಲಾಖೆಯವರು ಆನೆಗಳು ಯಾರನ್ನಾದರೂ ಬಲಿ ತೆಗೆದುಕೊಂಡಾಗ ಮಾತ್ರ ಸ್ಥಳಕ್ಕೆ ಆಗಮಿಸಿ ಪರಿಹಾರದ ಭರವಸೆಯನ್ನು ನೀಡುತ್ತಾರೆ. ಆದರೆ ಪರಿಹಾರದ ಭರವಸೆ ನೀಡಿ ಹೋದವರು ಮತ್ತೆ ಸ್ಥಳಕ್ಕೆ ಅವರು ಆಗಮಿಸುವುದೇ ಪ್ರಾಣಾಪಾಯ ಸಂಭವಿಸಿದಾಗ ಮಾತ್ರ ಎಂದು ಜನರು ಕಿಡಿಕಾರಿದ್ದಾರೆ.

English summary
Elephant attacks continue in Sakleshpur of Hassan district, people worried. locals expressed outrage against forest department, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X