ಹಾಸನ ಪೆನ್‌ಡ್ರೈವ್ ಪ್ರಕರಣ: ಡಿಕೆ ಬ್ರದರ್ಸ್ ಸ್ಫೋಟಕ ಹೇಳಿಕೆ-ಮಾಹಿತಿ, ವಿವರ ತಿಳಿಯಿರಿ
ಹಾಸನ, ಏಪ್ರಿಲ್, 26: ಲೋಕಸಭಾ ಚುನಾವಣೆ ಹೊತ್ತಲೇ ಹಾಸನ ಪೆನ್‌ಡ್ರೈವ್ ಪ್ರಕರಣ ಇಡೀ ರಾಜಕೀಯ ವಲಯಲದಲ್ಲಿ ಭಾರೀ ಚರ್ಚೆಯನ್ನು ಹುಟ್ಟಾಕಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನು ಹೇಳಿದ್ದಾರೆ ಎಂದು ಇಲ್ಲಿ ಗಮನಿಸಿ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಾ.ಮಂಜುನಾಥ್ ಅವರಿಗೆ ಕೆಲಸ ಇಲ್ಲ, ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಡೆದಿರುವ ಘಟನೆ ನಾಚಿಕೆಗೆಡಿನ ಘಟನೆಯಾಗಿದ್ದು, ಈ ಬಗ್ಗೆ ಮಾತನಾಡಲಿ. ಹೆಣ್ಣುಮಕ್ಕಳು, ತಾಯಂದಿರು, ಸಹೋದರಿಯರು, ಇಡೀ ಸಮಾಜಕ್ಕೆ ಕಳಂಕ ತರುವ ಕೆಲಸ ಇದಾಗಿದೆ. ನಿಜವಾಗಲೂ ಕರ್ನಾಟಕ, ಕನ್ನಡಿರ ಬಗ್ಗೆ ಗೌರವ ಇರುವುದಾದರೆ ಹಾಸನದಲ್ಲಿ ಅವರನ್ನು ಕಣದಿಂದ ಕೆಳಗಿಸಬೇಕೆಂದು ವಾಗ್ದಾಳಿ ನಡೆಸಿದರು.

"ಹಾಸನದ ಘಟನೆಯ ವಿಚಾರಗಳನ್ನು ಈಗಾಗಲೇ ನಾವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆ ಮಾಡಿದ್ದೇವೆ. ಇದು ಅವರ ಕುಟುಂಬಕ್ಕೆ ನಾಚಿಕೆ ಆಗುವ ವಿಚಾರವಾಗಿದೆ. ಸುಮ್ಮನೆ ದಾರಿ ತಪ್ಪಿಸುವುದನ್ನು ಬಿಟ್ಟು ಹಾಗೂ ಕರ್ನಾಟಕ, ಕನ್ನಡದ ಹೆಣ್ಣುಮಕ್ಕಳ ಬಗ್ಗೆ ಗೌರವ ಇರೋದೇ ಆದರೆ ಮೊದಲು ಕಣದಿಂದ ಹಿಂದೆ ಸರಿಯಲು ಹೇಳಬೇಕು ಅವರಿಗೆ. ಬೇರೆಯವರ ಮೇಲೆ ಆರೋಪ ಮಾಡೋದು ಅಷ್ಟೇ ಅಲ್ಲ ಮುಖ್ಯ. ನಮ್ಮ ನುಡಿ, ನಡೆ ಕೂಡ ಮುಖ್ಯ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೂಪನ್ ಹಂಚಿಕೆ ಮಾಡಿದ್ದಾರೆ ಎಂಬ ಡಾ.ಮಂಜುನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಕೂಪನ್ ಹಂಚಿಕೆ ಮಾಡಿರುವುದನ್ನು ನಾನು ಹೇಳಲೇ ಎಂದು ಮಂಜುನಾಥ್ ಅವರ ಭಾವಚಿತ್ರವುಳ್ಳ ಕಾರ್ಡ್ ತೋರಿಸಿ ತಿರುಗೇಟು ನೀಡಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಇದರ ಬಗ್ಗೆ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಡಾ.ಮಂಜುನಾಥ್, ರೇವಣ್ಣ ಅವರನ್ನು ಕೇಳಿ. ನಾನು ಉತ್ತರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಮತಗಟ್ಟೆಗೆ ಕಹಳೆ ಹಿಡಿದು ಬಂದ ಕಲಾವಿದ: ಚಾಮರಾಜನಗರದ ಡಾ.ಬಿ.ಆರ್ ಅಂಬೇಡ್ಕರ್ ಬಡಾವಣೆಯಲ್ಲಿರುವ 14ನೇ ವಾರ್ಡ್‌ನ ಮತಗಟ್ಟೆಗೆ ಜಾನಪದ ಧಿರಿಸು ಧರಿಸಿ, ಕಹಳೆ ಹಿಡಿದು ಬಂದು ಕಲಾವಿದ ರವಿಚಂದ್ರಪ್ರಸಾದ್ ಮತದಾನ ಮಾಡಿದರು.
ಚಾಮರಾಜನಗರ ಜಾನಪದ ನಾಡು ಅಂಥಲೇ ಹೆಸರುವಾಸಿಯಾಗಿದ್ದು, ಈ ಹಿನ್ನೆಲೆ ಪ್ರಜಾಪ್ರಭುತ್ವದ ಹಬ್ಬವನ್ನು ಜಾನಪದ ಕಲಾವಿದನಾಗಿ ಮತದಾನದಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.












Click it and Unblock the Notifications