Get Updates
Get notified of breaking news, exclusive insights, and must-see stories!

ಹಾಸನಾಂಬೆ ಜಾತ್ರೆ ಮುಕ್ತಾಯ; ಹುಂಡಿ ಸಂಗ್ರಹ ಕುಸಿತ!

ಹಾಸನ, ನವೆಂಬರ್ 17 : ಹಾಸನದ ಅಧಿದೇವತೆ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಅಂತ್ಯಗೊಂಡಿದೆ. ನವೆಂಬರ್ 16ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗಿದ್ದು, ಇನ್ನುಒಂದು ವರ್ಷ ದೇವಿಯ ದರ್ಶನ ಭಕ್ತರಿಗೆ ಸಿಗುವುದಿಲ್ಲ.

ಹಾಸನಾಂಬೆ ಜಾತ್ರೆ ಅಂತ್ಯವಾದ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ಕಾಣಿಕೆ ಹುಂಡಿಯ ಎಣಿಕೆ ನಡೆಯಿತು. ಕೋವಿಡ್ ಕಾರಣದಿಂದಾಗಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುವುದು ನಿಷೇಧಿಸಲಾಗಿತ್ತು.

ಈ ವರ್ಷ ಹಾಸನಾಂಬೆ ದೇವಾಲಯದಲ್ಲಿ 21,34,052 ರೂ. ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಕಾಣಿಕೆ ಸಂಗ್ರಹದಲ್ಲಿ ಭಾರಿ ಕುಸಿತವಾಗಿದೆ.

Despite Fall In Hundi Collection At Hasanamba Temple

2019ರಲ್ಲಿ ವಿಶೇಷ ದರ್ಶನ, ಲಾಡು ಮಾರಾಟ ಎಲ್ಲವೂ ಸೇರಿ ಮೂರುವರೆ ಕೋಟಿ ಆದಾಯ ಬಂದಿತ್ತು. ಈ ಬಾರಿ ಭಕ್ತರಿಗೆ ನಿರ್ಬಂಧ ವಿಧಿಸಿದ್ದ ಹಿನ್ನಲೆಯಲ್ಲಿ ಆದಾಯದಲ್ಲಿ ಕುಸಿತ ಕಂಡುಬಂದಿದೆ.

ಸಿದ್ದೇಶ್ವರ ದೇವಾಲಯದಲ್ಲಿ 1,45,720 ರೂ. ಕಾಣಿಕೆ ಸಂಗ್ರಹವಾಗಿದ್ದು, ಒಟ್ಟು ದೇವಾಲಯಕ್ಕೆ 22,79,772 ರೂ. ಆದಾಯ ಬಂದಿದೆ. ಕಳೆದ ಬಾರಿ ಹಾಸನಾಂಬೆ ದೇವಾಲಯದಲ್ಲಿಯೇ 1,31,24,424 ರೂ. ಹುಂಡಿ ಸಂಗ್ರಹವಾಗಿತ್ತು.

ವಿಚಿತ್ರ ಬೇಡಿಕೆಗಳು : ಹಾಸನಾಂಬೆ ದರ್ಶನಕ್ಕೆ ಬಂದ ಜನರು ವಿಚಿತ್ರ ಬೇಡಿಕೆಗಳನ್ನು ದೇವಿಗೆ ಸಲ್ಲಿಕೆ ಮಾಡಿದ್ದಾರೆ. "ಈ ದೇಶದಿಂದ ಕೊರೊನಾ ರೋಗ ಓಡಿ ಹೋಗಲಿ. ನಮ್ಮ ದೇಶದ ರೈತರಿಗೆ ಮುಖ್ಯವಾಗಿ ನಮ್ಮ ರಾಜ್ಯದ ರೈತರಿಗೆ ಒಳ್ಳೆಯದಾಗಲಿ. ನಮ್ಮ ದೇಶದ ಸೈನಿಕರ ಆಯಸ್ಸು ವೃದ್ಧಿಸಿ ಹೋರಾಟದಲ್ಲಿ ಗೆಲುವು ಕಾಣುವಂತೆ ಮಾಡಮ್ಮ" ಎಂದು ಬೇಡಿಕೆ ಇಡಲಾಗಿದೆ.

"ಹಾಸನಾಂಬ ತಾಯಿ ನಮ್ಮ ಕಷ್ಟಗಳು ಪರಿಹಾರ ಮಾಡಿ ನನ್ನ ಗಂಡ ಮಕ್ಕಳು ಮತ್ತು ನನ್ನ ಆರೋಗ್ಯ ಕಾಪಾಡಿ ತಾಯಿ. ನನ್ನ ಕೆಲಸ ಶಾಶ್ವತವಾಗಲಿ. ನಮ್ಮನ್ನು ಕಾಪಾಡಿ ತಾಯಿ"ಎಂದು ಕಾಣಿಕೆ ಹಾಕಿ ಹರಕೆ ಹೊತ್ತು ಚೀಟಿ ಹಾಕಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+