• search
  • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿಳಿ ಶಾಸ್ತ್ರ ಕೇಳಿದ ಸಿ.ಟಿ. ರವಿ: ತಿಥಿ ಊಟಕ್ಕೆ ಹೋಗದಂತೆ ಸಲಹೆ

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಅಕ್ಟೋಬರ್ 26: ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದಲ್ಲಿ ದೇವಿ ದರ್ಶನಕ್ಕೆ ಬುಧವಾರ ಅಂತಿಮ ದಿನವಾಗಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕುಟುಂಬ ಸಮೇತ ಭೇಟಿ ನೀಡಿ ದರ್ಶನ ಪಡೆದುಕೊಂಡರು.

ಹಾಸನಾಂಬೆಯ ದರ್ಶನ ಮುಗಿಸಿ ವಾಪಸ್ಸು ಹೋಗುವಾಗ ದೇವಾಲಯದ ಬಳಿ ಕುಳಿತಿದ್ದ ಗಿಳಿ ಶಾಸ್ತ್ರ ಕೇಳಿ ಗಮನ ಸೆಳೆದರು. ಮೊದಲಿಗೆ ಶಾಸ್ತ್ರ ಹೇಳುವವನ ಹೆಸರು, ಊರು, ಎಷ್ಟು ವರ್ಷದಿಂದ ಈ ವೃತ್ತಿಯನ್ನು ಮಾಡುತ್ತಿದ್ದೀರಾ ಎಂದು ವಿಚಾರಿಸಿಕೊಂಡ ಸಿಟಿ ರವಿ ನಂತರ ಕೈ ತೋರಿಸಿ ಶಾಸ್ತ್ರ ಕೇಳಿದರು.

ಹಾಸನಾಂಬೆ ದರ್ಶನಕ್ಕೆ ಅ.26 ಕೊನೆಯ ದಿನ: ಹರಿದು ಬಂದ ಭಕ್ತ ಸಾಗರಹಾಸನಾಂಬೆ ದರ್ಶನಕ್ಕೆ ಅ.26 ಕೊನೆಯ ದಿನ: ಹರಿದು ಬಂದ ಭಕ್ತ ಸಾಗರ

ಕೈ ರೇಖೆ ನೋಡಿದ ಶಾಸ್ತ್ರ ಹೇಳಿದ ವ್ಯಕ್ತ, " ನಿಮ್ಮ ಕೈ ರೇಖೆ ಚೆನ್ನಾಗಿದೆ, ಎಲ್ಲೇ ಹೋದರೂ ಅನ್ನ ಸಿಗುತ್ತದೆ. ಬಟ್ಟೆ ಅನ್ನಕ್ಕೆ ನಿಮಗೆ ತೊಂದರೆಯಿಲ್ಲ. ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಆ ವ್ಯಕ್ತಿ ಭವಿಷ್ಯ ಹೇಳಿದ್ದಾರೆ.

ಹಾಗೆ ಮುಂದುವರಿಸಿ ನಿಮ್ಮ ಆರೋಗ್ಯ ಹಾಗೂ ನೀವು ಮಾಡುವ ಕೆಲದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ, ದಾನಧರ್ಮ ಮಾಡುವುದರಲ್ಲಿ ಉದಾರತೆ ಬೇಡ, ತಿಥಿ ಊಟ ಮಾಡೋದಕ್ಕೆ ಹೋಗಬೇಡಿ ಎಂದು ಸಿಟಿ ರವಿಗೆ ಗಿಳಿ ಶಾಸ್ತ್ರ ಹೇಳುವ ವ್ಯಕ್ತಿ ತಿಳಿಸಿದ್ದಾರೆ. ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದ ವೇಳೆ ಸಿ.ಟಿ.ರವಿಗೆ ಸ್ಥಳೀಯ ಶಾಸಕ ಪ್ರೀತಂಗೌಡ ಸಾಥ್ ನೀಡಿದರು

Kodi Mutt Shree : ದಾರಿ ದಾರಿಯಲ್ಲೇ ಬಿದ್ದು ಸಾಯುವರು ಜನ; ಕೋಡಿ ಶ್ರೀ ಆಘಾತಕಾರಿ ಭವಿಷ್ಯ!Kodi Mutt Shree : ದಾರಿ ದಾರಿಯಲ್ಲೇ ಬಿದ್ದು ಸಾಯುವರು ಜನ; ಕೋಡಿ ಶ್ರೀ ಆಘಾತಕಾರಿ ಭವಿಷ್ಯ!

ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು, ಪ್ರೀತಂಗೌಡ್ರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂಎಲ್‌ಎ ಆಗಿ ಇಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ಮಂತ್ರಿಯಾದರೆ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿದ್ದಾರೆ. ಮಂತ್ರಿ ಆಗುವ ಅವಕಾಶವಿದ್ದರೆ ಶುಭ ಹಾರೈಸುತ್ತೇನೆ, ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಶಾಸಕ ಪ್ರೀತಂಗೌಡರ ಪರ ಬ್ಯಾಟ್ ಬೀಸಿದರು.

ಯಾವಾಗಲೂ ಲಾಸ್ಟ್ ಓವರ್‌ನಲ್ಲಿ ಸಿಕ್ಸರ್ ಹೊಡೆಯೋರು, ಫೋರ್ ಹೊಡೆಯೋರು ಬೇಕಾಗುತ್ತದೆ. ಡಿಫೆನ್ಸ್ ಆಡುವುದಕ್ಕೆ ಆಗಲ್ಲ, ಆರಂಭದಲ್ಲಿ ಕ್ರಿಕೆಟ್‌ನಲ್ಲಿ ಡಿಫೆನ್ಸ್ ಆಡಿಕೊಂಡು ಹೋಗಬಹುದು ಸ್ಲಾಗ್ ಓವರ್‌ನಲ್ಲ ಫೋರ್‌ ಸಿಕ್ಸರ್ ಹೊಡೆಯಬೇಕಾಗುತ್ತದೆ. ತಂಡ ಗೆಲ್ಲಬೇಕು ಅಂದಾಗ ಡಿಫೆನ್ಸ್‌ ಆಡೋರನ್ನ ಕಡೆಗೆ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್‌ನಲ್ಲಿ ಕಳ್ಸಲ್ಲ, ಕಡೆಗೆ ಕಳ್ಸೋದು ಫೋರು, ಸಿಕ್ಸರ್ ಹೊಡೆಯೋರನ್ನ, ಈಗ ಸಂಪುಟ ಪುನರ್ ರಚನೆ ಅಂತಾ ಆದರೆ ಇರುವ ಆರೇಳು ತಿಂಗಳಲ್ಲಿ ಫೋರು, ಸಿಕ್ಸರ್ ಹೊಡೆದು ಪಕ್ಷವನ್ನು ಮತ್ತೆ ಗೆಲ್ಲಿಸಿಕೊಂಡು ಬರುವವರಿಗೆ ಅವಕಾಶ ಸಿಗಬೇಕು ಎಂದರು.

CT Ravi Gets Parrot Astrology near Hasanamba Temple in Hassan

ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಯಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನುವ ಹಾಗೆ ವಿಪಕ್ಷದವರು ಆಡುತ್ತಿದ್ದಾರೆ. ಅವರಿಗೆ ಮೀಸಲಾತಿ ಹೆಚ್ಚಳ ಮಾಡಿದೇ ಇದ್ದಾಗ ಮಾತು ಕೊಟ್ಟಿದ್ರಿ ಮಾಡ್ಲಿಲಾ ಎನ್ನುತ್ತಿದ್ದರು, ಮಾಡಿದ ಮೇಲೆ ಇನ್ನೊಂದು ಹೊಸ ರೀತಿಯ ವರಸೆ ತೆಗೆದಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನೋದು ಇದರಿಂದ ಅರ್ಥ ಆಗುತ್ತದೆ ಎಂದರು.

English summary
BJP National Chief secretary CT Ravi gets Gili Shastra or Parrot Astrology near Hasanabe Temple in Hassan on Wednesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X