ಹಾಸನ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ

Posted By:
Subscribe to Oneindia Kannada

ಹಾಸನ, ಜನವರಿ 04: ನಿನ್ನೆ ರಾಮನಗರ ಜಿಲ್ಲೆಯಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೇವೇಗೌಡರ ಪ್ರಾಬಲ್ಯದ ಹಾಸನಕ್ಕೆ ಕಾಲಿಟ್ಟಿದ್ದಾರೆ.

ಇಂದು ಹಾಸನದಲ್ಲಿ ನವಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಅವರು ಇಲ್ಲಿ ಕೋಟ್ಯಾಂತರ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನಿಡಿದ್ದಾರೆ.

ರಾಮನಗರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು

ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು, ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಿದ್ದು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರವು ಹಾಸನ ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಗಮನ ಸೆಳೆಯಲಿದ್ದಾರೆ.

ಇದಲ್ಲದೆ ದೇವೇಗೌಡ, ಕುಮಾರಸ್ವಾಮಿ ಅವರ ಮೇಲೆಯೂ ಸಿದ್ದರಾಮಯ್ಯ ಅವರು ಹರಿಹಾಯುವ ಸೂಚನೆ ಇದ್ದು, ಬಿಜೆಪಿಯ ಕೋಮುವಾದಿತನದ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರ ಹಾಸನ ಜಿಲ್ಲೆಗೆ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ..

ನೀರು ಪೂರೈಸಲು 117 ಕೋಟಿ ಅನುದಾನ

ನೀರು ಪೂರೈಸಲು 117 ಕೋಟಿ ಅನುದಾನ

ಹಾಸನದ ಹೊರವಲಯದಲ್ಲಿ ಅತ್ಯಾಧುನಿಕವಾದ ಸುಸಜ್ಜಿತ ಬಡಾವಣೆಯನ್ನು ನಿರ್ಮಿಸಿ ಸುಮಾರು 6335 ಕ್ಕೂ ಅಧಿಕ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು 270 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಸನ ನಗರಕ್ಕೆ ನೀರು ಪೂರೈಸುವ ಅಮೃತ್ ಯೋಜನೆ ಬಹುತೇಕ ಪೂರ್ಣಗೊಳ್ಳುತ್ತಿದ್ದು ಇದಕ್ಕಾಗಿ 117 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

530 ಗ್ರಾಮಗಳಿಗೆ ನೀರು

530 ಗ್ರಾಮಗಳಿಗೆ ನೀರು

26 ಕೋಟಿ ರೂಪಾಯಿ ವೆಚ್ಚದಲ್ಲಿ ಅರಸೀಕೆರೆ ತಾಲ್ಲೂಕಿನ 70 ಗ್ರಾಮಗಳಲ್ಲಿ ಯಗಚಿ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆ ಪೂರ್ಣಗೊಂಡಿದೆ. ಅರಸೀಕೆರೆ ತಾಲ್ಲೂಕಿನ 530 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು 254.32 ಕೋಟಿ ರೂಪಾಯಿ ಯೋಜನೆ ರೂಪುಗೊಂಡಿದೆ.

2000 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ

2000 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ

ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಳೆದ ಐದು ವರ್ಷಗಳಲ್ಲಿ ಸುಮಾರು 100 ಕೋಟಿಗೂ ಅಧಿಕ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ, ಅಣೆಕಟ್ಟೆ ನಿರ್ಮಾಣ, ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎತ್ತಿನಹಳ್ಳ ಯೋಜನೆ ಕಾಮಗಾರಿ ಸಕಲೇಶಪುರ ತಾಲ್ಲೂಕಿನಲ್ಲಿ ಚುರುಕಿನಿಂದ ಸಾಗಿದ್ದು ಈಗಾಗಲೇ ಸುಮಾರು 2000 ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ, ಪೈಪ್‍ಲೈನ್ ಅಳವಡಿಕೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

2959 ಕೃಷಿ ಹೊಂಡ ನಿರ್ಮಾಣ

2959 ಕೃಷಿ ಹೊಂಡ ನಿರ್ಮಾಣ

ಸಂಕಷ್ಟದಲ್ಲಿರುವ ರೈತರ ಹಿತಕಾಯುವ ಸಲುವಾಗಿ ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿ ರೈತರು ಮಾಡಿದ 50 ಸಾವಿರ ರೂಪಾಯಿವರೆಗಿನ ಸಾಲಮನ್ನಾದಿಂದ ಹಾಸನ ಜಿಲ್ಲೆಯ 1.15 ಲಕ್ಷ ರೈತರಿಗೆ ಅನುಕೂಲ, 395 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ 36 ಕೋಟಿ ರೂಪಾಯಿ ವೆಚ್ಚ 122 ಪಾಲಿ ಹೌಸ್ ಹಾಗೂ 2959 ಕೃಷಿ ಹೊಂಡಗಳ ನಿರ್ಮಾಣ. ಜಿಲ್ಲೆಯಲ್ಲಿ 8 ಕೃಷಿ ಯಂತ್ರಧಾರೆಗಳ ಸ್ಥಾಪನೆ.

159 ಕೋಟಿ ವೆಚ್ಚದಲ್ಲಿ ರಸ್ತೆ

159 ಕೋಟಿ ವೆಚ್ಚದಲ್ಲಿ ರಸ್ತೆ

ನಗರಾಭಿವೃದ್ಧಿ: ಹಾಸನ ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳು ಕಳೆದ 5 ವರ್ಷಗಳಲ್ಲಿ ಎಸ್.ಎಫ್.ಸಿ ಮುಕ್ತ ನಿಧಿಯಲ್ಲಿ 41.83 ಕೋಟಿ ರೂಪಾಯಿ ವೆಚ್ಚದಲ್ಲಿ 127 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನಗರೋತ್ಥಾನ 2 ಹಾಗೂ 3ನೇ ಹಂತದ ಯೋಜನೆಗಳಿಗೆ 159 ಕೋಟಿ ವೆಚ್ಚ ನಿಗಧಿ ಪಡಿಸಿದ್ದು ಈಗಾಗಲೇ 61.91 ಕೋಟಿ ರೂಪಾಯಿ ವೆಚ್ಚದಲ್ಲಿ 163 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದೆ.

140 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ

140 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ

500 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲಾ ಆಧುನಿಕರಣ (0 ಕಿ.ಮೀ. ನಿಂದ 72ರ ವರೆಗೆ) ರೂ: 560 ಕಾಮಗಾರಿ ಕೈಗೊಳ್ಳಲಾಗಿದ್ದು ಹೇಮಾವತಿ ಬಲದಂಡೆ ನಾಲೆಯಡಿಯಲ್ಲಿ ಬರುವ ವಿತರಣಾ ನಾಲೆ 35ರ ಆಧುನಿಕರಣಕ್ಕೆ ರೂ: 19.95 ಕೋಟಿ ವೆಚ್ಚ ಮಾಡಲಾಗಿದೆ. ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 64.2 ಕೋಟಿ ರೂಪಾಯಿ ವೆಚ್ಚದಲ್ಲಿ 139.85 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ ಮತ್ತು ವಿಶೇಷ ಅಭಿವೃದ್ಧಿ ಯೋಜನೆಯಡಿ 10.27 ಕೋಟಿ ರೂಪಾಯಿ ವೆಚ್ಚದಲ್ಲಿ 32.36 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ.

ಒಳ ಚರಂಡಿ ನಿರ್ಮಾಣ

ಒಳ ಚರಂಡಿ ನಿರ್ಮಾಣ

ರಾಜ್ಯ ಹೆದ್ದಾರಿ ಅಭಿವೃದ್ಧಿ 2ನೇ ಹಂತದ ಯೋಜನೆಯಡಿ 226 ಕೋಟಿ ರೂಪಾಯಿ ವೆಚ್ಚದಲ್ಲಿ 272.46 ಕಿ.ಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು ಒಟ್ಟಾರೆ 10 ಸೇತುವೆಗಳ ನಿರ್ಮಾಣ ಮಾಡಲಾಗಿದೆ. 4272 ಲಕ್ಷ ರೂಪಾಯಿ ವೆಚ್ಚದಲ್ಲಿ ಹೇಮಾವತಿ ನದಿಯಿಂದ ಚನ್ನರಾಯಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೊಳಿಸಲಾಗಿದ್ದು ಅರಕಲಗೂಡು ಪಟ್ಟಣದಲ್ಲಿ 18 ಕೋಟಿ ರೂ ವೆಚ್ಚದಲ್ಲಿ ಒಳಚರಂಡಿ ಯೋಜನೆ ಜಾರಿಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah inaugurating crores worth development programs in Hassan today. Here is the list of development programs given by govt to Hassan district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ