ಅರಕಲಗೂಡಿನಲ್ಲಿ ಮೈನವಿರೇಳಿಸುವ ಜೋಡೆತ್ತು ಓಟ ಸ್ಫರ್ಧೆ: ಸಂಭ್ರಮಿಸಿದ ರೈತರು
ಹಾಸನ, ಜನವರಿ 2: ಹೊಸ ವರ್ಷದ ಪ್ರಯುಕ್ತ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಎರಡು ದಿನಗಳ ಕಾಲ ಜೋಡೆತ್ತಿನ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಹಾಸನ ಜಿಲ್ಲೆ ಸೇರಿದಂತೆ ದೂರದ ಹೊರ ಜಿಲ್ಲೆಗಳಿಂದ ರೈತರು ತಮ್ಮ ದುಬಾರಿ ಬೆಲೆಯ ಎತ್ತುಗಳ ಜೊತೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಎತ್ತಿನಗಾಡಿ ಓಟದ ಸ್ಪರ್ಧೆ ನೆರೆದಿದ್ದವರನ್ನು ರೋಮಾಂಚಕಗೊಳಿಸಿತು. ಎರಡು ಟ್ರಾಕ್‌ಗಳಲ್ಲಿ ವೇಗವಾಗಿ ಎತ್ತುಗಳು ಓಡುವುದನ್ನು ನೋಡಿದವರ ಎದೆ ಜಲ್ ಎನಿಸಿತು.
ಸ್ಪರ್ಧೆಯಲ್ಲಿ ವಿಜೇತರಾದ ಎತ್ತುಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿ ನೀಡಲಾಯಿತು. ಸ್ಪರ್ಧೆಯಲ್ಲಿ ದುಬಾರಿ ಬೆಲೆಯ ಎತ್ತುಗಳನ್ನು ಪ್ರದರ್ಶನ ಮಾಡಲಾಯಿತು. ಜೋಡೆತ್ತುಗಳ ಆಕರ್ಷಕ ಮೈಕಟ್ಟು ಕಂಡು ರೈತರು ಸಂತಸಪಟ್ಟರು.

ಹಳ್ಳಿಕಾರ್ ತಳಿಯ ಜೋಡೆತ್ತುಗಳ ಎತ್ತಿನಗಾಡಿ ಓಟ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಇತರೆ ಕ್ರೀಡೆಗಳಿಗೆ ಜನರು ಹೆಚ್ಚು ಆಕರ್ಷಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ದಿವಾಕರ್ ಅರಕಲಗೂಡು ಪಟ್ಟಣದ ತಾಲೂಕು ಕ್ರೀಡಾಂಗದಲ್ಲಿ ಎರಡು ದಿನಗಳ ಗ್ರಾಮೀಣ ಸೊಗಡಿನ ಹಳ್ಳಿಕಾರ್ ತಳಿಯ ಜೋಡೆತ್ತುಗಳ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದರು. ಎರಡು ಟ್ರಾಕ್‌ಗಳಲ್ಲಿ ಟೈಯರ್ ಗಾಡಿಗೆ ಎರಡು ಎತ್ತುಗಳನ್ನು ಕಟ್ಟಿ ಕಡಿಮೆ ಸಮಯದಲ್ಲಿ ಗುರಿಮುಟ್ಟಲು ಗಾಡಿಯನ್ನು ಓಡಿಸುತ್ತಿದ್ದ ದೃಶ್ಯ ನಿಜಕ್ಕೂ ಮೈಜುಮ್ಮೆನಿಸಿತು. ಎತ್ತುಗಳ ಓಟದ ವೇಗ ನೋಡಿದ ನೆರೆದಿದ್ದವರು ಶಿಳ್ಳೆ ಚಪ್ಪಾಳೆ ಹೊಡೆದು ಹುರಿದುಂಬಿಸಿದರು.

ರೋಮಾಂಚನಕಾರಿಯಾದ ಬೆಲೆ ಬಾಳುವ ಎತ್ತುಗಳ ಓಟ
ಹಾಸನ, ಚಿಕ್ಕಮಗಳೂರು, ಧಾರವಾಡ, ಕಡೂರು, ಹರಿಹರ, ಮಂಡ್ಯ, ಕೆ.ಆರ್.ನಗರ, ರಾಣಿಬೆನ್ನೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 56 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಟಾಟಾ ಏಸ್ ವಾಹನ ಹಾಗೂ ಇತರೆ ವಾಹನಗಳಲ್ಲಿ ಎತ್ತುಗಳನ್ನು ಕರೆತರಲಾಗಿತ್ತು. ಎರಡು ಲಕ್ಷದಿಂದ ಏಳು ಲಕ್ಷದವರೆಗೆ ಬೆಲೆ ಬಾಳುವ ಎತ್ತುಗಳು ಓಟ ರೋಮಾಂಚನಕಾರಿಯಾಗಿತ್ತು. ಎತ್ತುಗಳನ್ನು ಗಾಡಿಗೆ ಕಟ್ಟಿ ಸ್ಪರ್ಧೆಗೆ ಬಿಡಲು ಅದರ ಮಾಲೀಕರು ಹರಸಾಹಸಪಡಬೇಕಾಯಿತು. ಕೆಲವು ಜನರ ಕೂಗಾಟ, ಶಿಳ್ಳೆ, ಚಪ್ಪಾಳೆ ಕೇಳಿ ತೀರ್ಪುಗಾರರು ರೇಸ್‌ಗೆ ಬಾವುಟ ತೋರುವ ಮುನ್ನವೇ ಎಲ್ಲರನ್ನೂ ಎಳೆದುಕೊಂಡು ನುಗ್ಗಿತ್ತಿದ್ದವು. ಅವುಗಳನ್ನು ಹಿಡಿದು ನಿಲ್ಲಿಸಿ ವಾಪಾಸ್ ಗಾಡಿಗೆ ಕಟ್ಟಿ ಸ್ಪರ್ಧೆಗೆ ಇಳಿಯುವಷ್ಟರಲ್ಲಿ ಅದರ ಮಾಲೀಕರು ಹೈರಾಣಾದರು. ಕೆಲವು ಎತ್ತುಗಳು ನೆಟ್ಟಿದ್ದ ಮರದ ಕಂಬಗಳ ಮೇಲೆಯೇ ನುಗ್ಗಿದವು.

ಜೋಡೆತ್ತುಗಳ ನಡುವೆ ಸಖತ್ ಪೈಪೋಟಿ
ಹಲವು ಜಿಲ್ಲೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ ಎತ್ತುಗಳಿಗೆ ಇದೇ ಮೊದಲಬಾರಿಗೆ ರೇಸ್‌ನಲ್ಲಿ ಭಾಗವಹಿಸಿದ್ದ ಜೋಡೆತ್ತುಗಳು ಸಕತ್ ಪೈಪೋಟಿ ನೀಡಿದವು. ಒಂದೆರಡು ಸೆಕೆಂಡ್‌ಗಳಲ್ಲಿ ಕೆಲವು ಜೋಡೆತ್ತುಗಳು ಸೋಲು ಅನುಭವಿಸಿದವರು. ಮೊದಲ ಸುತ್ತು, ಎರಡನೇ ಸುತ್ತಿನಲ್ಲಿ ಸೋತ ಎತ್ತುಗಳು ಬಹುಮಾನ ಪಡೆಯುವಲ್ಲಿ ವಿಫಲವಾದರು ಜನರಿಗೆ ಮನರಂಜನೆ ನೀಡಿದವು. ಇನ್ನೂ ಮೂರು ಸುತ್ತುಗಳಲ್ಲಿ ಜಯಗಳಿಗೆ ಅಂತಿಮವಾಗಿ ಬಹುಮಾನ ಪಡೆದ ಎತ್ತುಗಳ ಮಾಲೀಕರು ಹಿರಿಹಿರಿ ಹಿಗ್ಗಿದರು.

ಜೋಡೆತ್ತು ಓಟ ನೋಡಿ ಹುಚ್ಚೆದ್ದು ಕುಣಿದ ರೈತರು
ಮೊದಲನೆ ಸ್ಥಾನ ಪಡೆದ ಜೋಡೆತ್ತುಗಳಿಗೆ ಐವತ್ತು ಸಾವಿರ ನಗದು ಹಾಗೂ ಟ್ರೋಫಿ, ಎರಡನೇ ಸ್ಥಾನ ಪಡೆದ ಜೋಡೆತ್ತುಗಳಿಗೆ ನಲವತ್ತು ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ಎತ್ತುಗಳಿಗೆ ಮೂವತ್ತು ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕು ಹಾಗೂ ಐದನೇ ಸ್ಥಾನ ಪಡೆದ ಜೋಡೆತ್ತುಗಳಿಗೆ ಇಪ್ಪತ್ತು ಹಾಗೂ ಹತ್ತು ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಇಂತಹ ಕ್ರೀಡೆಗಳನ್ನು ಆಯೋಜಿಸಿ ಕ್ರೀಡೆಗಳನ್ನು ಉಳಿಸಬೇಕೆಂದು ಸ್ಪರ್ಧಿಗಳು ಹಾಗೂ ರೈತರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ವಿವಿಧೆಡೆ ಎತ್ತಿನಗಾಡಿ ಓಟದ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ಆದರೆ ರೈತರು ದುಬಾರಿ ಹಣ ನೀಡಿ ಸಾಕಿರುವ ಎತ್ತುಗಳನ್ನು ರೇಸ್‌ಗೆ ಕರೆತಂದು ತಾವೇ ಗಾಡಿ ಓಡಿಸಿದ್ದು ಮಾತ್ರ ನಿಜಕ್ಕೂ ನೋಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications