PM Narendra Modi: ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್, JDS ಅಲ್ಲ: ಮೋದಿ
ಹಾಸನ, ಏಪ್ರಿಲ್, 30: ವಿಧಾನಸಭೆ ಚುನಾವಣೆ ಹಿನ್ನೆಲೆ ಹಾಸನ ಜಿಲ್ಲೆಯ ಬೇಲೂರಿಗೆ ಭೇಟಿ ನೀಡಿದ ನರೇಂದ್ರ ಮೋದಿ ಅವರು ಇಲ್ಲಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ಸಾಂಸ್ಕೃತಿಕ ಸಂಪ್ರದಾಯವನ್ನು ಗೌರವಿಸಿ ಗುರುತಿಸುತ್ತಿದೆ. ಆದರೆ ಕಾಂಗ್ರೆಸ್ ಯಾವತ್ತೂ ಕರ್ನಾಟಕದ ಸಾಂಸ್ಕೃತಿಕ ಬೆಳವಣಿಗೆಗೆ ಸಹಾಕರಿ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ ದೇಶದಲ್ಲೇ ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡಲು ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದರು.
ಜೊತೆಗೆ ಬೇಲೂರು ಚನ್ನಕೇಶವ, ಹಳೇಬೀಡು ಹೊಯ್ಸಳ ದೇವಾಲಯಗಳನ್ನು ಯುನೇಸ್ಕೊ ಪಟ್ಟಿಗೆ ಸೇರಿಸಲು ಬಿಜೆಪಿ ಯತ್ನಿಸಿದೆ. ಕಾಂಗ್ರೆಸ್ ಯಾವತ್ತೂ ಅಭಿವೃದ್ಧಿಯ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಎಲ್ಲರೂ ಮತದಾನ ಮಾಡುವ ಮೂಲಕ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.

ಇದೇ ವೇಳೆ ಜನರಿಗೆ ಹೇಳಿ ಅವರ ಮೊಬೈಲ್ ಲೈಟ್ ಆನ್ ಮಾಡಿಸಿದರು. ಸಾವಿರಾರು ಕಾರ್ಯಕರ್ತರು ಲೈಟ್ ಆನ್ ಮಾಡುವ ಮೂಲಕ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸಿದರು. ಇದೇ ಖುಷಿಯಲ್ಲಿ ನರೇಂದ್ರ ಮೋದಿ ಅವರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಕೂಗಿ ಗಮನ ಸೆಳೆದಿದ್ದಾರೆ.
ಬೇಲೂರು ತಾಲೂಕಿನ ಇಬ್ಬೀಡಿನಲ್ಲಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಮೋದಿ, ಹೊಯ್ಸಳರ ನಾಡು ಬೇಲೂರಿನ ಸಹೋದರ, ಸಹೋರಿಯರಿಗೆ ಸ್ವಾಗತ ಎಂದು ಹೇಳಿದ್ದಾರೆ. ಆಗ ಕಾರ್ಯಕರ್ತರು ಈ ಬಾರಿಯ ನಿರ್ಧಾರ ಬಿಜೆಪಿ ಎಂದು ಕೂಗಿದರು. ನಂತರ ಇದೇ ಜೋಷ್ ಮುಂದುವರೆಯಬೇಕು, ಹಾಸನದಲ್ಲಿ ಕಮಲ ಅರಳಬೇಕು ಎಂದು ಮೋದಿ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿರೋಧಿಯಂತೆ ನಾಡಕ ಮಾಡುತ್ತಿವೆ. 2018ರ ಚುನಾವಣೆಯಲ್ಲಿ ಅವರ ಭಾಷಣ ನೋಡಿದರೆ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೋರಿಕೆ ಜಗಳ ನಡೆಯುತ್ತಿರುತ್ತವೆ. ವಿಧಾನಸಭೆಯಲ್ಲಿ ಆ ಎರಡು ಪಕ್ಷಗಳು ಒಂದಾಗಿರುತ್ತವೆ, ಕಾಂಗ್ರೆಸ್‌ಗೆ ಹಾಕುವ ಮತ ಜೆಡಿಎಸ್‌ಗೆ ಹಾಕಿದಂತೆ. ಕಾಂಗ್ರೆಸ್‌ಗೆ ವೋಟ್ ಹಾಕಿದರೆ ರಿವರ್ಸ್ ಗೇರಿಗೆ ಹಾಕಿದಂತೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 85% ಲೂಟಿ ಮಾಡುತ್ತಿತ್ತು. ಬಿಜೆಪಿಯ ಸರ್ಕಾದ ಆಡಳಿತದಿಂದ ಕರ್ನಾಟಕದಲ್ಲಿ ಹೂಡಿಕೆಗೆ ಅನುಕೂಲವಾಗಿದೆ. ಅಲ್ಲದೆ ದೇಶದಲ್ಲೇ ಮಾದರಿ ರಾಜ್ಯವಾಗಲು ಬಿಜೆಪಿ ಸಹಕಾರಿ ಆಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಇನ್ನೊಂದು ವಿಚಿತ್ರ ಸನ್ನಿಹಿತವಿದೆ. ಹಾಗೆಯೆ ಕಾಂಗ್ರೆಸ್ ಜೆಡಿಎಸ್ ಪರಿವಾರದ ಮುಂದೆ ಮಂಡಿಯೂರಿದವರಿಗೆ ಮಣೆ ಹಾಕುತ್ತದೆ ಎಂದರು.
ಜೆಡಿಎಸ್ ಕೂಡ ಒಂದು ಪರಿವಾರದಲ್ಲಿ ಅಧಿಕಾರ ಇಟ್ಟುಕೊಂಡಿದೆ. ಅವರಿಗೆ ನಾವು ಹೇಗೆ ಅಧಿಕಾರ ಮಾಡುತ್ತೇವೆ. ರಾಜ್ಯಕ್ಕೆ ಏನು ಕೊಡುತ್ತೇವೆ ಎನ್ನುವ ಯೋಚನೆಯೇ ಇಲ್ಲದಂತಾಗಿದೆ. ಆದರೆ ಬಿಜೆಪಿ ರಾಜ್ಯದ ಜನರನ್ನೇ ಪರಿವಾರ ಎಂದುಕೊಂಡು ಕೆಲಸ ಮಾಡುತ್ತಿದೆ. ಬಿಜೆಪಿ ಎಲ್ಲಾ ಜನರಿಗೂ ಅನೇಕ ಯೋಜನೆಗಳನ್ನು ತಂದು ಕಾಳಜಿ ತೋರಿದೆ. ಆದರೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರಸ್ ಜೆಡಿಎಸ್ ಪರಿವಾರದ ರಾಜಕೀಯ ಮಾಡಿದೆ. ಕಾಂಗ್ರೆಸ್ ತುಷ್ಟೀಕರಣ ಅನುಸರಿಸಿದರೆ ಬಿಜೆಪಿ ಸಂತುಷ್ಟೀಕರಣ ನೀತಿ ಅನುಸರಿಸಿದೆ ಎಂದರು.
ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ನಮ್ಮ ಪಕ್ಷ ಸ್ವಾಭಿಮಾನ, ಗೌರವವನ್ನು ಹೆಚ್ಚಿಸಿದೆ. ಹಾಸನ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
ಕಾಂಗ್ರೆಸ್ ಸರ್ಕಾರ ಸಾಲಮನ್ನಾದ ಹೆಸರಿನಲ್ಲಿ ರೈತರಿಗೆ ವಂಚಿಸುತ್ತಿತ್ತು. ಆದರೆ ನಮ್ಮ ಕೇಂದ್ರ ಸರ್ಕಾರ ನೀಡುವ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಜೋಡಿಸಿದೆ. ಇದು ಡಬಲ್ ಇಂಜಿನ್ ಸರ್ಕಾರದ ರೈತರ ಹಿತಾಸಕ್ತಿ ಕಾಪಾಡುತ್ತಿದೆ ಎಂದರು. ಈ ಮೂಲಕ ರೈತರ ಆದಾಯವನ್ನ ಹೆಚ್ಚಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತಿದೆ.
ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರಿಯಾದ ಬೆಲೆ ಏರಿಕೆ ಆಗಿದೆ. ಯೂರಿಯಾ ಸಬ್ಸೀಡಿಗೆ ನಮ್ಮ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿದೆ. ಈ ಮೂಲಕ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯ ಆಗಿಸಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಕರ್ನಾಟಕದಲ್ಲಿ ಅನೇಕ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರ ಇರದೇ ಇದ್ದಿದ್ದರೆ ಇಷ್ಟೊಂದು ಕೆಲಸಗಳು ಆಗುತ್ತಿರಲಿಲ್ಲ ಎಂದರು.












Click it and Unblock the Notifications