ಹಾಸನ ಜಿಲ್ಲೆಯ ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹576.22 ಕೋಟಿ ಮಂಜೂರು-ಮಾಹಿತಿ
ಹಾಸನ , ಮಾರ್ಚ್, 15: ರಾಜ್ಯದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇನ್ನು ಇದೀಗ ಹಾಸನ ಜಿಲ್ಲೆಯ ಎನ್‌ಎಚ್-373ರ ಯೆಡೇಗೌಡನಹಳ್ಳಿಯಿಂದ ಅರ್ಜುನಹಳ್ಳಿ ಭಾಗದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 576.22 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಹಾಗಾದರೆ ಎಷ್ಟು ಕಿಲೋ ಮೀಟರ್ ರಸ್ತೆ ನಿರ್ಮಾಣ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
22.3 ಕಿಲೋ ಮೀಟರ್ ಉದ್ದದ ಈ ರಸ್ತೆಯು ಪ್ರಸಿದ್ಧ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಬೇಲೂರು, ಹಳೇಬೀಡು ಮತ್ತು ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಹೀಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲಿದ್ದು, ಈ ಮೂಲಕ ಇದರಿಂದ ಹೆಚ್ಚಿನ ಸಂಪರ್ಕ ಸಾಧಿಸುವುದಲ್ಲದೇ, ಆರ್ಥಿಕತೆಯಲ್ಲಿ ಹೆಚ್ಚಿನ ಬೆಳೆವಣಿಗೆಯನ್ನು ಕಾಣಬಹುದಾಗಿದೆ.

ಎಕ್ಸಿಟ್ ಟೋಲ್ ನಿರ್ಮಾಣಕ್ಕೆ ಅನುಮತಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಟೋಲ್ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗಲಾಟೆಗಳು ಆಗಿವೆ. ನಂತರ ಹಲವು ಬದಲಾವಣೆಗಳು ಕೂಡ ಆಗಿವೆ. ಹೀಗೆ ಒಂದಲ್ಲ ಒಂದು ವಿಚಾರಲ್ಲಿ ಈ ಹೆದ್ದಾರಿ ಸುದ್ದಿಯಾಗುತ್ತಲೇ ಇದೆ. ಇದೀಗ ಎಕ್ಸ್‌ಪ್ರೆಸ್ ವೇನಲ್ಲಿ ಹೆದ್ದಾರಿ ಬಳಸಿದಷ್ಟೇ ಟೋಲ್ ಶುಲ್ಕ ನೀಡುವ ಎಕ್ಸಿಟ್ ಮತ್ತು ಎಂಟ್ರಿ ಟೋಲ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಾಗಾದರೆ ಇದಕ್ಕೆ ಬಿಡುಗಡೆ ಮಾಡಿದ ಹಣ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೆದ್ದಾರಿಯಲ್ಲಿ ಎಕ್ಸಿಟ್ ಮತ್ತು ಎಂಟ್ರಿ ಟೋಲ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಹಾಗಾದರೆ ಈ ವ್ಯವಸ್ಥೆ ಎಲ್ಲೆಲ್ಲಿ ಜಾರಿಯಾಗಲಿದೆ ಹಾಗೂ ಇದಕ್ಕೆ ಪ್ರತಿಕ್ರಿಯೆಗಳು ಯಾವ ರೀತಿ ವ್ಯಕ್ತವಾಗುತ್ತಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಶೀಘ್ರವೇ ಪ್ರವೇಶ ಮತ್ತು ನಿರ್ಗಮನ ಟೋಲ್ ನಿರ್ಮಾಣ ಕಾಮಗಾರಿ ಆರಂಭ ಆಗಲಿದೆ. ಇದೀಗ ಎಕ್ಸ್‌ಪ್ರೆಸ್‌ವೇನಲ್ಲಿ ಓಪನ್ ಟೋಲ್ ಮಾದರಿಯಲ್ಲಿ ಹೆದ್ದಾರಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಒಂದು ಕಿಲೋಮೀಟರ್ ಹೆದ್ದಾರಿ ಬಳಸಿದರೂ ಪೂರ್ಣ ಬಳಕೆಯ ಶುಲ್ಕ ಕೊಡಬೇಕಿದ್ದು, ಇದರ ವಿರುದ್ಧ ಸಾರ್ವಜನಿಕರು ಕೆಂಡಕಾರುತ್ತಿದ್ದಾರೆ.
ಎಕ್ಸ್‌ಪ್ರೆಸ್‌ವೇನ ಪ್ರಮುಖ ನಗರಗಳಿಗೆ ವ್ಯವಸ್ಥಿತವಾದ ಪ್ರವೇಶ ಹಾಗೂ ನಿರ್ಗಮನದ ವ್ಯವಸ್ಥೆಯಿಲ್ಲ. ಈ ಸಮಸ್ಯೆಯನ್ನು ನಿವಾರಣೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತ್ಯೇಕ ಯೋಜನೆ ಪ್ರಸ್ತಾವನೆ ಸಲ್ಲಿಸಿದ್ದು, ಇದೀಗ ಇದಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ.
ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿರುವ ಬಿಡದಿ, ರಾಮನಗರ, ಚನ್ನಟಪಟ್ಟಣ, ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ನಗರಗಳ ಬಳಿ ಪ್ರವೇಶ ಮತ್ತು ನಿರ್ಗಮನ ದ್ವಾರದ ನಿರ್ಮಾಣಕ್ಕೆ ಯೋಜನೆಯು ಅವಕಾಶ ಕಲ್ಪಿಸಿಕೊಡಲಿದೆ.
ಕುಂಬಳಗೂಡು ಟೋಲ್ ಪ್ಲಾಜಾ, ಬಿಡದಿ, ರಾಮನಗರದ ಕೆಂಪೇಗೌಡನದೊಡ್ಡಿ, ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಅಥವಾ ಮತ್ತೀಕೆರೆ, ಶೆಟ್ಟಿಹಳ್ಳಿ, ಮದ್ದೂರಿನ ನಿಡಘಟ್ಟ, ಮಂಡ್ಯ ಬೈಪಾಸ್ ಟೋಲ್, ಶ್ರೀರಂಗಪಟ್ಟಣ ಟೋಲ್ ಸ್ಥಳದಲ್ಲಿ ವಾಹನ ಹೆದ್ದಾರಿಗೆ ಪ್ರವೇಶ ಪಡೆಯುವ ಅವಕಾಶ ಮಾಡಿಕೊಡುವ ನಿರ್ಧಾರ ಮಾಡಿದೆ.












Click it and Unblock the Notifications